ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಹ್ಮಣ್ಯ(Shravani Subramanya) ಧಾರಾವಾಹಿ ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಆಗಿದೆ. ವಿದ್ಯಾಮಂತ್ರಿಗಳ ಮಗಳಾದರೂ ಪರೀಕ್ಷೆಯಲ್ಲಿ ಪಾಸಾಗದೇ, ಅಪ್ಪನ ಪ್ರೀತಿಯಿಂದ ವಂಚಿತೆಯಾಗಿ ಬೆಳೆದ ಶ್ರಾವಣಿ ಮತ್ತು ಎಲ್ಲರ ಪ್ರೀತಿ ಹೊತ್ತುಕೊಂಡು ಬೆಳೆದ ಸುಬ್ರಹ್ಮಣ್ಯನ ಕಥೆ ಇದಾಗಿದೆ.
ಈ ಸಲವಾದರೂ ಪರೀಕ್ಷೆಯಲ್ಲಿ ಪಾಸ್ ಆಗಿ ಅಪ್ಪನಿಗೆ ಖುಷಿ ಕೊಡುತ್ತೇನೆ ಎನ್ನುವ ಆಸೆಯಲ್ಲಿದ್ದ ಶ್ರಾವಣಿಗೆ ಈ ಬಾರಿಯೂ ನಿರಾಸೆ ಯಾಕಂದ್ರೆ ಓದಿದ್ದು ತಲೆಗೆ ಹತ್ತದ ಶ್ರಾವಣಿಗೆ ಪರೀಕ್ಷೆಲಿ ಫೇಲ್ ಆಗಿದ್ದಾಳೆ. ಅದಕ್ಕಾಗಿ ಅವಳಿಗೆ ಮದುವೆ ಮಾಡಿ ಬಿಡೋದು ಎಂದು ಹುಡುಗನನ್ನು ಕರೆಸಿ, ಅವರು ಹೆಂಡತಿ ವಿಚಾರ ಮಾಡಿದ್ದಕ್ಕೆ ಮದುವೆಯನ್ನೆ ಕ್ಯಾನ್ಸಲ್ ಮಾಡಿ, ಮಗಳಿಗೆ ಚೆನ್ನಾಗಿ ಬೈಯ್ದಿದ್ದಾನೆ.
ತಾನು ಸೋತೋದೆ ಎನ್ನುವ ಬೇಜಾರಲ್ಲೇ ಇರೋ ಶ್ರಾವಣಿ ಒಂದು ಕಡೆಯಾದರೆ, ಒಂದಲ್ಲ ಒಂದು ಪ್ಲ್ಯಾನ್ ಮಾಡಿ ಶ್ರಾವಣಿ ಮತ್ತು ತಂದೆ ವೀರೇಂದ್ರ ನಡುವೆ ಅಂತರ ಹೆಚ್ಚಾಗುವಂತೆ ಮಾಡ್ತಿದ್ದಾರೆ ಅತ್ತೆ ವಿಜಯಾಂಬಿಕ. ಅಕ್ಕನ ಮಾತನ್ನು ಅಕ್ಷರಶಃ ಪಾಲಿಸೋ ವೀರೇಂದ್ರ ಮಾತ್ರ, ಆಕೆ ಹೇಳಿದ್ದೆಲ್ಲಾ ನಿಜಾ ಎನ್ನುತ್ತಾ, ಶ್ರಾವಣಿ ಮೇಲಿನ ದ್ವೇಷವನ್ನು ಹೆಚ್ಚಿಸಿಕೊಂಡೆ ಹೋಗುತ್ತಾನೆ.
ಇದೆಲ್ಲಾ ನಡೆದು ಇದೀಗ ಮನೆಯಲ್ಲಿ ಸತ್ಯಾನಾರಾಯಣ ಪೂಜೆಯ ಸಂಭ್ರಮ ಕಳೆ ಕಟ್ಟಿದೆ. ಎಲ್ಲಾ ತಯಾರಿಯೂ ನಡೆದಿದೆ. ಇದರ ಮಧ್ಯೆ ವಿಜಯಾಂಬಿಕ ಬೇಕಂತಲೇ ವೀರೇಂದ್ರನ ಬಳಿ ಹೋಗಿ ಇವತ್ತಿನ ಪೂಜೆಗೆ ಶ್ರಾವಣಿನೂ ಬರಲಿ ಎಂದು ಹೇಳುತ್ತಿದ್ದಂತೆ, ವೀರೇಂದ್ರ ಕೋಪದಿಂದ ಇವತ್ತು ಯಾವುದೇ ಕಾರಣಕ್ಕೂ ಅವಳು ನನ್ನ ಕಣ್ಣಿಗೆ ಕಾಣಿಸಬಾರದು ಎನ್ನುತ್ತಾನೆ.
ಸತ್ಯನಾರಾಯಣ ಪೂಜೆಯ ಸಂಭ್ರಮದ ನಡುವೆ ಮನೆಗೆ ಸೌಧಾಮಿನಿಯ ಆಗಮನವಾಗುತ್ತದೆ. ಅವರು ಬಂದಿದ್ದೇ ತಡ ಹಳೆಯ ಸತ್ಯಗಳೆಲ್ಲ ಬಯಲಾಗುತ್ತೆ ಅನ್ನೋ ಭಯದಲ್ಲಿದ್ದಾಳೆ ವಿಜಯಾಂಬಿಕ ನಡುಗಿ ಹೋಗುತ್ತಾಳೆ. ಅಷ್ಟಕ್ಕೂ ಈ ಸೌಧಾಮಿನಿ ಯಾರೆಂದು ತಿಳಿದು ಬಂದಿಲ್ಲ.
ಇನ್ನು ವಿಶೇಷ ಅತಿಥಿ ಸೌಧಾಮಿನಿ ಪಾತ್ರದಲ್ಲಿ ಜನಪ್ರಿಯ ಗಾಯಕಿ ಅರ್ಚನಾ ಉಡುಪ (Archana Udupa) ನಟಿಸಿದ್ದಾರೆ. ಇವರು ಇದಕ್ಕೂ ಮುನ್ನ ಲಕ್ಷಣ ಸೀರಿಯಲ್ ನಲ್ಲೂ ಸಹ ನಕ್ಷತ್ರ ಯಾರೆಂದು ತಿಳಿಸಿ ಕೊಡುವ ಟ್ವಿಸ್ಟ್ ರಿವೀಲ್ ಮಾಡುವ ವಿಶೇಷ ಪಾತ್ರದಲ್ಲಿ, ಅರ್ಚನಾ ಉಡುಪ ನಟಿಸಿದ್ದರು. ಇದೀಗ ಈ ಧಾರಾವಾಹಿಯಲ್ಲೂ ಕಥೆಯಲ್ಲಿ ಹೊಸ ಟ್ವಿಸ್ಟ್ ತರುವ ಪಾತ್ರದಲ್ಲಿ ಅರ್ಚನಾ ನಟಿಸುತ್ತಿದ್ದಾರೆ.
ಸೌಧಾಮಿನಿ ಮನೆಗೆ ಬರುತ್ತಿದ್ದಂತೆ, ವೀರೇಂದ್ರ ಇಷ್ಟು ವರ್ಷಗಳಾದ ಮೇಲೆ ಸೌಧಾಮಿನಿಗೆ ನಮ್ಮ ಮನೆಯ ಜ್ಞಾಪಕ ಬಂದಿದೆ ಎಂದು ಹೇಳುತ್ತಾ, ಮನೆಗೆ ಸ್ವಾಗತಿಸುತ್ತಾನೆ. ಸೌಧಾಮಿನಿಯನ್ನು ನೋಡಿ ವಿಜಯಾಂಬಿಕ ಬೆದರಿದಂತೆ ಕಾಣಿಸ್ತಿದೆ. ಇನ್ನು ಸೌಧಾಮಿನಿ ಮನೆಗೆ ಬಂದವರೇ ಯಾರೂ ನನ್ನ ನಂದಿನಿಯ ಮಗಳು, ಇವಳೇನಾ ಎನ್ನುತ್ತಾ ಶ್ರಾವಣಿಯ ತಲೆ ಸವರುತ್ತಾರೆ. ಅಂದ್ರೆ ಸದ್ಯದಲ್ಲೇ ಏನೋ ಹೊಸ ಕಥೆ ರಿವೀಲ್ ಆಗಲಿದೆ ಎನ್ನುವಂತೆ ಕಾಣಿಸುತ್ತೆ.
ಇವತ್ತಿನ ಪ್ರೋಮೋ ನೋಡಿ ವೀಕ್ಷಕರು ಫುಲ್ ಖುಷಿ ಆಗಿದ್ದಾರೆ. ಇನ್ನುಇದೆ ಆಟ. ಸದ್ಯದಲ್ಲೇ ವಿಜಯಾಂಬಿಕ ನಾಟಕ ಬಯಲಾಗಲಿದೆ. ಶ್ರಾವಣಿಗೆ ಅಪ್ಪನ ಪ್ರೀತಿ ಸಿಗಲಿದೆ. ಅಧಿಕಾರನೂ ಸಿಗಲಿದೆ. ಚೆನ್ನಾಗಿದೆ ಟ್ವಿಸ್ಟ್ (twist in story) ಎಂದು ಕಾಮೆಂಟ್ ಮಾಡಿದ್ದಾರೆ. ನಿಮಗೇನು ಅನಿಸುತ್ತೆ? ಶ್ರಾವಣಿಗೆ ಅಪ್ಪನ ಪ್ರೀತಿ ಸಿಗುತ್ತಾ?