ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಮೋಕ್ಷಿತಾ- ಐಶ್ರು- ಶಿಶಿರ್; ಫೋಟೋ ವೈರಲ್

Published : Mar 12, 2025, 03:26 PM ISTUpdated : Mar 12, 2025, 03:48 PM IST

ದೇವರ ದರ್ಶನ ಮಾಡಲು ಜೀಪ್‌ ಏರಿ ಹೊರಟ ಫ್ರೆಂಡ್ಸ್‌. ಮೂವರು ಸದಾ ಖುಷಿಯಾಗಿರಿ ಎಂದು ವಿಶ್ ಮಾಡಿದ ನೆಟ್ಟಿಗರು.... 

PREV
16
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಮೋಕ್ಷಿತಾ- ಐಶ್ರು- ಶಿಶಿರ್; ಫೋಟೋ ವೈರಲ್

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳಾದ ಮೋಕ್ಷಿತಾ ಪೈ, ಐಶ್ವರ್ಯ ಶಿಂಧೋಗಿ ಮತ್ತು ಶಿಶಿರ್‌ ಶಾಸ್ತ್ರಿ ರಿಯಾಲಿಟಿ ಶೋ ಮುಗಿದ ಮೇಲೂ ತಮ್ಮ ಸ್ನೇಹ ಮುಂದುವರೆಸಿದ್ದಾರೆ.

26

ಯಾವುದೇ ಕಾರ್ಯಕ್ರಮ ನಡೆಯಲಿ, ಟಿವಿ ಶೋ ಇರಲಿ ಸದಾ ಒಟ್ಟಿಗೆ ಕಾಣಿಸಿಕೊಳ್ಳುವುದು ಈ ಮೂವರು. ಒಬ್ಬರನ್ನೊಬ್ಬರು ಈಗಲೂ ಅಷ್ಟೇ ಗೌರವದಿಂದ ಮಾತನಾಡಿಸುತ್ತಾರೆ.

36

ಸದ್ಯ ಮೂರವರು ಜೀಪ್ ಏರಿ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆಯಲು ಹೋಗಿದ್ದಾರೆ. ದಾರಿ ಉದ್ದಕ್ಕೂ ರೀಲ್ಸ್ ಮಾಡಿಕೊಂಡು ಫೋಟೋ ತೆಗೆದುಕೊಂಡಿದ್ದಾರೆ. 

46

ಗೋಲ್ಡ್‌ ಬಣ್ಣ ಸೀರೆಯಲ್ಲಿ ಮೋಕ್ಷಿತಾ, ರೋಸ್‌ ಗೋಲ್ಡ್‌ ಪಿಂಕ್‌ ಬಣ್ಣದ ಸೀರೆಯಲ್ಲಿ ಐಶ್ವರ್ಯ ಹಾಗೂ ರೆಡ್ ಪ್ಯಾಂಟ್‌ ಶರ್ಟ್‌ನಲ್ಲಿ ಶಿಶಿರ್ ಕಾಣಿಸಿಕೊಂಡಿದ್ದಾರೆ.

56

ದೇವಿಯಿಂದ ಪಡೆದಿರುವ ಪ್ರಸಾದ, ಮಂಗಳೂರು ಮಲ್ಲಿಗೆ ಹಾಗೂ ತಾವು ಧರಿಸಿರುವ ಸೀರೆಯಲ್ಲಿ ಮೂರ್ನಾಲ್ಕು ಫೋಟೋಗಳನ್ನು ಕ್ಲಿಕ್ ಮಾಡಿಕೊಂಡು ಅಪ್ಲೋಡ್ ಮಾಡಿದ್ದಾರೆ. 

66

ಶಿಶಿರ್‌ ಮತ್ತು ಐಶು ಆರಂಭದಿಂದಲೂ ಸ್ನೇಹಿತರು. ಯಾವಾಗ ಗೌತಮಿ ಮತ್ತು ಮಂಜು ಮೋಕ್ಷಿತಾರನ್ನು ದೂರ ನೂಕಿದರು ಅಲ್ಲಿಂದ ಇವರೊಟ್ಟಿಗೆ ಸೇರಿಕೊಂಡು ಟೀಮ್ ಮಾಡಿಕೊಳ್ಳುತ್ತಾರೆ. 

Read more Photos on
click me!

Recommended Stories