Sridhar Nayak: ಅನೇಕರ ಜೊತೆ ಲೈಂಗಿಕ ಸಂಬಂಧ ಬೆಳೆಸಿ HIV ಕಾಯಿಲೆ ತಂದ್ಕೊಂಡ: ಪಾರು ನಟ ಶ್ರೀಧರ್‌ ನಾಯಕ್‌ ಬಗ್ಗೆ ಪತ್ನಿ ಮಾತು

Published : May 28, 2025, 08:57 AM ISTUpdated : May 28, 2025, 10:10 AM IST

ಪಾರು ಸೇರಿದಂತೆ ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಶ್ರೀಧರ್‌ ನಾಯಕ್‌ ಅವರು ಮೇ 26ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಅವರು ಪತ್ನಿ, ಮಗನ ವಿರುದ್ಧ ಆರೋಪ ಮಾಡಿದ್ದರು. ಈಗ ಈ ವಿಚಾರವಾಗಿ ಪತ್ನಿ ಜ್ಯೋತಿ ಮಾತನಾಡಿದ್ದಾರೆ.

PREV
111
ಶ್ರೀಧರ್ ಅಂತ್ಯಕ್ರಿಯೆಯಲ್ಲಿ ಪತ್ನಿ, ಮಗ ಕಾಣಿಸಿರಲಿಲ್ಲ..?

ಪಾರು ಧಾರಾವಾಹಿ ನಟ ಶ್ರೀಧರ್‌ ನಾಯಕ್‌ ಅವರು ಮೇ 26ರ ರಾತ್ರಿ ನಿಧನರಾಗಿದ್ದು, ಮೇ 27ಕ್ಕೆ ಅಂತ್ಯಕ್ರಿಯೆ ಮಾಡಲಾಯ್ತು. ಆ ವೇಳೆ ಅವರ ತಾಯಿ, ತಮ್ಮ, ಸಹಕಲಾವಿದರು ಭಾಗವಹಿಸಿದ್ದರು. ಆದರೆ ಅವರ ಪತ್ನಿ ಜ್ಯೋತಿ ಅಥವಾ ಐದು ವರ್ಷದ ಮಗ ಕಾಣಿಸಿರಲಿಲ್ಲ. ಈಗ ಇವರ ಪತ್ನಿಯ ಆಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಆ ಆಡಿಯೋದಲ್ಲಿ ಅವರು ಸಾಕಷ್ಟು ವಿಷಯವನ್ನು ಮಾತನಾಡಿದ್ದಾರೆ.

211
ಶ್ರೀಧರ್‌ ನನಗೆ ಹೊಡೆಯುತ್ತಿದ್ದ

ಶ್ರೀಧರ್ ನನಗೆ ಹೊಡೆದಾಗಲೂ ಕೂಡ, ನೋವು ತಿಂದು, ಬೆಳಗ್ಗೆ ಮಾರನೇ ದಿನ ಮತ್ತೆ ನೀಟ್‌ ಆಗಿ ಸೀರೆ ಉಟ್ಟು ಕಾಲೇಜ್‌ಗೆ ಹೋಗಿ ಮಕ್ಕಳಿಗೆ ಪಾಠ ಮಾಡಿದ್ದಿದೆ. ಅವನು ನನಗೆ ಓದಿಸಿಲ್ಲ, ನಾನು ಸೆಕೆಂಡ್ ಪಿಯುಸಿಯಿಂದ ಕೆಲಸ ಮಾಡ್ತಿದೀನಿ. ಆದರ್ಶ ಫಿಲ್ಮ್ಸ್ ಇನ್‌ಸ್ಟಿಟ್ಯೂಟ್ ಬಿಟ್ಟಮೇಲೆ ನಾನು ಸೆಕೆಂಡ್ ಪಿಯುಸಿ ಓದಿದ ಬಳಿಕ ಶೇಷಾದ್ರಿಪುರ ಇಂಜಿನಿಯರಿಂಗ್ ಕಾಲೇಜ್ ಜಾಯಿನ್ ಆಗಿ, ಕೆಲಸ ಮಾಡ್ಕೊಂಡೆ ಓದುತ್ತಿದ್ದೆ.

311
ಶ್ರೀಧರ್‌ ನನಗೆ ಓದಿಸಿಲ್ಲ, ನಾನೇ ಅವನನ್ನೂ ಕೆಲಸಕ್ಕೆ ಸೇರಿಸಿದ್ದೆ

ಶೇಷಾದ್ರಿಪುರಂ ಕಾಲೇಜಿಗೆ ಜಾಯಿನ್ ಆಗಿ ಆರು ತಿಂಗಳ ನಂತರ ಶ್ರೀಧರನನ್ನು ಕೂಡ ಅಲ್ಲೇ ಕರ್ಕೊಂಡು ಬಂದು ಸೇರಿಸಿದ್ದೆ. ನಾನು ಯಾವಾಗಲೂ ವರ್ಕ್ ಮಾಡ್ತಾ ಇದ್ದೀನಿ. ಪ್ರಗ್ನೆನ್ಸಿ ಟೈಮ್‌ನಲ್ಲಿ ನನಗೆ ವೀಕ್ನೆಸ್ ಇದ್ದಿದ್ದರಿಂದ ಬ್ಲೀಡಿಂಗ್ ಇತ್ತು. ಹೀಗಾಗಿ ಆರು ತಿಂಗಳು ನನಗೆ ಕೆಲಸ ಮಾಡೋದಿಕ್ಕೆ ಆಗಲಿಲ್ಲ. ಆಮೇಲೆ ಡೆಲಿವರಿ ಆಗಿ ನನ್ನ ಮಗು ಮೂರು ವರ್ಷ ಆಗುವರೆಗೂ ನಾನು ಕೆಲಸ ಮಾಡಿಲ್ಲ. ಆಮೇಲೆ ನಾನು ಕೆಲಸ ಮಾಡಿಕೊಂಡು ಬಂದೆ. ನನಗೆ ಯಾರು ಓದಿಸಿಲ್ಲ, ನನಗೆ ಓದಬೇಕು ಅನ್ನೋ ಹಂಬಲ ಇತ್ತು.

411
ನನ್ನ ಬದುಕಿನಲ್ಲಿ ಪರಪುರುಷ ಇಲ್ಲ

ಶ್ರೀಧರ್‌ಗೆ ನಾನು ಡಿಗ್ರಿಯನ್ನು ಕಟ್ಟಿಸಿದೆ, ಒಂದು ವರ್ಷ ಬರೆದ ಅವನು ಇನ್ನೊಂದು ವರ್ಷ ಇಷ್ಟ ಇಲ್ಲ ಅಂತ ಅಂದ. ನಾನು ಯಾರನ್ನೋ ಕಟ್ಕೊಂಡು ಹೋದೆ ಅಂತ ಶ್ರೀಧರ್‌ ಹೇಳಿದ್ದಾನೆ, ನಾನು ಎಂದಿಗೂ ಆ ದಾರಿ ಹಿಡಿದಿಲ್ಲ. ನಾನು, ನನ್ನ ಮಗನ ಜೊತೆ ವಾಸ ಮಾಡುತ್ತಿದ್ದೇನೆ, ನನ್ನ ಬದುಕಿನಲ್ಲಿ ಯಾರೂ ಇಲ್ಲ.

511
ನನ್ನ ಆಯ್ಕೆ ತಪ್ಪಾಗಿದೆ

ಇಷ್ಟೊಂದು ಘೋರ ಯಾರದ್ದಾದರೂ ಜೀವನದಲ್ಲಿ ಟ್ರಾಜಿಡಿ ನಡೆಯಬಹುದು ಅಂತ ಅಂದುಕೊಂಡಿರಲಿಲ್ಲ, ಇದು ನನ್ನ ಜೀವನದಲ್ಲಿ ನಡೆದಿದೆ, ಇವತ್ತು ನಾನು ಇದನ್ನು ಅನುಭವಿಸ್ತಿದೀನಿ. ನೀವು ಯಾರೂ ನನ್ನ ತರ ಹುಚ್ಚರಲ್ಲ ಅಥವಾ ಬಾಲಿಶರಲ್ಲ. ದಯವಿಟ್ಟು ವಿಚಾರ ಮಾಡಿ, ನಿರ್ಧಾರ ತಗೊಳ್ಳಿ. ನನ್ನ ಆಯ್ಕೆ ತಪ್ಪಾಗಿದೆ ಎಂದು ಹೇಳೋದಿಕ್ಕೆ ನನಗೆ ಮುಜುಗರ ಆಗ್ತಿದೆ.

611
ಶ್ರೀಧರ್‌ ಯಾಕೆ ಹೆಂಗಸಿನ ಚಟ ಅಂಟಿಸಿಕೊಂಡನೋ ಗೊತ್ತಿಲ್ಲ

ನಾನು ಅವನ ಕ್ಯಾರೆಕ್ಟರ್ ಮೇಲೆ ಯಾವತ್ತು ಸಂಶಯ ಪಟ್ಟಿಲ್ಲ. ನಮ್ಮ ತಾಯಿ ಒಂದೆರಡು ಸಲ ಯಾವ ಗಂಡಸು ಹೀಗೆ ಮನೇಲಿ ಕಿತ್ತಾಡಲ್ಲ ಜಗಳಾಡಲ್ಲ. ನಾವಿಬ್ಬರೂ ಗಂಡ ಹೆಂಡತಿಯ ಥರ ಇರಲಿಲ್ಲ. ನನ್ನ, ಅವನ ಮಧ್ಯೆ ಸಾಕಷ್ಟು ವರ್ಷಗಳಿಂದ ಯಾವುದೇ ಸಂಬಂಧ ಇರಲಿಲ್ಲ. ಶ್ರೀಧರ್‌ಗೆ ಎಚ್‌ಐವಿ ಇತ್ತು, ಎರಡು ತಿಂಗಳ ಹಿಂದೆ ನನಗೆ ಆ ರಿಪೋರ್ಟ್‌ ಸಿಕ್ಕಿದೆ. ಸಾಕಷ್ಟು ಡಾಕ್ಟರ್‌ ಬಳಿ ಈ ಕಾಯಿಲೆ ವಾಸಿ ಆಗತ್ತಾ ಅಂತ ಕೇಳಿದಾಗ ಅವರು ಪ್ರಯೋಜನ ಇಲ್ಲ ಅಂದರು. ಸಾಕಷ್ಟು ಜನರ ಜೊತೆ ಲೈಂಗಿಕ ಸಂಬಂಧ ಹೊಂದಿದಾಗ ಮಾತ್ರ ಈ ರೀತಿ ಆಗುವುದು. ನನ್ನ ಬಳಿ ಈಗ ಈ ರಿಪೋರ್ಟ್‌ ಇದೆ. ಶ್ರೀಧರ್‌ ಯಾವಾಗ ಈ ಚಟಕ್ಕೆ ಬಿದ್ದನೋ ಗೊತ್ತಿಲ್ಲ.

711
ಶ್ರೀಧರ್‌ಗೆ HIV ಬರೋಕೆ ನಾನು, ನನ್ನ ಮಗ ಕಾರಣ ಅಲ್ಲ

ನಾನು ಆರ್ಟಿಸ್ಟ್, ನಾನು ತುಂಬಾ ಸ್ಮಾರ್ಟ್ ಅನ್ನೋದು ಅವನ ತಲೆಯಲ್ಲಿತ್ತು. ಅವನಿಗೆ ಅಹಂಕಾರ ಇತ್ತು. ತಂದೆ-ತಾಯಿ, ಅಣ್ಣ, ತಮ್ಮ ಅಕ್ಕ, ತಂಗಿ, ಹೆಂಡತಿ, ಮಗು ಎಲ್ಲವನ್ನೂ ಹೊಂದಿದ್ದ ಶ್ರೀಧರ್‌ ಇಂದು ಎಲ್ಲರನ್ನು ಕಳೆದುಕೊಂಡಿದ್ದಾನೆ, ದೇವರು ಅವನಿಗೆ ಎಲ್ಲವನ್ನು ಕೊಟ್ಟಿದ್ದ, ಒಳ್ಳೆಯ ಕೆಲಸವೂ ಇತ್ತು, ಒಳ್ಳೆ ಹೆಸರು ದೇವರು ಕೊಟ್ಟಿದ್ದ. ಸ್ವಲ್ಪ ಅವನಿಗೆ ಎಲ್ಲವೂ ಕೊಟ್ಟಮೇಲೂ ಕೂಡ ಅವನು ಕಳೆದುಕೊಂಡ. ಶ್ರೀಧರ್‌ಗೆ ಎಚ್‌ಐವಿ ಬರೋಕೆ ನಾನಾಗಲೀ, ನನ್ನ ಮಗ ಆಗಲೀ ಕಾರಣ ಅಲ್ಲ, ಅದನ್ನು ಅವನೇ ತಂದುಕೊಂಡಿದ್ದು.

811
ನನ್ನ ಐದು ವರ್ಷದ ಮಗ ಹೇಗೆ ಮೋಸ ಮಾಡ್ತಾನೆ?

ಯಾವುದೋ ಒಂದು ವಿಡಿಯೋದಲ್ಲಿ ಐದು ವರ್ಷದ ಮಗ ಅವನು ಮೋಸ ಮಾಡಿ ಹೋದ ಅಂತ ಹೇಳಿದ್ದಾನೆ. ಐದು ವರ್ಷದ ಮಗು ಏನಂತ ತಾನೇ ಮೋಸ ಮಾಡಲಿಕ್ಕೆ ಸಾಧ್ಯ? ಶ್ರೀಧರ್‌ ಮಗನಿಗೆ ಒಂದು ಸೈಕಲ್ ಕೊಡಿಸಿದ್ದ. ಆ ಸೈಕಲ್‌ನ್ನು ನನ್ನ ಮಗ ತಗೊಂಡು ಬಂದಿದ್ದ. ಮೂರು ದಿನ ಬಿಟ್ಟು ನನಗೆ ಶ್ರೀಧರ್‌ ಫೋನ್‌ ಮಾಡಿ ಎಲ್ಲ ತಗೊಂಡು ಹೋಗ್ಬಿಟ್ಟಿದ್ದೀರಾ ಅಂತ ಹೇಳಿದ್ದ. ಮಗುಗೆ ಅದು ತನ್ನ ಸೈಕಲ್, ಆಟಿಕೆ ಸಾಮಾನು ಅಂತ ತಗೊಂಡು ಬಂದುಬಿಡುತ್ತೆ. ನಾನು ಒಂದು ಉದಾಹರಣೆಗೆ ಹೇಳಿದ್ದು ಈ ತರದ್ದು ಕೋಟಿಗಟ್ಟಲೆ ಮಾತು ಇದೆ.

911
ಕಾಮನ್‌ ಸೀರೆ, ಮಲ್ಲಿಗೆ ಹೂ ಬಿಟ್ಟು ಏನೂ ಕೇಳಿಲ್ಲ

ಇಡೀ 11 ವರ್ಷ ಜೀವನದಲ್ಲಿ ಶ್ರೀಧರ್ ಹತ್ರ ನಾನು ಎರಡು ಸಲ ಸೀರೆ ಕೇಳಿದೀನಿ. ಅದು ಕಾಮನ್ ಸೀರೆ, ರೇಷ್ಮೆ ಸೀರೆ ಅಲ್ಲ. ನಾಲ್ಕು ಬಾರಿ ಹೂವಿನ ಮಾಲೆ ಕೇಳಿರಬಹುದು. ಅದನ್ನ ಬಿಟ್ಟು ನಾನು ಅವನಿಗೆ ಎಂದೂ ಕೂಡ ತಿನ್ನೋದಿಕ್ಕೆ ಒಂದು ಐಸ್ ಕ್ರೀಮ್ ಕೂಡ ತಂದುಕೊಡು ಅಂತ ಕೇಳಲಿಲ್ಲ. ನಾನು ಅವನಿಂದ ಆತರದ್ದು ಏನು ನಿರೀಕ್ಷೆಯೇ ಮಾಡಿಲ್ಲ.

1011
ನಾನು ಎಷ್ಟು ಸ್ಟ್ರಾಂಗ್‌ ಅಂತ ಈಗ ಹೇಳೋಕಾಗಲ್ಲ

ನನ್ನ ಜಾಗದಲ್ಲಿ ಬೇರೆ ಯಾರಾದ್ರೂ ಇದ್ರೆ ಬೇರೆ ಏನಾದ್ರೂ ಮಾಡ್ಕೊಂಡು ಬಿಡಬಹುದಾಗಿತ್ತೇನೋ ಗೊತ್ತಿಲ್ಲ. ನಾನು ಎಷ್ಟು ಸ್ಟ್ರಾಂಗ್ ಇದ್ದೀನಿ ಅಂತ ಮುಂದೆ ನೋಡಬೇಕು, ಯಾಕಂದ್ರೆ ಈಗಲೇ ನಾನು ಡಿಸೈಡ್ ಮಾಡಿ ಯಾರಿಗೂ ಏನೂ ಹೇಳೋಕಾಗಲ್ಲ.

1111
ತಿಂಗಳುಗಳಿಂದ ಅನಾರೋಗ್ಯ

ಅಂದಹಾಗೆ ಶ್ರೀಧರ್‌ ಅವರು ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಸಿಕ್ಕಾಪಟ್ಟೆ ಸೊರಗಿದ್ದರು. ಇನ್ನು ಚಿಕಿತ್ಸೆಗೋಸ್ಕರ ಧನಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಆಮೇಲೆ ಕೆಲ ಕಲಾವಿದರು ಶ್ರೀಧರ್‌ಗೆ ಹಣ ಸಹಾಯ ಮಾಡಿದ್ದರು, ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ. 

Read more Photos on
click me!

Recommended Stories