ಬಿಗ್ ಬಾಸ್ 13ನೇ ಸೀಸನ್‌ಗೆ ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಮುಂದುವರೆಯುವುದು ಖಚಿತವಾಗಿದೆ. ಕಲರ್ಸ್ ಕನ್ನಡ ವಾಹಿನಿಯು ಹೊಸ ಪ್ರೊಮೋ ಬಿಡುಗಡೆ ಮಾಡಿದ್ದು, 'ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ' ಎಂದು ಘೋಷಿಸಿದೆ, ಆದರೆ ನಿಖರ ದಿನಾಂಕ ಇನ್ನೂ ಪ್ರಕಟವಾಗಿಲ್ಲ.
ಬಿಗ್ಬಾಸ್ ಎಂದರೆ ಬಾಯ್ಬಿಟ್ಟು ನೋಡುವ ಲಕ್ಷಾಂತರ ವೀಕ್ಷಕರಿದ್ದಾರೆ. ಇಲ್ಲಿ ನಡೆಯುವ ಜಗಳ, ಕಾಂಟ್ರವರ್ಸಿ, ಲವ್ಸ್ಟೋರಿ... ಹೀಗೆ ಎಲ್ಲವನ್ನೂ ನೋಡಲು ತುದಿಗಾಲಿನಲ್ಲಿ ನಿಲ್ಲುವ ವೀಕ್ಷಕರು ಹಲವರು. ಇದಾಗಲೇ 12 ಸೀಸನ್ಗಳನ್ನು ಮುಗಿಸಿರುವ ಬಿಗ್ಬಾಸ್ನಲ್ಲಿ 13ನೇ ಸೀಸನ್ ಯಾವಾಗ ಶುರುವಾಗುತ್ತದೆ ಎಂದು ಹಲವರು ಕಾತರದಿಂದ ಕಾಯುತ್ತಿದ್ದಾರೆ.
26
ನಾಲ್ಕು ಸೀಸನ್ಗಳಲ್ಲಿ ಸುದೀಪ್
11ನೇ ಸೀಸನ್ ಬಳಿಕ ಮುಂದಿನ ಸೀಸನ್ನಿಂದ ತಾವು ಕಾಣಿಸಿಕೊಳ್ಳುವುದಿಲ್ಲ ಎಂದು ಶಾಕ್ ಕೊಟ್ಟ ಕಿಚ್ಚ ಸುದೀಪ್, ಕೊನೆಗೆ ಒಂದಲ್ಲ, ನಾಲ್ಕು ಸೀಸನ್ಗಳನ್ನು ಒಪ್ಪಿಕೊಂಡಿದ್ದಾರೆ.
36
13ನೇ ಸೀಸನ್ನಲ್ಲಿಯೂ ಕನ್ಫರ್ಮ್
ತಾವು ಮುಂದೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದಕ್ಕೂ ತಮ್ಮದೇ ಆದ ಕಾರಣ ಕೊಟ್ಟು, ಕೊನೆಗೆ ತಾವು ಯಾಕೆ ಕಾಣಿಸಿಕೊಳ್ಳುತ್ತಿದ್ದೇವೆ ಎನ್ನುವುದಕ್ಕೂ ಕಾರಣ ಕೊಟ್ಟಿದ್ದಾರೆ. ಇದರಿಂದಾಗಿ ಕಿಚ್ಚ ಸುದೀಪ್ (Kichcha Sudeep) 13ನೇ ಸೀಸನ್ ಅನ್ನು ನಡೆಸಿಕೊಡುವುದು ಕನ್ಫರ್ಮ್ ಆಗಿದೆ.
ಇದೀಗ ಕಲರ್ಸ್ ವಾಹಿನಿಯು ಹೊಸ ಪ್ರೊಮೋ ರಿಲೀಸ್ ಮಾಡಿದೆ. ಅದರಲ್ಲಿ ಬಿಗ್ಬಾಸ್ ಬಿಗ್ಬಾಸ್ ಹಿನ್ನೆಲೆಯಲ್ಲಿ ಬೂಟಿನ ಸದ್ದು ಕೇಳಿದ್ದು, ಅದು ಸುದೀಪ್ ಅವರದ್ದು ಎನ್ನುವುದು ಕನ್ಫರ್ಮ್ ಆಗಿದೆ.
56
ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ
ನಿರ್ದಿಷ್ಟ ದಿನಾಂಕವನ್ನು ವಾಹಿನಿ ಘೋಷಿಸಿಲ್ಲ. ಬದಲಿಗೆ ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ... With something special ಎನ್ನುವ ಶೀರ್ಷಿಕೆಯೊಂದಿಗೆ ಪ್ರೊಮೋ ರಿಲೀಸ್ ಮಾಡಲಾಗಿದೆ.
66
ಬೇಗ ಎಂದ್ರೆ ಯಾವಾಗ
ಇದಾಗಲೇ ಕೆಲವು ರಿಯಾಲಿಟಿ ಷೋಗಳು ವೀಕ್ಎಂಡ್ನಲ್ಲಿ ನಡೆಯುತ್ತಿರುವ ನಡುವೆಯೇ, ಸೀರಿಯಲ್ಗಳು ಕೂಡ ಮಧ್ಯಭಾಗದಲ್ಲಿ ಇವೆ. ಭಾಗ್ಯಲಕ್ಷ್ಮಿ ಸೀರಿಯಲ್ ಈ ವಾರ ಮುಗಿಯುತ್ತಿದ್ದು ಜಗದ್ಧಾತ್ರಿ ಸೀರಿಯಲ್ ಶುರುವಾಗಲಿದೆ. ಆದ್ದರಿಂದ ಬೇಗ ಎಂದರೆ ಯಾವಾಗ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.