ಪ್ರೇಮಿಗಳ ದಿನದ ವಿಶೇಷವಾಗಿ, ಕಿರುತೆರೆಯ ಜನಪ್ರಿಯ ನಟ-ನಟಿಯರ ಮೊದಲ ಕ್ರಷ್ ಯಾರೆಂದು ಕೇಳಲಾಗಿದೆ. ಶಿವು, ಪಾರು, ಕಿರಣ್ ರಾಜ್, ದುರ್ಗಾ ಸೇರಿದಂತೆ ಹಲವು ತಾರೆಯರು ತಮ್ಮ ಶಾಲಾ-ಕಾಲೇಜು ದಿನಗಳ ಪ್ರೀತಿಯ ಗುಟ್ಟನ್ನು ಹಂಚಿಕೊಂಡಿದ್ದಾರೆ.
ಬಹುತೇಕ ಎಲ್ಲರಿಗೂ ಮೊದಲ ಕ್ರಷ್ ಎನ್ನೋದು ಇರುತ್ತದೆ. ಅದು ಶಾಲೆ, ಕಾಲೇಜಿನಿಂದ ಹಿಡಿದು ದೊಡ್ಡವರಾಗುವವರೆಗೆ ಎಲ್ಲೋ ಒಬ್ಬರ ಮೇಲೆ ಸ್ವಲ್ಪ ಪ್ರೀತಿ ಇರುತ್ತದೆ. ಅದು ಸಿನಿಮಾ ನಟ-ನಟಿಯರೂ ಆಗಿರಬಹುದು. ಒಟ್ಟಿನಲ್ಲಿ ಒಬ್ಬರು ಕ್ರಷ್ ಎಂದು ಇರುತ್ತಾರೆ. ಹಾಗಿದ್ದರೆ, ಕಿರುತೆರೆ ನಟ-ನಟಿಯರ ಲೈಫ್ನಲ್ಲಿ ಮೊದಲ ಕ್ರಷ್ ಯಾರು ಎಂದು ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಕೇಳಿದಾಗ, ಎಲ್ಲರೂ ಏನಂದ್ರು ನೋಡಿ..
27
ಶಿವು-ಪಾರು ಏನಂದ್ರು?
ನನಗೂ ಕ್ರಷ್ ಇದ್ರು, ಬೇಡಪ್ಪಾ ಹೇಳಲ್ಲ ಅವರ ಮದುವೆಯಾಗಿದೆ ಎಂದ ಅಣ್ಣಯ್ಯ ಶಿವು ಹೇಳಿದ್ರೆ, ಪಾರು, ನನ್ನ ಕ್ರಷ್ ಕಾಲೇಜ್ನಲ್ಲಿ ಶುರುವಾಗಿದ್ದು, ಯಾರು ಅಂತ ಹೇಳಲ್ಲ. ಏಕೆಂದರೆ, ಅವರು ನನ್ನನ್ನು ಫಾಲೋ ಮಾಡ್ತಾರೆ, ನನ್ನ ಸೀರಿಯಲ್ ನೋಡ್ತಾರೆ. ಅವರು ಬಂದಾಗಲೆಲ್ಲಾ ಒಂಥರಾ ಫೀಲ್ನಲ್ಲಿ ಇರ್ತಿದ್ದೆ ಎಂದಿದ್ದಾರೆ.
37
ಹೆಲ್ಪ್ ಮಾಡಿದವಳೇ ಕ್ರಷ್ ಆದಳು
ಮೊದಲ ಕ್ರಷ್ ಸ್ಕೂಲ್ನಲ್ಲಿಯೇ ಆಗಿರೋದು, ನೋಡಲು ಸಕತ್ ಆಗಿದ್ಲು, ಚೆನ್ನಾಗಿ ಓದುತ್ತಾ ಇದ್ದಳು. ತುಂಬಾ ಹೆಲ್ಪ್ ಮಾಡುತ್ತಾ ಇದ್ದಳು. ಆ ಹೆಲ್ಪ್ಗೆ ನಾನು ಬಿದ್ದೋದೆ ಎಂದು ಶ್ರಾವಣಿ ಸುಬ್ರಹ್ಮಣ್ಯ ಸುಬ್ಬು ಹೇಳಿದ್ರೆ, ಡಾನ್ಸ್ ಇಂಡಿಯಾ ಡಾನ್ಸ್ನಲ್ಲಿ ಇದ್ದ ಡಾನ್ಸರ್ ನನ್ನ ಹ್ಯೂಜ್ ಕ್ರಷ್ ಎಂದವರು ಶ್ರಾವಣಿ ಸುಬ್ರಹ್ಮಣ್ಯ ಶ್ರಾವಣಿ.
ಮೊದಲ ದಿನ ಮೊದಲ ಕ್ಲಾಸ್ ಅಟೆಂಡ್ ಮಾಡಿದಾಗ ಹೆಸರು, ಮಾರ್ಕ್ಸ್ ಎಲ್ಲಾ ಕೇಳಿದಾಗ್ಲೇ ಆಗಲೇ ಹುಡುಗರು ಫಿಕ್ಸ್ ಆಗಿ ಬಿಡ್ತಾರೆ. ಯಾರೋ ಒಬ್ಬಳು ಸಕತ್ ಇದ್ದಾಳಲ್ಲ, ನಮ್ ಫ್ಯೂಚರ್ ಇವಳು ಅಂತೆಲ್ಲಾ ಎಂದುಕೊಂಡು ಬಿಡ್ತಾರೆ. ಆದ್ರೆ ಪ್ರಾಕ್ಟೀಕಲ್ ಆಗಿ ಯೋಚ್ನೆ ಮಾಡಿದಾಗ ಅದೆಲ್ಲಾ ಆಗಲ್ಲ ಬಿಡಿ ಎನ್ನುವ ಮೂಲಕ ತಮ್ಮ ಮೊದಲ ಕ್ರಷ್ ಗುಟ್ಟಾಗಿ ಇಟ್ಟವರು ಕರ್ಣ ಸೀರಿಯಲ್ ಕರ್ಣ ಕಿರಣ್ ರಾಜ್. ಇನ್ನು ನಿಧಿ ಪಾತ್ರಧಾರಿ ಕಾವ್ಯಾ ಗೌಡ ಕ್ಯಾಮೆರಾಗೆ ಕೈ ಅಡ್ಡ ಹಾಕಿ, ಕೇಳಲೇಬೇಡಿ ಎಂದುಬಿಟ್ಟರು!
57
ಆದಿ-ಲಕ್ಷ್ಮಿ ಹೀಗೆ ಹೇಳಿದ್ರು
ಒಬ್ಬಳು ನನ್ನ ಕ್ರಷ್ ಎಂದು ಎಲ್ಲರಿಗೂ ಅವಳ ಬಗ್ಗೆ ಹೇಳಿಕೊಂಡು ತಿರುಗಾಡಿದೆ. ಪಾಪ ಅವಳಿಗೆ ಸಿಕ್ಕಾಪಟ್ಟೆ ಕಷ್ಟ ಆಗೋಗಿತ್ತು ಎಂದು ಆದಿಲಕ್ಷ್ಮಿ ಪುರಾಣದ ಆದಿ ಹೇಳಿದ್ರೆ, ಮೂವಿ ನೋಡಿದಾಗ ನನ್ನ ಹುಡುಗ ಹೀಗೆಯೇ ಇರಬೇಕು ಎಂದು ಫೀಲ್ ಮಾಡಿಕೊಂಡ ಡ್ರೀಮಿ ಗರ್ಲ್ ನಾನು ಎಂದರು ಲಕ್ಷ್ಮಿ.
67
ಸುದೀಪ್ ಥರ ಇದ್ದ ಅವನು ಎಂದಳು ದುರ್ಗಾ
ಸಿನಿಮಾದಲ್ಲಿ ನೋಡಿದಾಗ ಕ್ರಷ್ ಆಗಿದ್ದು ಮಾಧುರಿ ದೀಕ್ಷಿತ್ ಎಂದು ನಾ ನಿನ್ನ ಬಿಡಲಾರೆ ಶರತ್ ಹೇಳಿದ್ರೆ, ದುರ್ಗಾ, ಮೊದಲ ಕ್ರಷ್ ಆಗಿದ್ದು, ಸ್ಕೂಲ್ನಲ್ಲಿ ಅನಿಸತ್ತೆ. ಸುದೀಪ್ ಥರ ಇದ್ದ ಅವನು. ಹೀರೋ ರೀತಿ ಮಾತನಾಡುವ ಲೆವೆಲ್ಗೆ ಇದ್ದ ಎಂದರು.
77
ಬ್ರಹ್ಮಗಂಟು ಚಿರುದು ಬೇರೆನೇ ಸ್ಟೋರಿ
ನಾನು ಓದಿದ್ದು ಮೆಕ್ಯಾನಿಕಲ್ ಎಂಜಿನಿಯರ್ ಕಾಲೇಜಿನಲ್ಲಿ, ಅಲ್ಲಿ ಹುಡುಗಿಯರೇ ಇರಲಿಲ್ಲ ಎಂದು ಬ್ರಹ್ಮಗಂಟು ಚಿರು ಬೇಸರ ವ್ಯಕ್ತಪಡಿಸಿದರೆ, ನಾನು ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳು.ಆದ್ದರಿಂದ ನನ್ನ ಮೊದಲ ಕ್ರಷ್ ನನ್ನ ಅಪ್ಪ ಎಂದರು ದೀಪಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.