ಬಿಗ್ ಬಾಸ್ ಸ್ಪರ್ಧಿಗೆ ಡೆಂಗ್ಯೂ, ವಾರಾಂತ್ಯದ ಎಲಿಮಿನೇಶನ್‌ಗೂ ಮೊದಲೇ ಮನೆಯಿಂದ ಔಟ್, ಆರಂಭದಲ್ಲಿ ಸೀಕ್ರೆಟ್ ರೂಂ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಡೆಂಗ್ಯೂವಿನಿಂದ ಬಳಲುತ್ತಿರುವ ಬಿಗ್ ಬಾಸ್ ಸ್ಪರ್ಧಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಬಿಗ್ ಬಾಸ್ ಶೋ ಕ್ಷಣ ಕ್ಷಣಕ್ಕೂ ರೋಚಕ ಟ್ವಿಸ್ಟ್ ಸಿಗುತ್ತಿದೆ. ವಾರಾಂತ್ಯದಲ್ಲಿ ನಿರೂಪಕರ ಮಾತು, ಎಲಿಮಿನೇಶನ್ ಸೇರಿದಂತೆ ಶೋ ಮತ್ತಷ್ಟು ಕುತೂಹಲ ಘಟ್ಟ ತಲುಪಲಿದೆ. ಸಾಮಾನ್ಯವಾಗಿ ಶನಿವಾರ ಎಲಿಮಿನಿಶನ್ ಘೋಷಣೆಯಾಗುತ್ತದೆ. ಬಳಿಕ ಎಲಿಮಿನೇಟ್ ಆದ ಸ್ಪರ್ಧಿಗಳು ಮನಯಿಂದ ಹೊರಬರುತ್ತಾರೆ. ಆದರೆ ಈ ವಾರ ಎಲಿಮಿನೇಶನ್ ರೌಂಡ್‌ಗೂ ಮೊದಲೇ ಬಿಗ್ ಬಾಸ್ ಸ್ಪರ್ಧಿ ಮನೆಯಿಂದ ಹೊರಬಿದ್ದಿದ್ದಾರೆ. ಆರೋಗ್ಯದ ಕಾರಣದಿಂದ ಸ್ಪರ್ಧಿ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
26
ಹೊರ ಬಿದ್ದ ಸ್ಪರ್ಧಿ ಯಾರು
ಬಿಗ್ ಬಾಸ್ 19ನೇ ಆವೃತ್ತಿಯಲ್ಲಿ ಈ ಬೆಳವಣಿಗೆ ನಡೆದಿದೆ. ಹಿಂದಿ ಬಿಗ್ ಬಾಸ್ ಶೋನ ಪ್ರಮುಖ ಸ್ಪರ್ಧಿ ಪ್ರಣಿತ್ ಮೋರೆ ಮನೆಯಿಂದ ಹೊರ ನಡೆದಿದ್ದಾರೆ. ಎಲಿಮಿನೇಶನ್, ಸಲ್ಮಾನ್ ಖಾನ್ ಮಾತುಕತೆಗೂ ಮೊದಲೇ ಪ್ರಣಿತ್ ಮೋರೆ ಮನೆಯಿಂದ ಹೊರಬಂದಿದ್ದೇಕೆ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಹಲವರು ಪ್ರಣಿತ್ ಮೋರೆಯನ್ನು ಸೀಕ್ರೆಟ್ ರೂಂಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
36
ಆರೋಗ್ಯ ಕಾರಣದಿಂದ ಪ್ರಣಿತ್ ಮೋರೆ ಔಟ್
ಬಿಗ್ ಬಾಸ್ 19ರ ಆವೃತ್ತಿಯಲ್ಲಿರುವ ಪ್ರಣಿತ್ ಮೋರೆ ಉತ್ತಮ ಆಟದ ಮೂಲಕ ಗಮನಸೆಳೆದಿದ್ದಾರೆ. ಪ್ರಣಿತ್ ಮೋರೆಗೆ ಡೆಂಗ್ಯೂ ಆರೋಗ್ಯ ಸಮಸ್ಯೆ ಕಾಡಿದೆ ಎಂದು ವರದಿಯಾಗಿದೆ. ಆರೋಗ್ಯ ಕಾರಣದಿಂದ ಪ್ರಣಿತ್ ಮೋರೆ ಎಲಿಮಿನೇಶನ್ ರೌಂಡ್‌ಗೂ ಮೊದಲೇ ಹೊರಬಂದಿದ್ದಾರೆ. ಅಸಲಿಗೆ ಎಲಿಮೇಶನ್ ಪಟ್ಟಿಯಲ್ಲೂ ಪ್ರಣಿತ್ ಮೋರೆ ಇರಲಿಲ್ಲ.
ಪ್ರಣಿತ್ ಮೋರೆಗೆ ಡೆಂಗ್ಯೂ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದಾರೆ ಅನ್ನೋ ವರದಿಗಳು ಪ್ರಕಟವಾಗಿದೆ. ಪ್ರಣಿತ್ ಮೋರೆ ಚೇತರಿಸಿಕೊಂಡ ಬಳಿಕ ಮತ್ತೆ ಬಿಗ್ ಬಾಸ್ ಮನೆ ಸೇರಿಕೊಳ್ಳಲು ಅವಕಾಶವಿದೆ. ನಿರ್ದಿಷ್ಠ ದಿನಗಳ ಒಳಗೆ ಪ್ರಣಿತ್ ಮೋರೆ ಚೇತರಿಸಿಕೊಂಡು ಬಿಗ್ ಬಾಸ್ ಸೇರಿಕೊಳ್ಳಬಹುದು. ಆರೋಗ್ಯ ಸಂಪೂರ್ಣ ಚೇತರಿಸಿಕೊಂಡರೆ ಮಾತ್ರ ಬಿಗ್ ಬಾಸ್ ಮನೆ ಸೇರಿಕೊಳ್ಳಲು ಸಾಧ್ಯವಾಗಲಿದೆ.
ಮರಳಿ ಮನೆ ಸೇರುತ್ತಾರೆ ಪ್ರಣಿತ್ ಮೋರೆ
56
ಶೀಘ್ರ ಚೇತರಿಕೆಗೆ ಹಾರೈಕೆ
ಪ್ರಣಿತ್ ಮೋರೆಗೆ ಡೆಂಗ್ಯೂ ಅನ್ನೋ ಸುದ್ದಿ ಬಹಿರಂಗವಾಗುತ್ತದ್ದಂತೆ ಅಭಿಮಾನಿಗಳು ಶೀಘ್ರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರಣಿತ್ ಫೈನಲ್ ಕಂಟೆಸ್ಟೆಂಟ್. ಹೀಗಾಗಿ ಆತನ ಅವಶ್ಯತಕೆ ಬಿಗ್ ಬಾಸ್ ಮನೆಗಿದೆ. ಶೀಘ್ರದಲ್ಲೇ ಚೇತರಿಸಿಕೊಂಡು ಬಿಗ್ ಬಾಸ್ ಸೇರಿಕೊಳ್ಳಲಿ ಎಂದು ಹಲವರು ಹಾರೈಸಿದ್ದಾರೆ.
ಶೀಘ್ರ ಚೇತರಿಕೆಗೆ ಹಾರೈಕೆ
66
ಭಾನುವಾರ ಅಧೀಕೃತ ಘೋಷಣೆ ಸಾಧ್ಯತೆ
ಕಳೆದ ವಾರ ನೇಹಾ ಚುದಾಸಮಾ ಹಾಗೂ ಬಶೀರ್ ಆಲಿ ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು. ಈ ವಾರ ಪ್ರಣಿತ್ ಮೋರೆ ಆರೋಗ್ಯ ಕಾರಣದಿಂದ ಹೊರನಡೆಯುತ್ತಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿಲ್ಲ. ಆದರೆ ಈ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ.