'ಭಾಗ್ಯಲಕ್ಷ್ಮಿ' ಸೀರಿಯಲ್ ಖ್ಯಾತಿಯ ತನ್ವಿ ಪಾತ್ರಧಾರಿ ಅಮೃತಾ ಗೌಡ, ತಮಗಾದ ಒಂದು ಶಾಕಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ಮದುವೆಯೊಂದರಲ್ಲಿ ಊಟ ಮಾಡುವಾಗ ಮಹಿಳೆಯೊಬ್ಬರು ತಮ್ಮನ್ನೇ ಗುರಾಯಿಸುತ್ತಿದ್ದು, ಇದರಿಂದ ತಮಗೆ ಭಯವಾಗಿತ್ತು ಎಂದು ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial)ನಲ್ಲಿ ತನ್ವಿ ಪಾತ್ರದ ಮೂಲಕ ಎಲ್ಲರನ್ನೂ ರಂಜಿಸಿದಾಕೆ ನಟಿ ಅಮೃತಾ ಗೌಡ. ಈಚೆಗಷ್ಟೇ ದ್ವಿತೀಯ ಪಿಯುಸಿ ಮುಂದಿನ ವಿದ್ಯಾಭ್ಯಾಸ ಮಾಡುತ್ತಿರುವ ಅಮೃತಾ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್. ಇದಾಗಲೇ ಸಂದರ್ಶನದಲ್ಲಿ ತನಗೆ ನಟಿಯಾಗುವ ಕನಸು ಇದೆ ಎಂದು ಹೇಳಿಕೊಂಡಿದ್ದಳು. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರೋ ಅಮೃತಾ ಆಗಾಗ್ಗೆ ಫೋಟೋಶೂಟ್, ವಿಡಿಯೋಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾಳೆ. ನಟನೆಯಲ್ಲಿಯೂ ಈಕೆಯದ್ದು ಎತ್ತಿದ ಕೈ.
26
ಅಭಿಮಾನಿಗಳ ಕಾಟ
ಅಷ್ಟಕ್ಕೂ ಸಿನಿಮಾ ಸೆಲೆಬ್ರಿಟಿಗಳು ಹೊರಡೆ ಹೋದಾಗ ಅವರಿಗೆ ಅಭಿಮಾನಿಗಳು ಕೊಡುವ ಕಾಟ ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಹಲವರು ಸ್ಟಾರ್ ತಾರೆಯರು ಬಾಡಿಗಾರ್ಡ್ ನೇಮಕಮಾಡಿಕೊಂಡಿರುತ್ತಾರೆ. ಸೀರಿಯಲ್ ತಾರೆಯರಿಗೂ ಸಕತ್ ಡಿಮಾಂಡ್ ಇರುವ ಕಾರಣ, ಹೋದಲ್ಲಿ, ಬಂದಲ್ಲಿ ಅಭಿಮಾನಿಗಳನ್ನು ನಿಭಾಯಿಸುವುದೇಕಷ್ಟ ಆಗಿಬಿಡುತ್ತದೆ.
36
ಶಾಕಿಂಗ್ ಅನುಭವ
ಅದೇ ರೀತಿಯ ಒಂದು ಅನುಭವವನ್ನು ಹಂಚಿಕೊಂಡಿದ್ದಾಳೆ ಅಮೃತಾ ಗೌಡ. kannada.mojo360 ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಅಮೃತಾ ಅವರು ತನಗಾಗಿರುವ ಶಾಕಿಂಗ್ ಘಟನೆಯನ್ನು ಹಂಚಿಕೊಂಡಿದ್ದಾಳೆ. ಮದುವೆ ಸಮಾರಂಭಕ್ಕೆ ಹೋದಾಗ ಅಲ್ಲಿ ಊಟಕ್ಕೆ ಕುಳಿತುಕೊಂಡಾಗ ತಮ್ಮ ಎದುರಿಗೆ ಕುಳಿತ ಮಹಿಳೆಯೊಬ್ಬರು ತಮ್ಮನ್ನೇ ಗುರಾಯಿಸುತ್ತಿದ್ದುದನ್ನು ನೆನಪಿಸಿಕೊಂಡಿದ್ದಾಳೆ.
ನಾನು ಹೊರಗೆ ಹೋಗುವಾಗ ಸ್ಪೆಕ್ಟ್ ಹಾಕುತ್ತೇನೆ. ಅದಕ್ಕಾಗಿ ಹಲವರಿಗೆ ನಾನು ತನ್ವಿ ಎನ್ನುವುದು ತಿಳಿಯುವುದಿಲ್ಲ. ಆದರೆ ನೋಡಲು ಅದೇ ರೀತಿ ಕಾಣುವ ಕಾರಣದಿಂದ ಹೌದೋ ಅಲ್ವೋ ಅಂತ ಕನ್ಫ್ಯೂಸ್ ಆಗ್ತಾರೆ. ಅದೇ ರೀತಿ ಈ ಆಂಟಿ ಕೂಡ ಊಟ ಮಾಡ್ತಾ ಇದ್ರು. ಆದರೆ ಪ್ಲೇಟ್ ನೋಡುವ ಬದಲು ನನ್ನನ್ನು ಗುರಾಯಿಸುತ್ತಿದ್ದರು. ಆ ಸಮಯದಲ್ಲಿ ನನಗೆ ಶಾಕ್ ಕೂಡ ಆಗೋಯ್ತು ಎಂದಿದ್ದಾರೆ.
56
ಏನೋ ಮಾಡ್ತಾರೆ ಎಂದುಕೊಂಡೆ
ಅವರು ನನಗೆ ಏಕೆ ಹಾಗೆ ಮಾಡ್ತಿದ್ದಾರೆ ಎಂದು ತಿಳಿಯಲಿಲ್ಲ. ಅಮ್ಮನ ಬಳಿನೂ ಹೇಳಿದೆ. ಅವರು ನನಗೆ ಏನೋ ಮಾಡ್ತಾರೆ ಅನ್ನಿಸತ್ತೆ ಎಂದು. ಕೊನೆಗೆ ನಾನೇ ಮುಖ ಮುಚ್ಚಿಕೊಂಡು ಊಟ ಮಾಡತೊಡಗಿದೆ. ಕೊನೆಗೂ ಆ ಆಂಟಿ ನನ್ನನ್ನು ಮಾತನಾಡಿಸಲಿಲ್ಲ. ಆದ್ರೆ ನಂಗೇನೋ ಮಾಡಿ ಬಿಡ್ತಾರೆ ಎನ್ನೋ ಭಯ ಇತ್ತು ಎಂದಿದ್ದಾಳೆ.
66
ಪಿಯುಸಿಯಲ್ಲಿ ಉತ್ತಮ ಅಂಕ
ಇನ್ನು ಈಚೆಗೆ, ಅಮೃತಾ ಸಕತ್ ಸುದ್ದಿಯಾಗಲು ಕಾರಣ, ಆಕೆ ಪಿಯುಸಿಯ ಕಾಮರ್ಸ್ ವಿಭಾಗದಲ್ಲಿ ಶೇಕಡಾ 91 ತೆಗೆದದ್ದರಿಂದ. ಈ ಮೂಲಕ ನಟನೆಯ ಜೊತೆಗೆ ಅಭ್ಯಾಸದಲ್ಲಿಯೂ ಜಾಣೆ ಎನ್ನುವುದನ್ನು ಸಾಬೀತು ಮಾಡಿದ್ದಾಳೆ. ಈಗಿನ ಬಹುತೇಕ ಮಕ್ಕಳು ಶೇಕಡಾ 90ರ ಮೇಲೆ ತೆಗೆಯುವುದು ಸಾಮಾನ್ಯವಾಗಿದೆ. ಆದರೆ ಒಂದೆಡೆ ಶೂಟಿಂಗ್ ಬಿಜಿಯ ನಡುವೆಯೇ, ಇಷ್ಟು ಅಂಕ ಗಳಿಸಿರುವ ಕಾರಣ ತನ್ವಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.