Nivedita Gowda: ಬೀದಿಯಲ್ಲಿ ಅತ್ತೂ ಅತ್ತೂ ಸುಸ್ತಾದ ನಿವೇದಿತಾಗೆ ಈಗ ಈ ಸ್ಥಿತಿ? ಫೋಟೋ ನೋಡಿ ಫ್ಯಾನ್ಸ್​ ಶಾಕ್

Published : Oct 03, 2025, 04:44 PM IST

ಚಂದನ್ ಶೆಟ್ಟಿ ಅವರಿಂದ ವಿಚ್ಛೇದನದ ನಂತರ ನಿವೇದಿತಾ ಗೌಡ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ವಿದೇಶಿ ಪ್ರವಾಸಗಳ ಮಧ್ಯೆ, ವಿಯೆಟ್ನಾಂನ ರಸ್ತೆಯಲ್ಲಿ ಅತ್ತಿದ್ದು ಸುದ್ದಿಯಾಗಿತ್ತು. ಇದೀಗ, ಮೆಟ್ಟಿಲುಗಳ ಮೇಲೆ ವಿಚಿತ್ರ ಭಂಗಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. 

PREV
15
ಐಷಾರಾಮಿ ಬದುಕು

ಆಕೆಯದ್ದು ಐಷಾರಾಮಿ ಬದುಕು, ನನ್ನದು ಸಿಂಪಲ್​ ಬದುಕು. ಆದ್ದರಿಂದ ಅಡ್ಜಸ್ಟ್​ ಆಗುವುದು ಕಷ್ಟವಾಯ್ತು ಎಂದು ನಿವೇದಿತಾ ಗೌಡ (Nivedita Gowda) ಜೊತೆ ತಮ್ಮ ಡಿವೋರ್ಸ್​ ಕುರಿತು ಚಂದನ್​ ಶೆಟ್ಟಿ (Chandan Sheety) ​ಕೆಲವು ಬಾರಿ ಹೇಳಿದ್ದಾರೆ. ಅದರಂತೆಯೇ ನಿವೇದಿತಾ ಗೌಡ ಡಿವೋರ್ಸ್​ ಬಳಿಕ ಐಷಾರಾಮಿ ಲೈಫ್ ಎಂಜಾಯ್​ ಮಾಡುತ್ತಿದ್ದಾರೆ. ಇದಾಗಲೇ ಹಲವಾರು ವಿದೇಶಗಳಿಗೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದಾರೆ.

25
ಫಾರಿನ್​ ಟೂರ್​ ಎಂಜಾಯ್​

ಶ್ರೀಲಂಕಾದ ಜೂಜು ಅಡ್ಡೆಯಿಂದ ಹಿಡಿದು ಅಮೆರಿಕ, ಲಂಡನ್​, ವಿಯೆಟ್ನಾಮ್​ ಎಂದೆಲ್ಲಾ ತಿರುಗಾಡುತ್ತಿದ್ದಾರೆ. ಈಚೆಗಷ್ಟೇ ಅಮೆರಿಕಕ್ಕೆ ಹೋಗಿ ಅಲ್ಲಿಂದ ವಿಯಟ್ನಾಂಗೆ ಹೋಗಿದ್ದರು ನಿವೇದಿತಾ. ಹೇರ್​ಸ್ಟೈಲ್​ಗಾಗಿಯೇ ಅಲ್ಲಿಗೆ ಹೋಗಿರಬಹುದು ಎನ್ನುವ ಸುದ್ದಿ ಕೂಡ ಇದೆ. ಇದಕ್ಕೆ ಕಾರಣ, ಅವರು ಹಾಕಿದ್ದ ವಿಡಿಯೋ. ಒಟ್ಟು 6 ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದು, ಉಳಿದ 3ರಲ್ಲಿ ಮೇಕಪ್, ಕೇಶ ವಿನ್ಯಾಸ ಮತ್ತು ಫ್ಲೈಟ್‌ನಲ್ಲಿ ಭಾರತಕ್ಕೆ ವಾಪಸ್ ಬರುವಂತಹ ವಿಡಿಯೋವನ್ನು ಹಂಚಿಕೊಂಡಿದ್ದರು ನಟಿ.

35
ರಸ್ತೆಯ ಮೇಲೆ ಅತ್ತಿದ್ದ ನಿವೇದಿತಾ

ಆದರೆ, ಎಲ್ಲರಿಗೂ ಶಾಕ್​ ಕೊಟ್ಟಿದ್ದು, ನಿವೇದಿತಾ ಅವರು ವಿಯೆಟ್ನಾಮ್​ನ ರಸ್ತೆಯ ಮಧ್ಯೆ ನಿಂತು ಗಳಗಳನೆ ಅತ್ತಿದ್ದರು. ವಿಭಿನ್ನ ರಾತ್ರಿ ಪ್ರಪಂಚ ತೆರೆದುಕೊಳ್ಳುವ ಈ ವಿಯೆಟ್ನಾಂನಲ್ಲಿ ಲೈಫ್ ಎಂಜಾಯ್ ಮಾಡಲು ಹೋಗಿದ್ದ ನಟಿಗೆ ಏನಾಯ್ತು ಎಂದು ಎಲ್ಲರೂ ಆತಂಕ ಪಟ್ಟುಕೊಂಡಿದ್ದರು. ಆಕೆಯ ಸ್ನೇಹಿತೆ ಅಲ್ಲಿದ್ದರೂ, ನಿವೇದಿತಾ ಅಳುವಾಗ ಒಂದಿನಿತೂ ಸಹಾಯ ಮಾಡದೇ ಸುಮ್ಮನೇ ಕುಳಿತಿದ್ದಾಳೆ. ಆದರೆ, ಯಾಕೆ ಕಣ್ಣೀರು ಹಾಕುತ್ತಿದ್ದಾರೆ ಎಂಬ ವಿಚಾರ ಮಾತ್ರ ಗೊತ್ತಾಗಿಲ್ಲ.

45
ನಿನ್ನೆ ಹಾಗೆ ಇಂದು ಹೀಗೆ

ಇದು ನಿನ್ನೆಯ ಸುದ್ದಿಯಾದರೆ, ಇಂದು ನಟಿ ವಿಚಿತ್ರ ಭಂಗಿಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಮೆಟ್ಟಿಲುಗಳ ಮೇಲೆ ಕುಳಿತು ಈ ಫೋಟೋಶೂಟ್​ ಮಾಡಿಸಿದ್ದಾರೆ. ಇದು ಆಕೆಯ ಮಾಮೂಲು ಫೋಟೋಶೂಟ್​. ಆದರೆ ನೆಟ್ಟಿಗರು ಮಾತ್ರ ಇದನ್ನು ನೋಡಿ ಸುಮ್ಮನೇ ಕುಳಿತುಕೊಳ್ಳಲಿಲ್ಲ. ವಿಭಿನ್ನ ರೀತಿಯ ಕಮೆಂಟ್​ ಮಾಡುತ್ತಿದ್ದಾರೆ.

55
ಥರಹೇವಾರಿ ಕಮೆಂಟ್ಸ್​

ನಿನ್ನೆ ರಸ್ತೆ ನಡುವೆ ಅತ್ತಿದ್ದಾಕೆಯ ಸ್ಥಿತಿ ಇವತ್ತು ಹೀಗ್ಯಾಕೆ ಆಯಿತು ಎಂದು ಥಹರೇವಾರಿ ಕಮೆಂಟ್ಸ್​ ಜೊತೆ ಪ್ರಶ್ನಿಸುತ್ತಿದ್ದಾರೆ. ಅಯ್ಯೋ ಶಿವನೇ ನಮ್​ ನಿವ್ವಿಗೆ ಇದೇನಾಯ್ತು ಎಂದು ಕೇಳುತ್ತಿದ್ದಾರೆ.

Read more Photos on
click me!

Recommended Stories