ಬೇರೆ ಯಾರನ್ನೋ ಅಮ್ಮನೆಂದು ಅಪ್ಪಿಕೊಂಡ ಕರ್ಣ! ಹೆಂಡ್ತಿ ಮುಖ ಗೊತ್ತಿರೋ ಅಪ್ಪ ರಮೇಶ್‌ಗೆ ಈ ಮೋಸ ತಿಳಿಯಲ್ವಾ?

Published : Oct 08, 2026, 01:06 PM IST

Karna serial latest twist: ಧಾರಾವಾಹಿಯಲ್ಲಿ ಕರ್ಣನಿಗೆ ಅಮ್ಮ ಯಾರೆಂಬ ಸತ್ಯ ತಿಳಿಯುವ ಹೊತ್ತಿಗೆ ಬಿಗ್ ಟ್ವಿಸ್ಟ್ ಎದುರಾಗಿದೆ. ವೈರಲ್ ಶೂಟಿಂಗ್ ವಿಡಿಯೋದಲ್ಲಿ ಕರ್ಣ ಬೇರೊಬ್ಬ ಮಹಿಳೆಯನ್ನು ಅಮ್ಮ ಎಂದು ಅಪ್ಪಿಕೊಂಡಿರುವುದು ಕಂಡುಬಂದಿದೆ.

PREV
15
ಸಿಕ್ಕಿತು ಕಥೆಯ ದಿಕ್ಕನ್ನೇ ಬದಲಿಸುವ ಮುನ್ಸೂಚನೆ

ಸಿಕ್ಕಿತು ಕಥೆಯ ದಿಕ್ಕನ್ನೇ ಬದಲಿಸುವ ಮುನ್ಸೂಚನೆ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕರ್ಣ'ದಲ್ಲಿ ಇದೀಗ ಮಹತ್ವದ ತಿರುವು ಎದುರಾಗಿದೆ. ಕಥೆಯ ಪ್ರಕಾರ, ಕರ್ಣನಿಗೆ ತನ್ನ ಅಮ್ಮ 'ಸೀತಾ' ಯಾರೆಂದು ತಿಳಿಯುವ ಸಮಯ ಹತ್ತಿರವಾಗಿದ್ದು, ವೀಕ್ಷಕರಲ್ಲಿ ಕುತೂಹಲ ಮುಗಿಲು ಮುಟ್ಟಿದೆ. ಆದರೆ, ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಶೂಟಿಂಗ್ ವಿಡಿಯೋವೊಂದು ಕಥೆಯ ದಿಕ್ಕನ್ನೇ ಬದಲಿಸುವ ಮುನ್ಸೂಚನೆ ನೀಡಿದೆ.

25
ಬೇರೊಬ್ಬ ಮಹಿಳೆಯನ್ನೇ ಅಮ್ಮ ಎಂದು ನಂಬಿದ ಕರ್ಣ!

ಬೇರೊಬ್ಬ ಮಹಿಳೆಯನ್ನೇ ಅಮ್ಮ ಎಂದು ನಂಬಿದ ಕರ್ಣ!
ವೈರಲ್ ಆಗಿರುವ ತೆರೆಮರೆಯ ಶೂಟಿಂಗ್ (BTS) ವಿಡಿಯೋದಲ್ಲಿ, ಕರ್ಣನ ಅಸಲಿ ತಾಯಿಯ ಬದಲು ಬೇರೆ ಯಾರನ್ನೋ 'ಸೀತಾ' ಎಂದು ಕರ್ಣನ ಮುಂದೆ ನಿಲ್ಲಿಸಲಾಗಿದೆ. ಕರ್ಣ ಕೂಡ ಆಕೆಯನ್ನೇ ತನ್ನ ಹೆತ್ತ ತಾಯಿ ಎಂದು ನಂಬಿ, ಕಣ್ಣೀರು ಹಾಕುತ್ತಾ ಭಾವನಾತ್ಮಕವಾಗಿ ಅಪ್ಪಿಕೊಂಡಿದ್ದಾನೆ. ಇದನ್ನು ನೋಡಿದರೆ ನಿರ್ದೇಶಕರು ಸದ್ಯಕ್ಕಂತೂ ಕರ್ಣನಿಗೆ ಅಸಲಿ ತಾಯಿಯ ಪ್ರೀತಿ ಸಿಗದಂತೆ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ.

35
'ಗೀತಾ' ಸೀರಿಯಲ್ ನಟಿಯ ಎಂಟ್ರಿ?

'ಗೀತಾ' ಸೀರಿಯಲ್ ನಟಿಯ ಎಂಟ್ರಿ?
ವಿಡಿಯೋದಲ್ಲಿ ಕಾಣಿಸಿಕೊಂಡಿರುವ ನಕಲಿ ತಾಯಿಯ ಪಾತ್ರಧಾರಿ ಬೇರಾರೂ ಅಲ್ಲ, ಈ ಹಿಂದೆ ಜನಪ್ರಿಯ 'ಗೀತಾ' ಧಾರಾವಾಹಿಯಲ್ಲಿ ನಾಯಕ ವಿಜಯ್ ಅವರ ಅಮ್ಮನಾಗಿ ನಟಿಸಿದ್ದ ಖ್ಯಾತ ಕಲಾವಿದೆ ಎಂದು ನೆಟ್ಟಿಗರು ಊಹೆ ಮಾಡುತ್ತಿದ್ದಾರೆ. ಅವರೇ ಇಲ್ಲಿ ಕರ್ಣನಿಗೆ ನಕಲಿ ತಾಯಿಯಾಗಿ ಎಂಟ್ರಿ ಕೊಟ್ಟು ನಂಬಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

45
ಇಂದಿನ ಮಹಾಸಂಚಿಕೆಯಲ್ಲಿ ಬಯಲು

ಇಂದಿನ ಮಹಾಸಂಚಿಕೆಯಲ್ಲಿ ಬಯಲು
ಇನ್ನೊಂದೆಡೆ, ಸೀತಾ ಎಂಬ ತನ್ನ ನಿಜವಾದ ಗುರುತನ್ನು ಮರೆಮಾಚಿ 'ಭುವನೇಶ್ವರಿ' ಎಂಬ ಹೆಸರಿನಲ್ಲಿ ಓಡಾಡುತ್ತಿರುವ ಕರ್ಣನ ಅಸಲಿ ತಾಯಿಗೆ ಅಪಘಾತ ಸಂಭವಿಸುವ ಸಾಧ್ಯತೆಯಿದೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ವಿಶೇಷವೆಂದರೆ, ಅದೇ ಶೂಟಿಂಗ್ ಜಾಗದಲ್ಲಿ ಭುವನೇಶ್ವರಿ ಹಾಗೂ ಕರ್ಣನ ಅತ್ತೆ ತಾರಾ ಕೂಡ ನಿಂತಿದ್ದಾರೆ. ಹೀಗಾಗಿ, ಅಸಲಿ ತಾಯಿ ಸತ್ಯ ಹೇಳಲು ಬರುವಷ್ಟರಲ್ಲೇ ಆಕೆಗೆ ಅಪಘಾತವಾಗಲಿದೆಯೇ ಅಥವಾ ತಾರಾಳ ಕುತಂತ್ರದಿಂದ ಕರ್ಣ ಬೇರೊಬ್ಬಳನ್ನೇ ಅಮ್ಮ ಎಂದು ಒಪ್ಪಿಕೊಳ್ಳಲಿದ್ದಾನಾ ಎಂಬುದು ಇಂದಿನ ಮಹಾಸಂಚಿಕೆಯಲ್ಲಿ ಬಯಲಾಗಬೇಕಿದೆ.

55
ರಮೇಶ್‌ಗೆ ಗೊತ್ತಾಗಲ್ವಾ?

ರಮೇಶ್‌ಗೆ ಗೊತ್ತಾಗಲ್ವಾ?
ಇನ್ನೊಂದೆಡೆ, ಈ ಟ್ವಿಸ್ಟ್ ನೋಡಿದ ವೀಕ್ಷಕರ ತಲೆಯಲ್ಲಿ ದೊಡ್ಡದೊಂದು ಲಾಜಿಕಲ್ ಪ್ರಶ್ನೆ ಮೂಡಿದೆ. ಕರ್ಣನಿಗೆ ಚಿಕ್ಕವನಿದ್ದಾಗ ಅಮ್ಮ ದೂರವಾಗಿದ್ದರಿಂದ ಆಕೆಯನ್ನು ಗುರುತಿಸಲು ಸಾಧ್ಯವಾಗದಿರಬಹುದು. ಆದರೆ ಕರ್ಣನ ಅಪ್ಪ ರಮೇಶ್‌ಗೆ ತನ್ನ ಹೆಂಡತಿ ಸೀತಾಳ ಮುಖ ಚೆನ್ನಾಗಿ ಗೊತ್ತಿದೆಯಲ್ಲವೇ? ಹಾಗಿರುವಾಗ ಬೇರೊಬ್ಬ ಹೆಣ್ಣುಮಗಳನ್ನು 'ಸೀತಾ' ಎಂದು ಕರೆತಂದರೆ ರಮೇಶ್ ನಂಬಲು ಹೇಗೆ ಸಾಧ್ಯ? ರಮೇಶನ ಕಣ್ಣಿಗೆ ಮಣ್ಣೆರಚುವುದು ಹೇಗೆ? ಅಥವಾ ರಮೇಶನ ಕಣ್ಣುತಪ್ಪಿಸಿ ಕರ್ಣನ ಮುಂದೆ ಮಾತ್ರ ನಡೆಯುತ್ತಿರುವ ನಾಟಕವೋ ಎಂಬ ಕುತೂಹಲ ವೀಕ್ಷಕರಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories