ಹಿಂದಿವಾಲನಿಗೆ Niveditha Gowda ಕನ್ನಡ ಪಾಠ! 'ಹೇಳು' ಎನ್ನೋದನ್ನ ಸರಿಯಾಗಿ ಹೇಳಮ್ಮಾ ಎಂದ ಫ್ಯಾನ್ಸ್​

Published : Nov 01, 2025, 04:21 PM IST

ಕನ್ನಡ ರಾಜ್ಯೋತ್ಸವದ ನಿಮಿತ್ತ ನಟಿ ನಿವೇದಿತಾ ಗೌಡ, ಹಿಂದಿ ಮಾತನಾಡುವ ವ್ಯಕ್ತಿಗೆ ಕನ್ನಡ ಕಲಿಸುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 'ಮುದ್ದು ರಾಕ್ಷಸಿ' ಚಿತ್ರದ ಪ್ರಚಾರದಂತಿರುವ ಈ ವಿಡಿಯೋದಲ್ಲಿ, ಅವರ ಕನ್ನಡ ಉಚ್ಚಾರಣೆಗಾಗಿಯೇ ನೆಟ್ಟಿಗರಿಂದ ಟ್ರೋಲ್ ಆಗಿದ್ದಾರೆ.

PREV
17
ಉಕ್ಕುತ್ತಿರುವ ಕನ್ನಡಾಭಿಮಾನ

ಇಂದು ಕನ್ನಡ ರಾಜ್ಯೋತ್ಸವ. ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಮ್ಮ ಕರುನಾಡ ಜನರಿಗೂ ಈ ತಿಂಗಳು ಪೂರ್ತಿ ಕನ್ನಡದ ಮೇಲೆ ಅಭಿಮಾನ ಉಕ್ಕಿ ಹರಿಯುವ ತಿಂಗಳು ಕೂಡ. ಕರ್ನಾಟಕದಲ್ಲಿಯೇ ಹುಟ್ಟಿ, ಬೆಳೆದರೂ ಕನ್ನಡವೆಂದರೆ ಅಸಡ್ಡೆ ತೋರುವ ಒಂದಷ್ಟು ಜನರು ಕೂಡ ತಮ್ಮ ಕನ್ನಡದ ಪಾಂಡಿತ್ಯವನ್ನು ಮೆರೆಯುವುದು ಉಂಟು.

27
ರೀಲ್ಸ್​ನಿಂದ ಫೇಮಸ್​

ಚಂದನ್​ ಶೆಟ್ಟಿ ಜೊತೆ ಡಿವೋರ್ಸ್​ ಪಡೆದ ಬಳಿಕ ಧಾರಾಳ ದೇಹಪ್ರದರ್ಶನದಿಂದಲೇ ಫೇಮಸ್​ ಆಗಿರೋ ನಟಿ ನಿವೇದಿತಾ ಗೌಡ (Niveditha Gowda) ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಈಗ ಒಂದು ವಿಡಿಯೋ ಶೇರ್​ ಮಾಡಿಕೊಂಡು, ಹಿಂದಿವಾಲನಿಗೆ ಕನ್ನಡದ ಪಾಠ ಮಾಡಿದ್ದಾರೆ!

37
ಮುದ್ದು ರಾಕ್ಷಸಿ ಪ್ರಮೋಷನ್​?

ಮುದ್ದು ರಾಕ್ಷಸಿ ಚಿತ್ರದ ಪ್ರಮೋಷನ್​ ಎಂಬಂತೆ, ಅದರ ಶೀರ್ಷಿಕೆಯನ್ನು ಈ ವಿಡಿಯೋಗೆ ನೀಡಲಾಗಿದೆ. ಇದರಲ್ಲಿ ಹಿಂದಿವಾಲನಿಗೆ ಕನ್ನಡದ ಪಾಠ ಮಾಡಿರುವ ದೃಶ್ಯದ ಡಬ್ಬಿಂಗ್​ ಮಾಡುವುದನ್ನು ತೋರಿಸಿದ್ದಾರೆ ನಿವೇದಿತಾ. ಈ ಮೂಲಕ ತಮಗೂ ಕನ್ನಡ ಬರುತ್ತದೆ ಎನ್ನುವುದನ್ನು ನೆಟ್ಟಿಗರಿಗೆ ತಿಳಿಸಿದ್ದಾರೆ.

47
ಹಿಂದಿವಾಲನಿಗೆ ಕನ್ನಡ

ಇದರಲ್ಲಿ ಅಂಗಡಿಗೆ ಬರುವ ಹಿಂದಿವಾಲ ಕನ್ನಡದ ಬಗ್ಗೆ ಅಸಡ್ಡೆ ಮಾಡಿದಾಗ, ನಿವೇದಿತಾ ಆತನಿಗೆ ಬುದ್ಧಿ ಹೇಳುವ ದೃಶ್ಯವಿದೆ. ಕರ್ನಾಟಕ ಎನ್ನಲು ಬರಲ್ಲ, ಕರ್ನಾಟಕ್ ಎನ್ನುತ್ತೀರಿ, ಕನ್ನಡ್​ ಎನ್ನುತ್ತೀರಿ ಎಂದೆಲ್ಲಾ ಬೈದು, ಆತನಿಂದ ಸರಿಯಾಗಿ ಹೇಳಿಸಿದ್ದಾರೆ ನಿವೇದಿತಾ.

57
ಹೇಳು ಎನ್ನೋ ಬದ್ಲು...

ಇದೇ ಡೈಲಾಗ್​ನಲ್ಲಿ ಹೇಳ್ತೀರಾ, ಹೇಳ್ತೀರಾ ಎನ್ನುವ ಶಬ್ದ ಹೇಲ್ತೀರಾ, ಹೇಲ್ತೀರಾ ಎನ್ನುವ ಹಾಗೆ ಕೇಳಿಸುತ್ತದೆ. ಇದು ಸ್ವಲ್ಪ ಸ್ಟೈಲ್​ ಆಗಿ ಹೇಳಲು ಹೋದ ಕಾರಣ ಹೀಗೆ ಕೇಳಿಸುತ್ತಿದೆಯಷ್ಟೇ. ಆದರೆ ಇದನ್ನೇ ಟ್ರೋಲ್​ ಮಾಡಿರೋ ನೆಟ್ಟಿಗರು ಮೊದಲು ಹೇಳು ಎನ್ನೋದನ್ನ ಸರಿಯಾಗಿ ಕಲಿಯಮ್ಮಾ ಎನ್ನುತ್ತಿದ್ದಾರೆ.

67
ಕನ್ನಡ ಯಾವಾಗ ಕಲಿತೆ?

ನೀನ್ಯಾವಾಗ ಕನ್ನಡ ಕಲಿತೆ ಎಂದು ಕೆಲವರು ಪ್ರಶ್ನಿಸಿದ್ರೆ, ನಿನಗೂ ಕನ್ನಡ ಬರತ್ತೆ ಎಂದು ಇವತ್ತೇ ಗೊತ್ತಾಗಿದ್ದು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಕನ್ನಡ ಬಂದರೆ ಕೆಟ್ಟ ಕಮೆಂಟ್ಸ್​ ಹಾಕಿದ್ರೂ ಮತ್ತದೇ ಮಾಡ್ತಿಯಲ್ಲಾ ಎಂದು ಮತ್ತೆ ಕೆಲವರು ಪ್ರಶ್ನಿಸಿದ್ದಾರೆ.

77
ಕಾಲೆಳೆಯುವ ನೆಟ್ಟಿಗರು

ಒಟ್ಟಿನಲ್ಲಿ ನಿವೇದಿತಾ ಗೌಡ ಏನು ಮಾಡಿದರೂ, ಯಾವುದೇ ರೀಲ್ಸ್​, ವಿಡಿಯೋ ಹಾಕಿದರೂ ಅವರ ಕಾಲೆಳೆಯುವುದನ್ನೇ ಕಾಯುತ್ತಿರುತ್ತಾರೆ ಹಲವರು. ಇದಕ್ಕೆ ಈ ಹೊಸ ವಿಡಿಯೋ ತಾಜಾ ಉದಾಹರಣೆಯಾಗಿದೆ.

ನಿವೇದಿತಾ ಗೌಡ ವಿಡಿಯೋ ನೋಡಿ ಇದರ ಮೇಲೆ ಕ್ಲಿಕ್​ ಮಾಡಿ

Read more Photos on
click me!

Recommended Stories