OTT Releases This Week:‌ ಒಟಿಟಿಯಲ್ಲಿ ತೆರೆ ಕಂಡ, ಕುರ್ಚಿಯ ತುತ್ತ ತುದಿಯಲ್ಲಿ ಕೂರಿಸೋ ಸಿನಿಮಾಗಳಿವು!

Published : Jan 30, 2026, 01:12 PM IST

Ott Release This Week Movies, Web Series: ಈ ವಾರ ಕೆಲ ಸಿನಿಮಾಗಳು, ಸಿರೀಸ್‌ಗಳು ರಿಲೀಸ್‌ ಆಗುತ್ತಿವೆ. ಬಹು ನಿರೀಕ್ಷೆಯಿಟ್ಟುಕೊಂಡ ಸಿನಿಮಾಗಳು ರಿಲೀಸ್‌ ಆಗುತ್ತಿರುವುದು ವಿಶೇಷ. ಈ ವೀಕೆಂಡ್‌ನ್ನು ಸುಂದರಗೊಳಿಸುವ ಸಿನಿಮಾಗಳಿವು 

PREV
17
ಚಾಂಪಿಯನ್ (Champion)

ನೆಟ್‌ಫ್ಲಿಕ್ಸ್ (Netflix)

ಇದೊಂದು ತೆಲುಗಿನ ಪೀರಿಯಡ್ ಸ್ಪೋರ್ಟ್ಸ್ ಡ್ರಾಮಾ. ರೋಷನ್ ಮೇಕಾ ಮತ್ತು ಅನಿಶ್ವರ ರಾಜನ್ ನಟಿಸಿರುವ ಈ ಸಿನಿಮಾವು 1947ರ ಸ್ವಾತಂತ್ರ್ಯ ಹೋರಾಟ, ಫುಟ್‌ಬಾಲ್ ಕ್ರೀಡೆಯನ್ನು ಬೆರೆಸಿ ಹೇಳುವ ಕಥೆಯಾಗಿದೆ. ಇದು ಕನ್ನಡ ಆಡಿಯೋದೊಂದಿಗೆ ಸ್ಟ್ರೀಮಿಂಗ್ ಆಗುತ್ತಿದೆ.

27
ದೇವಖೇಲ್ (Devkhel)

ETV Win

ವರುಣ್ ಸಂದೇಶ್ ಸಿನಿಮಾ ಇದಾಗಿದೆ. ಈ ತೆಲುಗು ಸಿನಿಮಾವು ಒಬ್ಬ ಪ್ರಾಮಾಣಿಕ ಕಾನ್ಸ್‌ಟೇಬಲ್ ಸುತ್ತ ಇರುವ ಕ್ರೈಮ್ ಕಥೆಯಾಗಿದೆ. ದಕ್ಷಿಣ ಭಾರತದ ಗ್ರಾಮೀಣ ಸೊಗಡಿನ ಕ್ರೈಮ್ ಸಿನಿಮಾ ಇದು.

37
ದೇವಖೇಲ್ (Devkhel)

Zee5

ಇದೊಂದು ಮರಾಠಿ ಸೈಕಲಾಜಿಕಲ್ ಥ್ರಿಲ್ಲರ್ ಸರಣಿ. ಒಂದು ಹಳ್ಳಿಯಲ್ಲಿ ನಡೆಯುವ ನಿಗೂಢ ಕೊಲೆಗಳ ಸುತ್ತ ಈ ಕಥೆ ಸಾಗುತ್ತದೆ. ರಹಸ್ಯ, ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

47
ಸರ್ವಂ ಮಾಯಾ (Sarvam Maya)

ಜಿಯೋ ಹಾಟ್‌ಸ್ಟಾರ್ (JioHotstar)

ನಿವಿನ್ ಪೌಲಿ ನಟನೆಯ ಮಲಯಾಳಂ ಸೂಪರ್ ನ್ಯಾಚುರಲ್ ಕಾಮಿಡಿ ಸಿನಿಮಾ ಇದಾಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿತ್ತು. ಸದ್ಯಕ್ಕೆ ಇದು ಮಲಯಾಳಂನಲ್ಲಿ ಬಿಡುಗಡೆಯಾಗಿದೆ.

57
ದಲ್ದಲ್ (Daldal)

ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video)

ಮುಂಬೈನ ಹಿನ್ನೆಲೆಯಲ್ಲಿ ಭೂಮಿ ಪಡ್ನೇಕರ್ ನಟನೆಯ ಸಿರೀಸ್‌ ಇದಾಗಿದೆ. ಈ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯಲ್ಲಿ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಸರಣಿ ಕೊಲೆಗಾರನನ್ನು ಹೇಗೆ ಪತ್ತೆ ಹಚ್ಚುತ್ತಾರೆ ಎಂಬ ಕಥೆ ಇಲ್ಲಿದೆ.

67
ವಾ ವಾತಿಯಾರ್ (Vaa Vaathiyaar)

ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video)

ಕಾರ್ತಿ, ಕೃತಿ ಶೆಟ್ಟಿ ನಟನೆಯ ಈ ಸಿನಿಮಾ ಥಿಯೇಟರ್‌ನಲ್ಲಿ ಸೋತಿದೆ. ತಮಿಳು ಆಕ್ಷನ್ ಕಾಮಿಡಿ ಸಿನಿಮಾದಲ್ಲಿ ಕಾರ್ತಿ ಒಬ್ಬ ಭ್ರಷ್ಟ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಹಳೆಯ ಕಾಲದ ಮಸಾಲಾ ಸಿನಿಮಾಗಳ ಶೈಲಿಯಲ್ಲಿರುವ ಈ ಸಿನಿಮಾವು, ಈಗ ಕನ್ನಡದಲ್ಲೂ ನೋಡಲೂಬಹುದು.

77
ಧುರಂಧರ್ (Dhurandhar)

ನೆಟ್‌ಫ್ಲಿಕ್ಸ್ (Netflix)

ಆದಿತ್ಯ ಧರ್ ನಿರ್ದೇಶನದ ಹಿಂದಿ ಸ್ಪೈ ಆಕ್ಷನ್ ಥ್ರಿಲ್ಲರ್‌ ಸಿನಿಮಾ ಇದಾಗಿದೆ. ರಣವೀರ್ ಸಿಂಗ್, ಸಂಜಯ್ ದತ್ ಮತ್ತು ಅಕ್ಷಯ್ ಖನ್ನಾ ನಟಿಸಿದ್ದಾರೆ. ಥಿಯೇಟರ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಈ ಸಿನಿಮಾ ಈಗ ಕನ್ನಡ ಡಬ್ಬಿಂಗ್ ಆವೃತ್ತಿಯೊಂದಿಗೆ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಹೈ-ವೋಲ್ಟೇಜ್ ಆಕ್ಷನ್ ಇಷ್ಟಪಡುವವರಿಗೆ ಇದು ಹೇಳಿಮಾಡಿಸಿದ ಸಿನಿಮಾವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories