ಶಿವಣ್ಣನ ಮನೆಗೆ ಬರಲ್ಲ ಎಂದ ಜಿಮ್ ಸೀನಾ; ಕಾರಣ ಕೇಳಿದ್ರೆ ನಕ್ಕು ನಕ್ಕು ಸುಸ್ತಾಗ್ತೀರಿ!

Published : Jul 07, 2025, 08:16 PM IST

ಅಣ್ಣಯ್ಯನ ಮನೆಯಲ್ಲಿ ಮದುವೆ ಸಂಭ್ರಮ. ಗುಂಡಮ್ಮ ತವರಿಗೆ ಹೋಗಲು ಸೀನನನ್ನು ಕರೆಯುತ್ತಾಳೆ. ಆದರೆ ಸೀನ ತವರು ಮನೆಗೆ ಹೋಗಲು ನಿರಾಕರಿಸುತ್ತಾನೆ. ತವರು ಮನೆಗೆ ಹೋಗದಿರಲು ಸೀನ ಹೇಳಿದ ಕಾರಣ ಏನು?

PREV
15

ಅಣ್ಣಯ್ಯ ಸೀರಿಯಲ್‌ನಲ್ಲಿ ಮದುವೆ ಸಂಭ್ರಮ ಮನೆ ಮಾಡಲಿದೆ. ರಾಣಿ-ಮನು ಮದುವೆಗೆ ಎರಡೂ ಕುಟುಂಬಗಳು ತಯಾರಿ ಮಾಡಿಕೊಳ್ಳುತ್ತಿವೆ. ಅಣ್ಣನ ಮನೆಯ ಮದುವೆ ಕೆಲಸಗಳಿದ್ದು, ತವರಿಗೆ ಹೋಗೋಣ ಬಾ ಎಂದು ಗಂಡನನ್ನು ಗುಂಡಮ್ಮ ಕರೆದಿದ್ದಾಳೆ. ಆದ್ರೆ ಶಿವಣ್ಣನ ಮನೆಗೆ ಬರಲ್ಲ ಎಂದು ಜಿಮ್ ಸೀನ ಹೇಳಿದ್ದಾನೆ.

25

ಇಂದು ಪ್ರಸಾರವಾದ ಸಂಚಿಕೆಯಲ್ಲಿ ಜಿಮ್ ಸೀನ್ ಮತ್ತು ಗುಂಡಮ್ಮ ನಡುವೆ ಎಂದಿನಂತೆ ಜಗಳ ನಡೆಯುತ್ತಿದೆ. ಜಗಳದ ನಂತರ ಬಟ್ಟೆ ಎಲ್ಲಾ ಪ್ಯಾಕ್ ಮಾಡಿಕೊಂಡು ಅಣ್ಣನ ಮನೆಗೆ ಹೋಗೋಣ ಎಂದು ಗುಂಡಮ್ಮ ಹೇಳುತ್ತಾಳೆ. ಅದಕ್ಕೆ ನೀನು ಸಹ ಬಟ್ಟೆ ಪ್ಯಾಕ್ ಮಾಡಿಕೊ ಎಂದು ಹೇಳುತ್ತಾನೆ. ಇದಕ್ಕೆ ಅದು ನನ್ನ ತವರು ಮನೆ. ಅಲ್ಲಿ ನನಗೆ ಅಕ್ಕ-ತಂಗಿಯರ ಬಟ್ಟೆ ಇರುತ್ತೆ ಎಂದು ಹೇಳುತ್ತಾಳೆ.

35

ಈ ವೇಳೆ ಹೊರಗಿನಿಂದ ಮಾದಪ್ಪ, ಮಗ ಸೀನನನ್ನು ಪ್ರೀತಿಯಿಂದ ಕರೆಯುತ್ತಾನೆ. ಶಿವು ಮನೆಯಲ್ಲಿ ಮದುವೆ ಕೆಲಸಗಳಿರುತ್ತವೆ. ಹಾಗಾಗಿ ಬೈಕ್ ತೆಗೆದುಕೊಂಡು ಹೋಗುವಂತೆ ಕೀ ನೀಡುತ್ತಾನೆ. ಮೊದಲ ಬಾರಿ ತಂದೆ ಕೀ ಕೊಟ್ಟಿರೋದಕ್ಕೆ ಜಿಮ್ ಸೀನ ಫುಲ್ ಖುಷಿಯಾಗಿದ್ದಾನೆ. ಶಿವಣ್ಣನ ಮನೆಗೆ ಸೀನ ಬರಲ್ಲ ಅಂತ ಹೇಳಿದ್ಯಾಕೆ ಅಂತ ಗೊತ್ತಾ? ಸೀನ ನೀಡಿದ ಕಾರಣ ಕೇಳಿದ್ರೆ ನಕ್ಕು ನಕ್ಕು ಸುಸ್ತಾಗ್ತೀರಿ.

45

ಸೀನ ಹೇಳಿದ ಕಾರಣ ಏನು?

ಶಿವಣ್ಣನ ಮನೆಗೆ ಹೋದ್ರೆ ಈ ರೀತಿ ನಾಬಿಬ್ಬರು ಜಗಳ ಮಾಡಲು ಆಗಲ್ಲ. ನಿನ್ನನ್ನು ಮೂಟೆ, ದಡಗಲಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಇದರಿಂದ ಗುಂಡಮ್ಮ ಕೋಪಗೊಂಡಿದ್ದಾಳೆ.

55

ಮದುವೆಗೂ ಮುನ್ನ ಪಿಂಕಿಯನ್ನು ಸೀನ ಪ್ರೀತಿಸುತ್ತಿದ್ದನು. ಆದ್ರೆ ತಂದೆಯ ಬಲವಂತಕ್ಕೆ ಗುಂಡಮ್ಮಳನ್ನು ಸೀನ ಮದುವೆ ಆಗುತ್ತಾನೆ. ಮದುವೆ ಬಳಿಕ ತಂದೆಯಿಂದ ಗೌರವ, ಜಿಮ್ ತೆಗೆಯಲು ಒಪ್ಪಿಗೆ ಸಿಕ್ಕಿದೆ. ಇದರಿಂದಾಗಿ ಸೀನನಿಗೆ ಗುಂಡಮ್ಮನ ಮೇಲೆ ಲೈಟ್‌ ಆಗಿ ಲವ್ ಆಗ್ತಿದೆ.

Read more Photos on
click me!

Recommended Stories