ಕೆಲ ವರ್ಷಗಳಿಂದ ನಮ್ಮ ಮಧ್ಯೆ ಏನೂ ಇರಲಿಲ್ಲ: ಪಾರು ಧಾರಾವಾಹಿ ನಟ ಶ್ರೀಧರ್ ಇನ್ನೊಂದು ಮುಖ ಬಿಚ್ಚಿಟ್ಟ ಪತ್ನಿ

Published : May 28, 2025, 08:40 AM ISTUpdated : May 28, 2025, 10:51 AM IST

ಪಾರು ಧಾರಾವಾಹಿ ನಟ ಶ್ರೀಧರ್‌ ನಾಯಕ್‌ ಅವರು ಮೇ 26ರಂದು ನಿಧನರಾಗಿದ್ದಾರೆ. ಸಾಯುವುದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಅವರು ಪತ್ನಿ ಜ್ಯೋತಿ, ಐದು ವರ್ಷದ ಮಗನ ಮೇಲೆ ಆರೋಪ ಮಾಡಿದ್ದರು. ಈಗ ಇದರ ಬಗ್ಗೆ ಪತ್ನಿ ಜ್ಯೋತಿ ಅವರೇ ಕ್ಲಾರಿಟಿ ಕೊಟ್ಟಿದ್ದಾರೆ. 

PREV
15
ಶ್ರೀಧರ್‌ ಪತ್ನಿ ಜ್ಯೋತಿ ಹೇಳಿದ್ದೇನು?

ಇಲ್ಲಿ ಯಾರು ಸರಿ ಯಾರು ತಪ್ಪು ಅಥವಾ ಕ್ಲಾರಿಫಿಕೇಶನ್ ಗೋಸ್ಕರ ನಾನೇನು ಈ ಆಡಿಯೋ ಮಾಡ್ತಿಲ್ಲ. ತುಂಬಾ ಮೌನವಾಗಿದ್ದು ಇವತ್ತು ಯಾಕೋ ಮಾತಾಡಬೇಕು ಅಂತ ಅನಿಸ್ತಾ ಇದೆ. ಇದಾದಮೇಲೆ ಮತ್ತೆ ಈ ವಿಚಾರವಾಗಿ ಮಾತಾಡಲಿಕ್ಕೆ ನಾನು ಇಷ್ಟ ಪಡೋದಿಲ್ಲ. ತುಂಬಾ ಬಡತನದಲ್ಲಿ ಬೆಳೆದು ಬಂದಿದ್ದೀನಿ. ಹೀಗಾಗಿ ಸಾಧನೆ ಮಾಡಬೇಕು ಅಂತ ಅನಿಸುತ್ದೆ. ಆದರ್ಶದಲ್ಲಿ ಓದುವಾಗ ನನಗೆ ಯಾವ ಅಟ್ರಾಕ್ಷನ್ ಯಾವುದಕ್ಕೂ, ಯಾರ ಮೇಲೂ ಇರಲಿಲ್ಲ. ನಾನು ಕೇವಲ ಅಲ್ಲಿ ಸಿಂಗರ್ ಆಗಬೇಕು ಅಂತ ಬಂದಿದ್ದೆ, ಅಷ್ಟಕ್ಕೆ ಮಾತ್ರ ಇದ್ದಿದ್ದು, ಎಲ್ಲರ ಜೊತೆ ನಾನು ಚೆನ್ನಾಗಿ ಮಾತಾಡಿಕೊಂಡಿದ್ದೆ ಬಿಟ್ರೆ, ನನಗೆ ಯಾವ ರೀತಿ ಅಟ್ರಾಕ್ಷನ್ ಯಾರ ಮೇಲಾಗಲೀ ಇರಲಿಲ್ಲ. ಯಾರಿಗೆ ನನ್ನ ಮೇಲೆ ಅಟ್ರಾಕ್ಷನ್‌ ಇದ್ರೂ ನಾನು ಅದನ್ನು ರಿಸೀವ್ ಮಾಡಿಕೊಂಡಿಲ್ಲ.

25
ಶ್ರೀಧರ್‌ ನನಗೆ ಪ್ರೇಮ ನಿವೇದನೆ ಮಾಡಿದ್ರು, ಮದುವೆ ಆಯ್ತು!

ಧಾರವಾಡದಲ್ಲಿ ನಾನು ಓದಲಿಕ್ಕೆ ಹೋದಾಗ ಶ್ರೀಧರ್, ನನಗೆ ಪರಿಚಯ ಆಯ್ತು. ಇಬ್ಬರಿಗೂ ಸ್ನೇಹ ಆಗಿ, ಆಮೇಲೆ ಪ್ರೀತಿ ಹುಟ್ಟಿತು. ಒಂದು ದಿನ ಅವನು ಪ್ರಪೋಸ್ ಮಾಡಿದ್ದಲ್ಲದೆ, ನಮ್ಮ ತಂದೆ ತಾಯಿ ಹತ್ರ ಮಾತಾಡಿದ. ನಮ್ಮ ಮನೇಲಿ ಯಾರೂ ಈ ಮದುವೆಗೆ ಒಪ್ಪಲಿಲ್ಲ. ನಮ್ಮ ಜಾತಕವೂ ಕೂಡಿ ಬರಲಿಲ್ಲ. ನಾನು ಇಷ್ಟಪಟ್ಟೆ ಅಂತ ನಾವು ಮದುವೆ ಆದೆವು. ನಾನು ಅವನನ್ನು ನಿಜವಾಗಲೂ ಪ್ರೀತಿ ಮಾಡಿದ್ದೆ, ಹಾಗಾಗಿ ಮದುವೆ ಆಯ್ತು.

35
ಮದುವೆಯಾಗಿ ಒಂದು ತಿಂಗಳಿಗೆ ಶ್ರೀಧರ್‌ ಸ್ವಭಾವ ಗೊತ್ತಾಯ್ತು!

ಮದುವೆಯಾಗಿ ಒಂದು ತಿಂಗಳಿಗೆ ಶ್ರೀಧರ್‌ ಗುಣ, ಸ್ವಭಾವ ಏನು ಅಂತ ಅರ್ಥ ಆಯ್ತು, ಅದು ನಾರ್ಮಲ್‌ ಆಗಿರಲಿಲ್ಲ. ಕೂಡು ಕುಟುಂಬದಲ್ಲಿ ಬೆಳೆದ ನನಗೆ ಹೊಂದಿಕೊಂಡು ಹೋಗೋದು ಏನು ಅಂತ ಗೊತ್ತಿದೆ. ಆದರೆ ಶ್ರೀಧರ್‌ನಲ್ಲಿ ವಿಚಿತ್ರ ಸ್ವಭಾವ ಕಂಡು ಬರುತ್ತಿತ್ತು. ಪ್ರತಿಯೊಂದಕ್ಕೂ ಇದೇ ತರ ಇರಬೇಕು, ಇದೇ ತರ ಇರಬೇಕು ರಿಸ್ಟ್ರಿಕ್ಷನ್ಸ್‌ಗಳು ತುಂಬ ಇದ್ದವು. ನಾನು ಹನ್ನೊಂದು ವರ್ಷ ಅವನ ಜೊತೆಗಿದ್ದ ವಿಷಯವನ್ನು ಹೇಳಲ್ಲ, ಆದರೆ ಅವನು ಸಂದರ್ಶನದಲ್ಲಿ ಮಾತನಾಡಿದ್ದ ಬಗ್ಗೆ ಸ್ಪಷ್ಟನೆ ಕೊಡಬೇಕಿದೆ.

45
ಶ್ರೀಧರ್ ಮಾತನಾಡಿರೋದು ಸುಳ್ಳು

ದೇವರಾಣೆಗೂ, ನನ್ನ ತಂದೆ ತಾಯಿ ಆಣೆಗೂ, ನನ್ನ ಮಗನಾಣೆಗೂ ಅವನು ನಮ್ಮ ವಿರುದ್ಧ ಮಾತನಾಡಿದ್ದು,  ಸುಳ್ಳು. ನಾನು ಅವನನ್ನು ಮದುವೆ ಆಗೂವಾಗ ಅವನ ಬಳಿಯೂ, ನನ್ನ ಬಳಿಯೂ ಯಾವ ಆಸ್ತಿಯೂ ಇರಲಿಲ್ಲ, ಮದುವೆ ಮಾಡ್ಕೊಂಡು ನಾವು ಚೆನ್ನಾಗಿ ಜೀವನ ಕಟ್ಕೊತೀವಿ ಅನ್ನೋ ಒಂದು ಆಸೆ ಇತ್ತು.

55
ನನ್ನ, ಶ್ರೀಧರ್‌ ಮಧ್ಯೆ ಯಾವುದೇ ಸಂಬಂಧ ಇರಲಿಲ್ಲ!

ನಿನ್ನ ಮೇಲೆ ನನಗೆ ಯಾವುದೇ ಪ್ರೀತಿ ಇಲ್ಲ, ಮದುವೆ ಮಾಡಿಕೊಳ್ಳಬೇಕು ಅಂತ ಮದುವೆ ಮಾಡಿಕೊಂಡೆ ಅಂತ ಅವನು ಹೇಳಿದ. ನೀನು ಯಾಕೆ ಮದುವೆ ಆದೆ, ನೀನು ಯಾಕೆ ಕಕ್ಕ ತಿಂತಿದ್ಯಾ ಅಂತ ಕೇಳಿದ್ದಿದೆ. ಈ 11 ವರ್ಷದ ಜೀವನದಲ್ಲಿ ಬೇಕಾದಷ್ಟು ನಡೆದಿದೆ, ಅದನ್ನೆಲ್ಲ ನಿಮಗೆ ಹೇಳಿದ್ರೆ ನೀವು ಆಶ್ಚರ್ಯ ಪಡ್ತೀರಿ. ನನ್ನ ಜೀವನದಲ್ಲೂ ಏನೋ ಒಂದು, ಸಣ್ಣ ಪುಟ್ಟದು ಇದೆ ಅಂತ ಎಂದು ಯಾರಿಗೂ ನನ್ನ ತಂದೆ ತಾಯಿಯಿಂದ ಅಮ್ಮ-ತಮ್ಮನಿಂದ ಹಿಡಿದು ನಾನು ವರ್ಕ್ ಮಾಡೋ ಸ್ಥಳದಲ್ಲೂ ನಾನು ತೋರಿಸಿಕೊಂಡಿಲ್ಲ.

Read more Photos on
click me!

Recommended Stories