Bigg Boss 12 ಗ್ರ್ಯಾಂಡ್​ ಫಿನಾಲೆ ಫೋಟೋ ರಿವೀಲ್​ ಆಗೋಯ್ತು! ಗೆಲ್ಲೋರು, ರನ್ನರ್​ ಅಪ್​ ಇವರೇಯಂತೆ!

Published : Nov 01, 2025, 03:42 PM IST

ಬಿಗ್​ಬಾಸ್ 12 ಸೀಸನ್ ಮುಗಿಯಲು ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೇ, ಗ್ರ್ಯಾಂಡ್ ಫಿನಾಲೆಯ ಎಐ ನಿರ್ಮಿತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಅಂತಿಮ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದು, ಇದು ವೀಕ್ಷಕರಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

PREV
18
ಬಿಗ್​ಬಾಸ್ ಗ್ರ್ಯಾಂಡ್​ ಫಿನಾಲೆಯ ಫೋಟೋ!

ಬಿಗ್​ಬಾಸ್ 12 (Bigg Boss 12) ಸೆಪ್ಟೆಂಬರ್​ 28ರಿಂದ ಆರಂಭವಾಗಿದೆ. ಇದು ಮುಗಿಯಲು ಇನ್ನೂ ಎರಡು ತಿಂಗಳು ಬಾಕಿ ಇವೆ. ಆದರೆ ಇದಾಗಲೇ ಗ್ರ್ಯಾಂಡ್​ ಫಿನಾಲೆಯ ಫೋಟೋ ಕೂಡ ರಿವೀಲ್​ ಆಗೋಗಿದೆ!

28
ಎಐ ಫೋಟೋಗಳು

ಅಷ್ಟಕ್ಕೂ ಹೇಳಿಕೇಳಿ ಇದು ಎಐ ಯುಗ. AI ಮೂಲಕ ಏನು ಬೇಕಾದರೂ ಮಾಡಲು ಸಾಧ್ಯವಾಗಿದೆ. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಿಗ್​ಬಾಸ್ ಕುರಿತಂತೆ ಇದಾಗಲೇ ಹಲವಾರು ಕೃತಕ ಬುದ್ಧಿಮತ್ತೆಯ ಫೋಟೋಗಳು ವೈರಲ್​ ಆಗುತ್ತಲೇ ಇವೆ.

38
ಅತಿ ಹೆಚ್ಚು ಟಿಆರ್​ಪಿ

ಇದರಲ್ಲಿ ಹೆಚ್ಚಾಗಿ ಎಐ ಫೋಟೋ ಬರುತ್ತಿರುವುದು ಗಿಲ್ಲಿ ನಟ (Gilli Nata) ಮತ್ತು ಅಶ್ವಿನಿ ಗೌಡ (Ashwini Gowda) ಅವರದ್ದು. ಗಿಲ್ಲಿ ಅವರದ್ದು ಪಾಸಿಟಿವ್​ ಆಗಿ ಹಾಗೂ ಅಶ್ವಿನಿ ಅವರದ್ದು ನೆಗೆಟಿವ್​ ರೀತಿಯಲ್ಲಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

48
ಗಿಲ್ಲಿ- ಅಶ್ವಿನಿ ಫೇಮಸ್​

ಗಿಲ್ಲಿ ನಟ ತಮ್ಮ ಹಾಸ್ಯದಿಂದಲೇ ಬಿಗ್​ಬಾಸ್ ಮನೆಯಲ್ಲಿ ಸ್ಥಾನ ಉಳಿಸಿಕೊಂಡಿದ್ದರೆ, ಅಶ್ವಿನಿ ಗೌಡ ಅವರು ಹಾರಾಟ, ಚೀರಾಟ, ಕೂಗಾಟಗಳ ಮೂಲಕ ಬಿಗ್​ಬಾಸ್​ನ ಟಿಆರ್​ಪಿ ಹೆಚ್ಚು ಮಾಡುತ್ತಿದ್ದಾರೆ. ಒಂದರ್ಥದಲ್ಲಿ ಅಶ್ವಿನಿ ಅವರನ್ನು ವೀಕ್ಷಕರು ಟೀಕಿಸಿದರೂ, ಇಂಥವರಿಂದಲೇ ಬಿಗ್​ಬಾಸ್​ ಹೆಚ್ಚು ವೀಕ್ಷಕರನ್ನು ಪಡೆದುಕೊಳ್ಳುವುದು ಎನ್ನುವುದೂ ಈಗೇನು ಗುಟ್ಟಾಗಿ ಉಳಿದಿಲ್ಲ.

58
ಕಮೆಂಟ್ಸ್​ ನೋಡಿದ್ರೆ...

ಆದರೆ, ಇದೀಗ ವಿನ್ನರ್​ ವಿಷಯಕ್ಕೆ ಬರುವುದಾದರೆ, ಬಿಗ್​ಬಾಸ್ ವೀಕ್ಷಕರು ಹಾಗೂ ಸೋಷಿಯಲ್​ ಮೀಡಿಯಾದಲ್ಲಿ ಬರುವ ಕಮೆಂಟ್ಸ್​ ನೋಡಿದರೆ, ಹೆಚ್ಚಿನವರ ಒಲವು ಗಿಲ್ಲಿ ನಟನ ಮೇಲಿದೆ. ಗಿಲ್ಲಿ ಗೆಲ್ಲಬೇಕು ಎಂದು ಹೇಳುವವರೇ ಹೆಚ್ಚು.

68
ಯಾರ ಮೇಲೆ ಒಲವು?

ಅದೇ ರೀತಿ, ರಕ್ಷಿತಾ ಶೆಟ್ಟಿ (Bigg Boss Rakshitha Shetty) ಮತ್ತು ಮುಗ್ಧರಾಗಿರುವ ಮಲ್ಲಮ್ಮ ಅವರ ಮೇಲೂ ಒಲವು ಅಷ್ಟೇ ಪ್ರಮಾಣದಲ್ಲಿ ಇದೆ. ಇದನ್ನು ಬಿಟ್ಟರೆ ಉಳಿದವರ ಅಭಿಮಾನಿಗಳೂ ಕಡಿಮೆ ಏನಿಲ್ಲ. ಎಲ್ಲರಿಗೂ ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿ ಫ್ಯಾನ್ಸ್​ ಇದ್ದಾರೆ.

78
ಸೋಷಿಯಲ್​ ಮೀಡಿಯಾದಲ್ಲಿ ವೈರಲ್

ಆದರೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಗ್ರ್ಯಾಂಡ್​ ಫಿನಾಲೆ ಫೋಟೋದಲ್ಲಿ ಕಿಚ್ಚ ಸುದೀಪ್​ (Kichcha Sudeep) ಇಬ್ಬರು ಸ್ಪರ್ಧಿಗಳ ಜೊತೆ ಗ್ರ್ಯಾಂಡ್ ಫಿನಾಲೆಯಲ್ಲಿ ಕಾಣಿಸಿಕೊಂಡಿರುವ ರೀತಿಯಲ್ಲಿ ಎಐ ಫೋಟೋ ರಚಿಸಲಾಗಿದೆ.

88
ಗಿಲ್ಲಿ-ರಕ್ಷಿತಾ

ಇದರಲ್ಲಿ ಒಂದು ಕಡೆ ಗಿಲ್ಲಿ ನಟ ಮತ್ತು ಮತ್ತೊಂದೆಡೆ ರಕ್ಷಿತಾ ಶೆಟ್ಟಿ ಅವರನ್ನು ನೋಡಬಹುದು. ಇದರ ಫೋಟೋ ವೈರಲ್​ ಆಗುತ್ತಲೇ ಹಲವರು ಇದು ಸತ್ಯವಾಗಲಿ ಎನ್ನುತ್ತಿದ್ದರೆ, ಕೆಲವರು ಬೇರೆ ಬೇರೆ ಸ್ಪರ್ಧಿಗಳ ಹೆಸರುಗಳನ್ನು ಹೇಳುವುದನ್ನು ನೋಡಬಹುದಾಗಿದೆ.

ರಕ್ಷಿತಾ ಟಾಕ್ಸ್​ ಶೇರ್​ ಮಾಡಿದ ಫೋಟೋ ಇಲ್ಲಿದೆ.

Read more Photos on
click me!

Recommended Stories