ಸ್ವಂತ ಮನೆ ಕಟ್ಟಿಸಿ ಇದ್ದ ಸ್ವಲ್ಪ ದಿನಕ್ಕೆ ಮಾರಿಬಿಟ್ಟೆ, ಯಾರೊಂದಿಗೂ ಹೇಳಿಕೊಂಡಿಲ್ಲ: ಪಾಪ ಪಾಂಡು ಚಿದಾನಂದ ಭಾವುಕ

First Published | Apr 23, 2024, 2:24 PM IST

ಸದಾ ನಗಿಸುವ ಪಾಂಡು ಜೀವನದಲ್ಲಿ ಯಾರೊಂದಿಗೂ ಹೇಳಿಕೊಳ್ಳದ ನೋವಿದೆ. ಮನೆ ಮಾರಿರುವ ಘಟನೆ ಬಿಚ್ಚಿಟ್ಟಿದ್ದಾರೆ. 

ಪಾಪಾ ಪಾಂಡು ಸೀರಿಯಲ್ ನೋಡುತ್ತಿದ್ದ 90ರ ದಶಕದ ಪ್ರತಿಯೊಬ್ಬರಿಗೂ ಪಾಂಡು ಉರ್ಫ್‌ ಚಿದಾನಂದ ಯಾರೆಂದು ಚೆನ್ನಾಗಿ ಗೊತ್ತಿರುತ್ತದೆ. 

ಚಿದಾನಂದ ರಿಯಲ್ ಹೆಂಡತಿ ಹೆಸರು ಕವಿತಾ. ಇವರು ಮೊದಲು ಭೇಟಿಯಾಗಿದ್ದು ಡಿಸೆಂಬರ್ 22, 1997ರಲ್ಲಿ...ಪ್ರೀತಿಸಿ ಮದುವೆಯಾಗಿದ್ದು ಡಿಸೆಂಬರ್ 22, 1998ರಲ್ಲಿ.

Tap to resize

ಪೋಷಕರು ಈ ಮದುವೆಗೆ ಒಪ್ಪದ ಕಾರಣ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡು ಮದುವೆ ಮಾಡಿಕೊಳ್ಳುತ್ತಾರೆ. ಆಮೇಲೆ ಎಲ್ಲರಿಗೂ ಪಾಂಡು ನಿಜವಾದ ಹೆಂಡತಿ ನಾನೇ ಎಂದು ಹೇಳಿಕೊಂಡು ಓಡಾಡುವ ಪರಿಸ್ಥಿತಿ ಕವಿತಾರದ್ದು.

 'ಸ್ವಂತ ಮನೆ ಕಟ್ಟಿಸಿ ಕವಿತಾಳನ್ನು ಗಾಜಿನ ಗೊಂಬೆ ತರಹ ನೋಡಿಕೊಳ್ತೀನಿ ಎಂದಿದ್ದೆ. ಮನೆ ಕಟ್ಟಿಸಿದೆ ಆದರೆ ಮನೆ ಕಟ್ಟಿಸಿ ಸ್ವಲ್ಪ ದಿನ  ಅಲ್ಲಿದ್ವಿ.

ಆಮೇಲೆ ಮಾರಿಬಿಟ್ಟೆ. ಆ ಸತ್ಯವನ್ನು ಇವತ್ತಿನವರೆಗೂ ಯಾರಿಗೂ ಹೇಳಲು ಆಗದ ಸತ್ಯವಾಗಿ ಉಳಿದು ಬಿಟ್ಟಿದೆ' ಎಂದು ಚಿದಾನಂದ ಭಾವುಕರಾಗುತ್ತಾರೆ. 

ಒಂದು ದಿನ ನನ್ನ ತಾಯಿ ನನ್ನ ಬಳಿ ಬಂದು ನಿನಗೆ ಮದುವೆ  ಮಾಡಬೇಕು ಎಂದರು. ಅವರ ಮಾತುಗಳನ್ನು ಕೇಳಿ ನನಗೆ ಚಳಿ ಜ್ವರ ಬಂದಿತ್ತು. ಯಾಕಂದ್ರೆ  ನಮ್ಮ ಜೀವನದಲ್ಲಿ ಅಷ್ಟೊಂದಯ ಕಷ್ಟಗಳಿತ್ತು. ಮದುವೆ ನಂತರ ಹೇಗೋ ಎಲ್ಲಾ ನಡೆದುಕೊಂಡು ಸಾಗಿತ್ತಿ.

ನಮ್ಮಿಬ್ಬರಿಗೆ ಒಂದು ಚಟ ಇದೆ. ಹೋಟೆಲ್‌ಗೆ ಹೋದರೆ 1 ಮಸಾಲೆ ದೋಸೆ ತೆಗೆದುಕೊಂಡು ಬೈಟು ಮಾಡಿ ತಿನ್ನುತ್ತೀವಿ. ದುಡ್ಡು ಇದ್ದರೂ ಇಬ್ಬರೂ ಬೈಟು ಮಾಡಿಕೊಳ್ಳುತ್ತೀವಿ. 

ಮಸಾಲ ಪುರಿ ತೆಗೆದುಕೊಂಡರೂ ಬೈಟು ಮೆಣಸಿನಕಾಯಿ ಬಜ್ಜಿ ತೆಗೆದುಕೊಂಡರೂ ಬೈಟು. ಇವತ್ತಿಗೂ ಅದು ಮುಂದುವರೆಸಿಕೊಂಡು ಬಂದಿದ್ದೀವಿ' ಎಂದು ಚಿದಾನಂದ ಹೇಳುತ್ತಾರೆ.

Latest Videos

click me!