ನಮ್ಮ ಸಮಾಜವೇ ಹಾಗೆ ಹೆಣ್ಮಕ್ಕಳನ್ನು ದೂಷಿಸಿ ಸುಮ್ಮನೆ ಬ್ಲೇಮ್ ಗೇಮ್ ಮಾಡ್ತಾರೆ: ನಿವೇದಿತಾ ಗೌಡ ಗರಂ

Published : Mar 13, 2025, 09:58 AM ISTUpdated : Mar 13, 2025, 10:08 AM IST

ಡಿವೋರ್ಸ್ ನಂತರ ಹೆಣ್ಣುಮಕ್ಕಳನ್ನು ದೂರುವುದು ಎಷ್ಟು ಸರಿ ಎಂದು ನೆಟ್ಟಿಗರನ್ನು ನಿವೇದಿತಾ ಗೌಡ ಪ್ರಶ್ನೆ ಮಾಡಿದ್ದಾರೆ.

PREV
16
ನಮ್ಮ ಸಮಾಜವೇ ಹಾಗೆ ಹೆಣ್ಮಕ್ಕಳನ್ನು ದೂಷಿಸಿ ಸುಮ್ಮನೆ ಬ್ಲೇಮ್ ಗೇಮ್ ಮಾಡ್ತಾರೆ: ನಿವೇದಿತಾ ಗೌಡ ಗರಂ

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಜೋಡಿಯಾಗಿ ನಟಿಸಿರುವ ಮುದ್ದು ರಾಕ್ಷಸಿ ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದೆ. ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ಶುರುವಾಗಬೇಕಿದೆ. 

26

ಡಿವೋರ್ಸ್‌ ನಂತರ ಒಟ್ಟಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು. ಇಷ್ಟು ದಿನ ಡಿವೋರ್ಸಿ, ಐರನ್ ಲೆಗ್‌ ಎಂದು ನೆಗೆಟಿವ್ ಟ್ರೋಲ್ ಮಾಡುತ್ತಿದ್ದವರಿಗೆ ನಿವೇದಿತಾ ಉತ್ತರಿಸಿದ್ದಾರೆ.

36

'ಡಿವೋರ್ಸ್‌ ಆದಾಗ ಅಥವಾ ಇನ್ನೇನೋ ಆದರೂ ಕೂಡ ನಮ್ಮ ಸಮಾಜದಲ್ಲಿ ಹುಡುಗಿಯದ್ದು ತಪ್ಪು ಅಂತ ಹೇಳುತ್ತಾರೆ. ನಮ್ಮ ಲೈಫ್‌ನಲ್ಲಿ ಏನೇನು ಸಮಸ್ಯೆಗಳು ಇರುತ್ತವೆ, ಅದನ್ನು ಎಲ್ಲರ ಮುಂದೆ ಹೇಳೋಕೆ ಆಗೋದಿಲ್ಲ, ಅದು ಎಲ್ಲರಿಗೂ ಗೊತ್ತಿಲ್ಲ.'

46

ಹೇಳೋ ಅವಶ್ಯಕತೆ ಇಲ್ಲ. ಡಿವೋರ್ಸ್‌ ಆದಾಗ ಅವರದ್ದೇ ತಪ್ಪಿರಬಹುದು, ಹಾಗೆ ಮಾಡಿದ್ರು, ಹೀಗೆ ಮಾಡಿದ್ರು ಅಂತ ಹೇಳ್ತಾರೆ. ಇದನ್ನು ಬದಲಾಯಿಸೋಕೆ ಆಗೋದಿಲ್ಲ. ಈ ರೀತಿ ಮಾತಾಡೋದು ತಪ್ಪು, ಮಾನವೀಯತೆ ಇಲ್ಲ ಅಂತ ಅನಿಸುತ್ತದೆ' ಎಂದಿದ್ದಾರೆ. 

56

'ಬೇರೆಯವರು ನನ್ನ ಬಗ್ಗೆ ಹೇಗೆ ಯೋಚನೆ ಮಾಡ್ತಾರೆ ಅಂತ ನಾನು ತಲೆಕೆಡಿಸಿಕೊಳ್ಳೋದಿಲ್ಲ. ಯೋಚಿಸೋದು ಅವರ ಪ್ರಾಬ್ಲಮ್‌, ನನ್ನ ಪ್ರಾಬ್ಲಮ್‌ ಅಲ್ಲ' ಎಂದು ನಿವೇದಿತಾ ಸಖತ್ ಖಡಕ್ ಆಗಿ ಉತ್ತರಿಸಿದ್ದಾರೆ. 
 

66
Niveditha Gowda

ಡಿವೋರ್ಸ್‌ ನಂತರ ಯೂಟ್ಯೂಬ್ ಚಾನೆಲ್‌ನಿಂದ ನಿವೇದಿತಾ ಗೌಡ ದೂರ ಉಳಿದುಬಿಟ್ಟಿದ್ದಾರೆ. ಆದರೆ ಇನ್‌ಸ್ಟಾಗ್ರಾಂನಲ್ಲಿ ಮಾಡುವ ಪ್ರತಿಯೊಂದು ಪೋಸ್ಟ್ ವೈರಲ್ ಆಗುತ್ತೆ. 

Read more Photos on
click me!

Recommended Stories