ನಗುವಿನ ಕಚಗುಳಿ ಇಡಲು ಕರ್ಣ ಸೀರಿಯಲ್‌ಗೆ ಖ್ಯಾತ ಹಾಸ್ಯ ನಟನ ಎಂಟ್ರಿ

Published : Jul 07, 2025, 09:34 PM IST

ಕರ್ಣ ಧಾರಾವಾಹಿಯಲ್ಲಿ ಹೊಸ ಪಾತ್ರದ ಎಂಟ್ರಿ ಆಗಿದೆ. ಹಿರಿಯ ಕಲಾವಿದರ ಜೊತೆಗೆ ಈಗ ಹಾಸ್ಯ ನಟ ಚಿದಾನಂದ್ ಕೂಡ ಧಾರಾವಾಹಿಯಲ್ಲಿ ನಟಿಸಲಿದ್ದಾರೆ. ಚಿದಾನಂದ್ ಪಾತ್ರ ಏನೆಂಬುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

PREV
15

ಹಲವು ಅಡೆತಡೆಗಳನ್ನು ಎದುರಿಸಿದ್ದ ಕರ್ಣ ಸೀರಿಯಲ್ ಪ್ರಸಾರವಾಗುತ್ತಿದೆ. ಕರ್ಣ ಸೀರಿಯಲ್ ಕಥೆ ಏನು ಅನ್ನೋದು ವೀಕ್ಷಕರಿಗೆ ಭಾಗಶಃ ಅರ್ಥವಾಗಿದೆ. ಅಶೋಕ್, ಟಿಎಸ್ ನಾಗಭರಣ, ಆಶಾಲತಾ, ಗಾಯಿತ್ರಿ ಪ್ರಭಾಕರ್, ಜ್ಯೋತಿ ಅಂತಹ ಹಿರಿಯ ಕಲಾವಿದರನ್ನು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಇದೀಗ ಸೀರಿಯಲ್‌ಗೆ ನಗುವಿನ ಕಚಗುಳಿ ಇಡಲು ಹಾಸ್ಯ ಕಲಾವಿದನ ಎಂಟ್ರಿಯಾಗಿದೆ.

25

ಈವರೆಗಿನ ಸಂಚಿಕೆಯಲ್ಲಿ ಕರ್ಣ ಮನೆಯಲ್ಲಿ ಯಾರಿಗೂ ಬೇಡವಾದ ಮಗನಾಗಿದ್ದಾನೆ. ಅಸಹಾಯಕ ತಾಯಿಗೆ ಏನು ಹೇಳಲು ಸಾಧ್ಯವಿಲ್ಲ. ಅಜ್ಜಿಗೆ ಪ್ರೀತಿಯ ಮೊಮ್ಮಗ ಕರ್ಣನಿಗೆ ಮದುವೆ ಮಾಡುವ ಆಸೆ. ಆದರೆ ಜೀವನದಲ್ಲಿಯೇ ಮದುವೆ ಆಗಲ್ಲ ಎಂದು ಅಗ್ರಿಮೆಂಟ್‌ಗೆ ಸಹಿ ಹಾಕಿ ತಂದೆಗೆ ನೀಡಿದ್ದಾನೆ.

35

ಪ್ರಸೂತಿ ತಜ್ಞನಾಗಿರುವ ಕರ್ಣ ಇಡೀ ಆಸ್ಪತ್ರೆಯ ಕ್ರಶ್ ಆಗಿದ್ದಾನೆ. ನಿಧಿಗೆ ಕರ್ಣನ ಮೇಲೆ ಲವ್ ಆಗಿದ್ದು, ಆಸ್ಪತ್ರೆಯಲ್ಲಿ ಆತನ ಹಿಂದೆಯೇ ಸುತ್ತುತ್ತಿರುತ್ತಾಳೆ. ಇತ್ತ ನಿಧಿ ಅಕ್ಕ ನಿತ್ಯಾಗೆ ಮದುವೆ ಮಾಡಿಸಲು ಅಜ್ಜಿ ಶಾಂತಿ ಪ್ರಯತ್ನಿಸುತ್ತಿದ್ದಾಳೆ. ಆದ್ರೆ ತೇಜಸ್ ಎಂಬ ಯುವಕನನ್ನು ನಿಧಿ ಪ್ರೀತಿಸುತ್ತಿದ್ದಾಳೆ.

45

ಈಗಾಗಲೇ ಕಾಮಿಡಿ ಕಿಲಾಡಿ ಖ್ಯಾತಿಯ ಸದಾ ಸಹ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೊಬ್ಬ ಹಾಸ್ಯ ನಟ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಪ್ರತಿಭೆಯಿಂದಲೇ ಈ ನಟ ಕರುನಾಡಿನ ತುಂಬಾ ಜನಪ್ರಿಯತೆಯನ್ನು ಹೊಂದಿದ್ದಾರೆ. 2000ರ ಆರಂಭದಲ್ಲಿ ಇವರ ಕಾಮಿಡಿ ಸೀರಿಯಲ್ ನೋಡಲು ಮಕ್ಕಳು ಕಾಯುತ್ತಿದ್ದರು.

55

ಯಾರು ಈ ನಟ?

ಹೌದು, ಪಾಪಾ ಪಾಂಡು ಸೀರಿಯಲ್ ಖ್ಯಾತಿಯ ಚಿದಾನಂದ್ ಝೀ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕರ್ಣ ಸೀರಿಯಲ್‌ನಲ್ಲಿ ಚಿದಾನಂದ್ ನಟಿಸುತ್ತಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಚಿದಾನಂದ್ ಪಾತ್ರ ಯಾವುದು ಅನ್ನೋದು ಗೊತ್ತಾಗಲಿದೆ.

Read more Photos on
click me!

Recommended Stories