"ಜಯಂತ್‌ ಮನೇಲಿ ಈಗ ಸಿಸಿ ಕ್ಯಾಮೆರಾ ಇಲ್ವಾ"?, ವೀಕ್ಷಕರು ಹೀಗೆನ್ನಲು ಇದೇ ಕಾರಣ!

Published : Oct 03, 2025, 04:07 PM IST

Jayanth house CCTV not working: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್‌ ಕೈಗೆ ಜಾಹ್ನವಿಗೆ ಸಿಗಬೇಕು ಎಂಬುವವರು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಜಾಹ್ನವಿ ಅವನ ಕೈಗೆ ಸಿಗಬೇಡ ಅನ್ನುತ್ತಿದ್ದಾರೆ. ಆದರೆ ಇದೆಲ್ಲಾ ಬಿಡಿ. ಸದ್ಯಕ್ಕೊಂದು ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ. ಅದೇನಂತೀರಾ?. 

PREV
16
ವೀಕ್ಷಕರನ್ನ ಕಾಡ್ತಿದೆ

ಸಾಮಾನ್ಯವಾಗಿ ಯಾವುದೇ ಧಾರಾವಾಹಿಯಲ್ಲಿ ಬರುವ ಪಾತ್ರಗಳನ್ನ ತಮ್ಮ ಮನೆಯಲ್ಲಿರುವ ಸದಸ್ಯರೇ ಅನುಭವಿಸಿದಂತೆ ಕಲ್ಪನೆ ಮಾಡಿಕೊಳ್ಳುತ್ತಾರೆ ನೋಡಗರು. ಅಲ್ಲಿ ನಾಯಕಿಗೆ ಏನಾದರೂ ತೊಂದರೆಯಾದರೆ ಆಕೆಗಿಂತ ನಮ್ಮ ಮನೆಯ ಹೆಣ್ಣು ಮಕ್ಕಳೇ ಕಣ್ಣೀರು ಹಾಕುವುದು ಜಾಸ್ತಿ. ಸದ್ಯಕ್ಕೀಗ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್‌ ಕೈಗೆ ಜಾಹ್ನವಿಗೆ ಸಿಗಬೇಕು ಎಂಬುವವರು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಜಾಹ್ನವಿ ಅವನ ಕೈಗೆ ಸಿಗಬೇಡ ಅನ್ನುತ್ತಿದ್ದಾರೆ. ಆದರೆ ಇದೆಲ್ಲಾ ನಿರ್ದೇಶಕರ ಕೈಲಿದೆ ಬಿಡಿ. ಅಂದಹಾಗೆ ಸದ್ಯಕ್ಕೊಂದು ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ. ಅದೇನಂತೀರಾ?, ಮುಂದೆ ಓದಿ..

26
ನೇರವಾಗಿ ಜಯಂತ್‌ ಮನೆಗೆ ಬಂದ ಜಾಹ್ನವಿ

ಧಾರಾವಾಹಿಯಲ್ಲಿ ನಿರ್ದೇಶಕರು ಅಂತೂ ಇಂತೂ, ಹಾಗೂ ಹೀಗೂ ಜಾಹ್ನವಿ-ಜಯಂತ್‌ ಇಬ್ಬರನ್ನೂ ಒಂದು ಮಾಡುವ ಕಾಣುವ ಹಾಗೆಯೇ ತೋರುತ್ತಿದೆ. ಯಾಕಂದ್ರೆ ಇಷ್ಟು ದಿನ ಜಯಂತ್‌ ಕಣ್ಣಿಗೆ ಕಾಣಿಸದ ಹಾಗೆ ಓಡಾಡುತ್ತಿದ್ದ, ಓಡುತ್ತಿದ್ದ ಜಾಹ್ನವಿ ಈಗ ನೇರವಾಗಿ ಜಯಂತ್‌ ಮನೆಗೆ ಬಂದಿಳಿದಾಗಿದೆ.

36
ಮೊಬೈಲ್‌ ರಿಂಗ್‌ ಆಯ್ತು

ಜಾಹ್ನವಿಗೆ ಏನು ಮಾಡಬೇಕೆಂದು ತೋಚದೆ ವಿಶ್ವನಿಗೆ ಫೋನ್‌ ಟ್ರೈ ಮಾಡಿದ್ದಾಳೆ. ಅದರೆ ಆ ಸಮಯದಲ್ಲಿ ಅವನು ಸಿಕ್ಕಿಲ್ಲ. ಕೊನೆಗೆ ಪುನಃ ಅವನು ಕರೆ ಮಾಡಿದಾಗ ಜಾಹ್ನವಿ ಜಯಂತ್‌ ಮನೆಯಲ್ಲಿದ್ದಾಳೆ. ಜೊತೆಗೆ ಫೋನ್‌ ರಿಂಗ್‌ ಆಗಿದೆ. ಇದು ತನ್ನ ಜಾನು ಮೊಬೈಲ್‌ ರಿಂಗ್‌ ಟೋನ್ ಇದ್ದ ಹಾಗೆ ಇದೆ ಎಂದು ಜಯಂತ್ ಅಂದುಕೊಳ್ಳುತ್ತಿರುವಾಗಲೇ ಗುರುವಾರದ ಸಂಚಿಕೆ ಮುಗಿದಿದೆ.

46
ಆ ಪ್ರಶ್ನೆಯೇನು?, ಯಾಕೆ?

ಸದ್ಯ ಪ್ರೊಮೊದಲ್ಲಿ ತೋರಿಸಿರುವ ಹಾಗೆ ಹಬ್ಬದ ಸಮಯದಲ್ಲಿ ಜಯಂತ್ ಖುದ್ದಾಗಿ ಜಾಹ್ನವಿಯ ಕಾರ್ಯ ಮಾಡುತ್ತಿದ್ದಾನೆ. ಇದನ್ನು ಅಲ್ಲೇ ನಿಂತು ಜಾನು ಕೂಡ ನೋಡುತ್ತಿದ್ದಾಳೆ. ಆದರೆ ವೀಕ್ಷಕರಿಗೆ ಕಟ್ಟ ಕಡೆಗೆ ಪ್ರಶ್ನೆಯೊಂದು ಕಾಡ್ತಿದೆ. ಅದಕ್ಕೆ ಕಾರಣವೂ ಇದೆ. ಆ ಪ್ರಶ್ನೆಯೇನು?, ಯಾಕೆ ಅಂತ ನೋಡೋಣ..

56
ಕಾರಣ ಇದೇ ನೋಡಿ

ಯೆಸ್. ವೀಕ್ಷಕರಿಗೆ ಜಯಂತ್‌ ಮನೆಯಲ್ಲಿರುವ ಕ್ಯಾಮೆರಾಗಳಿಗೆ ಏನಾಗಿದೆ ಎಂಬುದು ಚಿಂತೆಯಾಗಿದೆ. ಇದಕ್ಕೆ ಕಾರಣವೂ ಇದೆ. ಹೇಳಿ ಕೇಳಿ ಜಯಂತ್ ಅನುಮಾನದ ಪಿಶಾಚಿ. ಮೂಲೆಮೂಲೆಗೂ ಕ್ಯಾಮೆರಾ ಹಾಕಿಸಿರುವ ಅವನು ಹಿಂದೆಲ್ಲಾ ಗಳಿಗೆಗೊಮ್ಮೆ, ಗಂಟೆಗೊಮ್ಮೆ ಸಿಸಿ ಕ್ಯಾಮೆರಾ ಚೆಕ್‌ ಮಾಡುತ್ತಿದ್ದನು. ಆದರೀಗ ಅವನು ಸುಮ್ಮನಿದ್ದಾನೆ ಅಂದರೆ ಜಯಂತ ಮನೆಯ ಕ್ಯಾಮೆರಾಗಳು ವರ್ಕ್ ಆಗ್ತಿಲ್ಲ ಬಿಡಿ ಎನ್ನುತ್ತಿದ್ದಾರೆ ವೀಕ್ಷಕರು. ಆದರೆ ಹಿಂದೊಮ್ಮೆ ಜಯಂತ್ ಜಾಹ್ನವಿಗೋಸ್ಕರ ಮನೆಯಲ್ಲಿದ್ದ ಎಲ್ಲ ಕ್ಯಾಮೆರಾಗಳನ್ನು ಸುಟ್ಟು ಹಾಕಿದ್ದ. ಹಾಗಾಗಿ ಸುಮ್ಮನಿರಬೇಕು ಎನ್ನಲಾಗಿದೆ. ಅದೇನೇ ಇರಲಿ ಈ ಜಯಂತ್-ಜಾಹ್ನವಿ ಕಣ್ಣಾಮುಚ್ಚಾಲೆ ಆಟ ಕುರಿತು ವೀಕ್ಷಕರ ಅನಿಸಿಕೆ ಹೀಗಿದೆ ನೋಡಿ..

66
ವೀಕ್ಷಕರ ಕಾಮೆಂಟ್ಸ್

*ಕ್ಯಾಮೆರಾ ಇಲ್ವಾ ನೋಡು ಜಯಂತ್‌.
*ಜಯಂತ್ ಮನೇಲಿ ಈಗ ಸಿಸಿ ಕ್ಯಾಮೆರಾ ಇಲ್ವೇನೋ.
*ಇನ್ನೂ ಮೂರು ವರ್ಷ ಜಯಂತ್ ಕೈಗೆ ಚಿನ್ನು ಮರಿ ಸಿಗಲ್ಲ
*ಜಾನು ನೀವು ನಿಮ್ಮ ಅಪ್ಪನ ಮನೆಗೆ ಹೋಗೋದು ಉತ್ತಮ.
*ಇದೊಳ್ಳೆ ಕಳ್ಳ ಪೊಲೀಸ್ ಆಟ ನೋಡಿದ ಹಾಗೆ ಅನಿಸುತ್ತೆ
*ಜಾನು ವಿಶ್ವನ ಮದುವೆ ಆದ ಮೇಲೆ ಸಿಗಬೇಕು.
*ಈ ಸರಿನೂ ತಪ್ಪಿಸಿಕೊಳ್ತಾಳೆ ಚಿನ್ನು ಮರಿ ಎಂದೆಲ್ಲಾ ವೀಕ್ಷಕರು ಕಾಮೆಂಟ್ ಮಾಡಿರುವುದನ್ನು ನೀವೂ ನೋಡಬಹುದು.

Read more Photos on
click me!

Recommended Stories