ಪ್ರೇಮ ಸೌಧದ ಮುಂದೆ ಪತಿ ಜೊತೆ ಲವ್ ಮೂಡಲ್ಲಿ ಸತ್ಯ ಸೀರಿಯಲ್ ನಟಿ ಗೌತಮಿ ಜಾದವ್

Published : Apr 23, 2024, 12:24 PM IST

ಸತ್ಯ ಸೀರಿಯಲ್ ನಲ್ಲಿ ನಾಯಕಿ ಪಾತ್ರದಲ್ಲಿ ನಟಿಸುತ್ತಿರುವ ಗೌತಮಿ ಜಾಧವ್ ತಮ್ಮ ರಿಯಲ್ ಪತ್ನಿ ಅಭಿಷೇಕ್ ಕಾಸರಗೋಡ್ ಜೊತೆಗೆ ಪ್ರೇಮಸೌಧ ತಾಜ್ ಮಹಲ್ ಮುಂದೆ ನಿಂತು ಫೋತೋ ತೆಗೆಸಿಕೊಂಡಿದ್ದಾರೆ.   

PREV
17
ಪ್ರೇಮ ಸೌಧದ ಮುಂದೆ ಪತಿ ಜೊತೆ ಲವ್ ಮೂಡಲ್ಲಿ ಸತ್ಯ ಸೀರಿಯಲ್ ನಟಿ ಗೌತಮಿ ಜಾದವ್

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಸತ್ಯ ಸೀರಿಯಲ್ ನಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ನಟಿಸುವ ಮೂಲಕ ಅಪಾರ ಜನ ಮೆಚ್ಚುಗೆಗೆ ಪಾತ್ರರಾಗಿರುವಂತಹ ನಟಿ ಗೌತಮಿ ಜಾಧವ್ (Gouthami Jadhav). ಗೌತಮಿಯ ಪೊಲೀಸ್ ಖದರ್, ಲುಕ್, ಸ್ಟೈಲ್ ಗೆ ಜನರು ಫಿದಾ ಆಗಿದ್ದಾರೆ. 
 

27

ಅನ್ಯಾಯದ ವಿರುದ್ಧ ಹೋರಾಡುತ್ತಾ, ತಪ್ಪು ಮಾಡಿದೋರು ಯಾವುದೇ ರೌಡಿಯಾಗಿದ್ರೂ, ಯಾವುದೇ ದೊಡ್ಡ ಸ್ಥಾನದಲ್ಲಿದ್ದರೂ ಕ್ಯಾರೇ ಅನ್ನದೇ ಒದ್ದು ಜೈಲಿಗೆ ಹಾಕುವ ಸತ್ಯನನ್ನು ನೋಡಿದ್ರೆ ಇಂತಹ ಪೊಲೀಸ್ ಆಫೀಸರ್ ನಮ್ಮ ಸಮಾಜದಲ್ಲೂ ಇರಬೇಕಿತ್ತು ಎನ್ನುವಷ್ಟು ಅದ್ಭುತವಾಗಿ ನಟಿಸುತ್ತಿದ್ದಾರೆ ಗೌತಮಿ. 
 

37

ಇದೀಗ ನಟಿ ಸೀರಿಯಲ್ ನಿಂದ ಕೊಂಚ ಬ್ರೇಕ್ ಪಡೆದು, ದೆಹಲಿ, ಆಗ್ರಾ, ಆಯೋಧ್ಯೆ ಮೊದಲಾದ ತಾಣಗಳಲ್ಲಿ ಗಂಡನ ಜೊತೆ ಟೂರ್ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಜೊತೆಗೆ ತಮ್ಮ ಟ್ರಾವೆಲ್ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ (social media) ಶೇರ್ ಮಾಡಿದ್ದಾರೆ. 
 

47

ಗೌತಮಿ ಜಾಧವ್ ತಮ್ಮ ಪತಿ ಅಭಿಷೇಕ್ ಕಾಸರಗೋಡ್ (Abhishek Kasaragod) ಜೊತೆ ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ, ಜೊತೆಗೆ ಆಗ್ರಾದ ತಾಜ್ ಮಹಲ್ ಗೆ ಭೇಟಿ ನೀಡಿದ್ದಾರೆ. ತಾಜ್ ಮಹಲ್ ಮುಂದೆ ಪತಿ ಜೊತೆ ವಿವಿಧ ಭಂಗಿಗಳಲ್ಲಿ ಪೋಸ್ ಕೊಡುತ್ತಾ, ಲವ್ ಮೂಡ್‌ಗೆ ಗೌತಮಿ ಜಾರಿದಂತೆ ಕಾಣಿಸುತ್ತಿದೆ. 
 

57

ಇತ್ತೀಚೆಗೆ ಗೌತಮಿ ಪತಿ ಅಭಿಷೇಕ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಸ್ಪೆಷಲ್ ಡೇ ಎಂಜಾಯ್ ಮಾಡಲು ಉತ್ತರ ಭಾರತ ಟ್ರಾವೆಲ್ ಮಾಡಿರುವ ಗೌತಮಿ, ತಾಜ್ ಮಹಲ್ (Taj Mahal) ಮುಂದೆ ತಮ್ಮ ಪತಿಯ ಹೆಗಲ ಮೇಲೆ ತಲೆ ಇಟ್ಟು, ಇಬ್ಬರು ಕೈ ಸೇರಿಸಿ, ಲವ್ ಸಿಂಬಲ್ ಮಾಡಿ ಫೋಟೋ ತೆಗೆಸಿಕೊಳ್ಳುವ ಮೂಲಕ ರೊಮ್ಯಾಂಟಿಕ್ ಮೂಡ್ ಕ್ರಿಯೇಟ್ ಮಾಡಿದ್ದಾರೆ. 
 

67

ಸಿನಿಮಾಟೋಗ್ರಾಫರ್ ಆಗಿರುವ ಅಭಿಷೇಕ್ ಕಾಸರಗೋಡು, ಕಿನಾರೆ ಸಿನಿಮಾ ಶೂಟಿಂಗ್ ವೇಳೆ ನಾಯಕಿಯಾಗಿದ್ದ ಗೌತಮಿ ಜಾಧವ್ ಅವರನ್ನು ಲವ್ ಮಾಡಿದ್ದು, ಬಳಿಕ ಮನೆಯವರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ಪ್ರೀತಿಯನ್ನು ಸದಾ ಜೀವಂತವಾಗಿರಿಸಲು ಈ ಲವ್ ಕಪಲ್ ಪ್ರೇಮಸೌಧದ ಮುಂದೆ ಫೋಟೋ ತೆಗೆಸಿಕೊಂಡಿದ್ದಾರೆ. 
 

77

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಗೌತಮಿ ಹೆಚ್ಚಾಗಿ ತಮ್ಮ ಪತಿ ಜೊತೆಗೆ ಮತ್ತು ಮುದ್ದಾದ ಮೂರು ನಾಯಿಗಳ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈ ಜೋಡಿ ಹೆಚ್ಚಾಗಿ ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡುತ್ತಿತ್ತಾರೆ. 
 

Read more Photos on
click me!

Recommended Stories