ಪಾಸಿಟಿವಿಟಿ ಮಂತ್ರ ಜಪಿಸೋ ಗೌತಮಿಯಲ್ಲಿ ಇರೋದೆಲ್ಲ ಬರೀ ನೆಗೆಟಿವಿಟಿ ಎಂದ ಶೋಭಾ ಶೆಟ್ಟಿ

First Published | Nov 19, 2024, 4:12 PM IST

ನಟಿ ಶೋಭಾ ಶೆಟ್ಟಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಕ್ಷಣದಿಂದಲೇ ಮಾತಿನ ಭರಾಟೆ ಜೋರಾಗಿಯೇ ನಡೆಯುತ್ತಿದ್ದು, ಇದೀಗ ಪಾಸಿಟಿವಿಟಿ ಎನ್ನುವ ಗೌತಮ್ ಜಾದವ್ ಅವರಲ್ಲಿ ಇರೋದೆಲ್ಲ ಬರೀ ನೆಗೆಟಿವಿಟಿ ಎಂದಿದ್ದಾರೆ ಶೋಭಾ ಶೆಟ್ಟಿ. 
 

ತೆಲುಗು ಬಿಗ್ ಬಾಸ್ ನಲ್ಲಿ ಧೂಳೆಬ್ಬಿಸಿದ್ದ ಅಗ್ನಿ ಸಾಕ್ಷಿ ನಟಿ ಶೋಭಾ ಶೆಟ್ಟಿ (Shobha Shetty), ಇದೀಗ ಕನ್ನಡ ಬಿಗ್ ಬಾಸ್ ಸೀಸನ್ 11 ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದು, ದೊಡ್ಮನೆಗೆ ಕಾಲಿಟ್ಟ ಎರಡೇ ದಿನದಲ್ಲಿ ತಮ್ಮ ಮಾತಿನ ಭರಾಟೆಯ ಮೂಲಕ ಹೆಚ್ಚು ಸದ್ದು ಮಾಡುತ್ತಾ, ಉಳಿದ ಸದಸ್ಯರು ಸೈಲೆಂಟ್ ಆಗುವಂತೆ ಮಾಡಿದ್ದಾರೆ. 
 

ಶೋಭಾ ಶೆಟ್ಟಿ ಎಂಟ್ರಿ ಕೊಟ್ಟ ನಂತ್ರ ಮೊದಲಿಗೆ ಹೇಳಿದ್ದೆ, ಗೌತಮಿ ಜಾದವ್ (Gouthami Jadhav) ಮುಖವಾಡ ಧರಿಸಿದ್ದಾರೆ, ಆ ಮುಖವಾಡ ಕಳೋಚೋದೆ ನನ್ನ ಉದ್ದೇಶ ಎಂದಿದ್ದರು. ಆ ಡೈಲಾಗ್ ನಿಂದ ವಾತಾವರಣದಲ್ಲಿ ಸ್ವಲ್ಪ ಬಿಸಿ ಏರಿತ್ತು. ಇದೀಗ ಮತ್ತೆ ಗೌತಮಿ ಮತ್ತು ಶೋಭಾ ಶೆಟ್ಟಿ ನಡುವೆ ಮಾತಿನ ಚಕಮಕಿ ನಗುವಿನ ಲೇಪನದೊಂದಿಗೆ ನಡೆದಿದೆ. 
 

Tap to resize

ಬಿಗ್‌ ಬಾಸ್‌ ಟಾಸ್ಕ್‌ ಒಂದನ್ನು ನೀಡಿದ್ದು, ರಜತ್ ಹಾಗೂ ಶೋಭಾ ಶೆಟ್ಟಿ ಮಧ್ಯೆ ಒಬ್ಬರನ್ನು ತಂಡದ ನಾಯಕತ್ವದಿಂದ ಹೊರಕ್ಕೆ ಇಡುವ ಚಟುವಟಿಕೆ ಇದಾಗಿದೆ. ಕೆಲವರು ಶೋಭಾ ಹೆಸರನ್ನು ಹೊರಗಿಡಬೇಕು ಅಂದ್ರೆ, ಇನ್ನೂ ಕೆಲವರು ರಜತ್ ಹೆಸರನ್ನು ಕ್ಯಾಪ್ಟನ್ಸಿಯಿಂದ (Captaincy) ಹೊರಗಿಡಬೇಕು ಎಂದಿದ್ದರು. ಈ ವಿಚಾರಕ್ಕೆ ಈಗಾಗಲೇ ಶೋಭಾ ಶೆಟ್ಟಿ ಅವರು ಉಗ್ರಂ ಮಂಜು ಜೊತೆ ಮಾತಿನ ಸಮಯ ನಡೆಸಿದ್ದರು. 
 

ಇದೀಗ ಕಲರ್ಸ್ ಕನ್ನಡ ಹೊಸ ಪ್ರೋಮೋ ಬಿಡುಗಡೆ ಮಾಡಿದ್ದು, ಇದರಲ್ಲಿ ಗೌತಮಿ ಅವರು ಶೋಭಾ ಶೆಟ್ಟಿ ಅವರನ್ನು ಕ್ಯಾಪ್ಟನ್ಸಿಯಿಂದ ಹೊರಗೆ ಇಟ್ಟಿದ್ದಾರೆ. ಅದಕ್ಕೆ ಕಾರಣವನ್ನೂ ಕೊಟ್ಟಿರುವ ಗೌತಮಿ, ಶೋಭಾ ಶೆಟ್ಟಿಯವರನ್ನು ನಾನು ಅನರ್ಹ ಅಂತ ಯಾಕೆ ಹೇಳ್ತಿದ್ದೇನೆ ಅಂದ್ರೆ ಶೋಭಾ ಈ ಮನೆಗೆ ಎಂಟ್ರಿ ಕೊಟ್ಟಾಗ ಮೊದಲು ಹೇಳಿದ್ದು, ನನ್ನ ಮುಖವಾಡ ಕಳಚಬೇಕು ಎಂದು. 
 

ಶೋಭಾ ಅವರ ಗುರಿ ನನ್ನ ಮುಖವಾಡ ಕಳಚೋದು, ಒಂದು ವೇಳೆ ಶೋಭಾ ಕ್ಯಾಪ್ಟನ್ ಆದರೆ, ಅವರು ಅದೇ ಗುಂಗಿನಲ್ಲಿರುತ್ತಾರೇ ವಿನಃ, ನನ್ನ ಪಾಸಿಟಿವ್ ಸೈಡ್ (positive side) ಕಡೆ ನೋಡೋದೇ ಇಲ್ಲ, ಮೊದಲಿಗೆ ನೆಗೆಟಿವ್ ಅನ್ನೆ ನೋಡ್ತಾರೆ. ಇದು ತಂಡದ ನಾಯಕನಿಗೆ ಇರಬೇಕಾದ ಗುಣ ಅಲ್ಲ ಎಂದಿದ್ದಾರೆ. 
 

ಅದಕ್ಕೆ ಶೋಭಾ ಶೆಟ್ಟಿ ನಗುತ್ತಾ, ನಿಮ್ಮ ಮುಖವಾಡ ಕಳಚುತ್ತೀನಿ ಅಂತ ಭಯ ಪಡುತ್ತಿದ್ದೀರಾ? ಎಂದು ನೇರವಾಗಿ ಪ್ರಶ್ನೆ ಇಟ್ಟಿದ್ದಾರೆ. ಅದಕ್ಕೆ ಗೌತಮಿ ಅಷ್ಟೇ ನೇರವಾಗಿ 200 ದಿನ ಇದ್ದರೂ ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನ ಕೇಳಿ ಮಾತಿನಲ್ಲೇ ಎದುರಿಗಿರುವವರನ್ನು ನಡುಗಿಸೋ ಶೋಭಾ ಶೆಟ್ಟಿ, ಗೌತಮಿಯಲ್ಲಿ ಇರೋದು ಬರೀ ನೆಗೆಟಿವಿಟಿ ಎಂದಿದ್ದಾರೆ. 
 

ಶೋಭಾ ಶೆಟ್ಟಿ ಹೇಳಿದ್ದಿಷ್ಟು ಆಡಿಯನ್ಸ್‌ ಆಗಿ ನಾನು ನಿಮ್ಮನ್ನು ಹೊರಗಡೆಯಿಂದ ನೋಡಿದಾಗ ನಿಮ್ಮಲ್ಲಿ ಯಾವುದೇ ಪಾಸಿಟಿವಿಟಿ ಕಾಣಿಸಿಲ್ಲ. ಪಾಸಿಟಿವ್‌ ಅಂತ ಹೇಳುತ್ತೀರಾ. ಆದರೆ ನಿಮ್ಮಲ್ಲಿ ಇರೋದೆಲ್ಲ ನೆಗೆಟಿವ್‌. ಪಾಸಿಟಿವ್‌ ನಿಮಗೆ ಇಲ್ವೇ ಇಲ್ಲ ಎಂದಿದ್ದಾರೆ, ಅದಕ್ಕೆ ಗೌತಮಿ ಅವರು ಪಾಸಿಟಿವಿಟಿ ನನಗೆ ಅಂತ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ. ಮುಂದೆ ಏನಾಗುತ್ತೆ ಕಾದು ನೋಡಬೇಕು. 
 

Latest Videos

click me!