ಅಮೃತಧಾರೆ ಸೀರಿಯಲ್ನಲ್ಲಿ ಮಿಂಚು ಗೌತಮ್-ಭೂಮಿಕಾಳ ಮಗಳು ಎಂಬ ಸತ್ಯ ತಿಳಿಯುತ್ತಿದ್ದಂತೆ, ಜೈದೇವ ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದಾನೆ. ಈ ಕಥೆಯ ತಿರುವಿನಿಂದ ರೊಚ್ಚಿಗೆದ್ದ ವೀಕ್ಷಕರು, ಸೀರಿಯಲ್ ಹೆಸರು 'ಜೈದೇವಧಾರೆ' ಎಂದು ಬದಲಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ.
ಅಮೃತಧಾರೆ ಸೀರಿಯಲ್ನಲ್ಲಿ (Amruthadhaare Serial) ಇದೀಗ ಮಿಂಚುವಿನ ಸ್ಟೋರಿ ನಡೆಯುತ್ತಿದೆ. ಮಿಂಚು ಗೌತಮ್ ಮತ್ತು ಭೂಮಿಕಾಳ ರಿಯಲ್ ಪುತ್ರಿ ಎಂದು ಲಕ್ಷ್ಮೀಕಾಂತಂಗೆ ತಿಳಿದಿದ್ದು, ಅದೀಗ ಜೈದೇವನ ಕಿವಿಗೆ ಬಿದ್ದಿದೆ.
26
ಮಹಿಮಾಗೆ ದತ್ತು
ಅದೇ ಇನ್ನೊಂದೆಡೆ ಮಿಂಚುವನ್ನು ಮಹಿಮಾಗೆ ದತ್ತು ಕೊಡಲು ಗೌತಮ್, ಭೂಮಿಕಾ ಮನಸ್ಸಿಲ್ಲದ ಮನಸ್ಸಿನಿಂದ ತಯಾರಿ ಮಾಡ್ತಿರುವಾಗಲೇ ಮಿಂಚುವನ್ನು ಜೈದೇವ್ ಕಿಡ್ನ್ಯಾಪ್ ಮಾಡಿದ್ದಾನೆ.
36
ಮಿಂಚು ರಿಯಲ್ ಅಪ್ಪ-ಅಮ್ಮ?
ಅದೇ ಮತ್ತೊಂದೆಡೆ, ಮಿಂಚು ನಮ್ಮದೇ ಮಗಳು, ನಾವು ಫಾರಿನ್ಗೆ ಹೋಗುವಾಗ ಬೇರೆಯವರ ಬಳಿ ಕೊಟ್ಟು ಹೋಗಿದ್ವಿ, ಅವರು ಆಕೆಯನ್ನು ದೇವಸ್ಥಾನದಲ್ಲಿ ಬಿಟ್ಟು ಹೋದರು. ಅವಳೀಗ ನಿಮ್ಮ ಮನೆಯಲ್ಲಿ ಇರುವುದು ತಿಳಿದಿದೆ ಎಂದು ದಂಪತಿ ಗೌತಮ್ ಮನೆಗೆ ಮಿಂಚುವನ್ನು ಹುಡುಕಿ ಬಂದಿದ್ದಾರೆ.
ಆದರೆ, ಇಲ್ಲಿಯವರೆಗೆ ಭೂಮಿಕಾ ಮತ್ತು ಗೌತಮ್ ಅವರ ನವಿರಾದ ಪ್ರೀತಿಯ ಸ್ಟೋರಿಯಾಗಿದ್ದ ಅಮೃತಧಾರೆ, ಮೊದಲಿನಿಂದಲೂ ಜೈದೇವನ ಅಟ್ಟಹಾಸವೇ ಮೇಲಾಗ್ತಿದೆ. ಇನ್ನೇನು ಜೈದೇವ ಜೈಲಿಗೆ ಹೋದ, ಅಲ್ಲಿಗೆ ಸೀರಿಯಲ್ ಸುಖಾಂತ್ಯವಾಗುತ್ತದೆ ಎಂದುಕೊಳ್ಳಲಾಗಿತ್ತು.
56
ಜೈದೇವನ ಅಟ್ಟಹಾಸ
ಆದರೆ ಮತ್ತೆ ಆತನ ಅಟ್ಟಹಾಸ ಬಲವಾಗಿದೆ. ಜೈಲಿಗೆ ಹೋಗಿ ಬಂದರೂ ಗೌತಮ್ ಕುಟುಂಬವನ್ನು ನಾಶ ಮಾಡುವ ಪಣ ತೊಟ್ಟಿದ್ದಾನೆ.ಮಿಂಚು ಗೌತಮ್ ಮತ್ತು ಭೂಮಿಕಾ ರಿಯಲ್ ಪುತ್ರಿ ಎಂದು ತಿಳಿಯುತ್ತಲೇ ಅಟ್ಟಹಾಸ ಹೆಚ್ಚಾಗಿದ್ದು, ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದಾನೆ.
66
ಹೆಸರು ಬದಲು
ಇದರಿಂದ ವೀಕ್ಷಕರು ರೊಚ್ಚಿಗೆದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸೀರಿಯಲ್ ವಿರುದ್ಧ ಕಿಡಿ ಕಾರುತ್ತಿದ್ದು, ಇದನ್ನು ಅಮೃತಧಾರೆ ಅಲ್ಲ, ಬದಲಿಗೆ ಜೈದೇವಧಾರೆನೋ ಇಲ್ಲವೇ ಜೈದೇವ ಅಟ್ಟಹಾಸ ಎಂದು ಮಾಡಬೇಕಿದೆ ಎಂದು ಹೇಳುತ್ತಿದ್ದು, ಹಲವರು ಇದಕ್ಕೆ ಸಹಮತ ಸೂಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.