Bigg Boss ಐಶ್ವರ್ಯಾ ಶಿಂಧೋಗಿ ಧರಿಸಿರೋ ಬನಾರಸಿ ಸಿಲ್ಕ್‌ ಸೀರೆ ಬೆಲೆಗೆ ಬಂಗಾರ ಬರತ್ತೆ ಅಂದ್ರೆ ನಂಬ್ತೀರಾ?

Published : Mar 12, 2025, 04:20 PM ISTUpdated : Mar 12, 2025, 05:28 PM IST

ಬಿಗ್‌ ಬಾಸ್‌ ಕನ್ನಡ 11 ಖ್ಯಾತಿಯ ಮೋಕ್ಷಿತಾ ಪೈ ಹಾಗೂ ಐಶ್ವರ್ಯಾ ಶಿಂಧೋಗಿ, ಶಿಶಿರ್‌ ಶಾಸ್ತ್ರಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದಾರೆ. ಆ ವೇಳೆ ಅವರು ಧರಿಸಿದ್ದ ಬನಾರಸಿ ಸಿಲ್ಕ್‌ ಸೀರೆ ಬೆಲೆ ಎಷ್ಟು ಎನ್ನುವ ಪ್ರಶ್ನೆ ಮೂಡಿದೆ. 

PREV
17
Bigg Boss ಐಶ್ವರ್ಯಾ ಶಿಂಧೋಗಿ ಧರಿಸಿರೋ ಬನಾರಸಿ ಸಿಲ್ಕ್‌ ಸೀರೆ ಬೆಲೆಗೆ ಬಂಗಾರ ಬರತ್ತೆ ಅಂದ್ರೆ ನಂಬ್ತೀರಾ?

ಮಂಗಳೂರಿನಿಂದ 147 ಕಿ.ಮೀ.ಗಳಷ್ಟು ಅಂತರದಲ್ಲಿ ಈ ದೇವಸ್ಥಾನ ಇದೆ. ಕೊಡಚಾದ್ರಿಯ ತಪ್ಪಲು ಪ್ರದೇಶದಲ್ಲಿ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಇದೆ. 

27

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ಶ್ರೀ ಮೂಕಾಂಬಿಕಾ ದೇವಸ್ಥಾನವಿದೆ. ಈ ದೇಗುಲಕ್ಕೆ ಮೋಕ್ಷಿತಾ ಪೈ, ಐಶ್ವರ್ಯಾ ಶಿಂಧೋಗಿ, ಶಿಶಿರ್‌ ಶಾಸ್ತ್ರೀ ಅವರು ಭೇಟಿ ಕೊಟ್ಟಿದ್ದಾರೆ. 

37

1200 ವರ್ಷಗಳ ಹಿಂದೆ ಆದಿ ಶಂಕರಾಚಾರ್ಯರು ಮೂಕಾಂಬಿಕಾ ದೇವಸ್ಥಾನವನ್ನು ಸ್ಥಾಪಿಸಿದರು. ಶ್ರೀಚಕ್ರದ ಮೇಲೆ ದೇವಿ ವಿಗ್ರಹವನ್ನು ಸ್ಥಾಪಿಸಲಾಗಿದೆ ಎಂದು ನಂಬಲಾಗಿದೆ. 

47

ಕರ್ನಾಟಕದಲ್ಲಿ ಇರುವ 'ಸಪ್ತ ಮುಕ್ತಿಸ್ಥಳ' ತೀರ್ಥಯಾತ್ರಾ ತಾಣಗಳಲ್ಲಿ ಈ ಸ್ಥಳ ಕೂಡ ಒಂದು. ಉಳಿದಂತೆ ಉಡುಪಿ, ಸುಬ್ರಮಣ್ಯ, ಕೋಟೇಶ್ವರ, ಕುಂಬಾಶಿ, ಶಂಕರನಾರಾಯಣ, ಗೋಕರ್ಣ ಎಂದು ಹೇಳಲಾಗುವುದು. 

57

ತಿಳಿ ಗುಲಾಬಿ ಬಣ್ಣದ ಬನಾರಸಿ ಕ್ರೇಪ್‌ ಸಿಲ್ಕ್‌ ಸೀರೆ ಧರಿಸಿದ್ದು, ಸರಳವಾದ ನಕ್ಲೇಸ್‌ ಧರಿಸಿ ಐಶ್ವರ್ಯಾ ಅವರು ಮಿಂಚಿದ್ದಾರೆ. ಈ ಸೀರೆ ಫೋಟೋ ನೋಡಿ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ. 

67

ನಟಿ ಐಶ್ವರ್ಯಾ ಶಿಂಧೋಗಿ ಅವರು ಬನಾರಸಿ ಸಿಲ್ಕ್‌ ಸೀರೆ ಉಟ್ಟು ಕೊಲ್ಲೂರಿನ ದೇವಸ್ಥಾನಕ್ಕೆ ಹೋಗಿದ್ದಾರೆ. ಅಲ್ಲಿ ಅವರು ತಾಯಿ ಶ್ರೀ ಮೂಕಾಂಬಿಕಾ ದೇವರ ಆಶೀರ್ವಾದ ಪಡೆದಿದ್ದಾರೆ. 

77

ಐಶ್ವರ್ಯಾ ಶಿಂಧೋಗಿ ಅವರು ಧರಿಸಿದ್ದ ಈ ಸೀರೆಯ ನಿಖರವಾದ ಬೆಲೆ ತಿಳಿದಿಲ್ಲ. ಆದರೆ ಉತ್ತಮ ಗುಣಮಟ್ಟದ ಬನಾರಸಿ ಕ್ರೇಪ್‌ ಸಿಲ್ಕ್‌ ಸೀರೆಗೆ ಹದಿನೈದು ಸಾವಿರ ರೂಪಾಯಿ ಮೇಲೆ ಬೆಲೆ ಇದೆ. 

Read more Photos on
click me!

Recommended Stories