'ನಾ ನಿನ್ನ ಬಿಡಲಾರೆ' ಧಾರಾವಾಹಿಯ ವಿಚಿತ್ರ ಪಾತ್ರ ಶಂಭುವನ್ನು ನಿರ್ವಹಿಸುವ ನಟ ಸಂತೋಷ್ ಕರ್ಕಿ, ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಶಂಭುವಿನ ವೇಷಭೂಷಣವಿಲ್ಲದೆ ನಿಜ ಜೀವನದಲ್ಲಿ ಜನರು ಅವರನ್ನು ಗುರುತಿಸಲು ವಿಫಲರಾಗುತ್ತಾರೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.
ಶಂಭು ಎಂದರೆ ಸಾಕು, ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ ವೀಕ್ಷಕರಿಗೆ ಹರಕು-ಮುರುಕು ಬಟ್ಟೆ ಹಾಕಿಕೊಂಡಿರೋ, ತಲೆಗೂದಲೆಲ್ಲಾ ಹರಡಿಕೊಂಡಿರೋ ಚಿತ್ರ-ವಿಚಿತ್ರ ರೀತಿಯಲ್ಲಿ ಕೆಲವೊಮ್ಮೆ ಅರ್ಥವೇ ಆಗದ ಮಾತು ಆಡುವ, ಭವಿಷ್ಯದ ಬಗ್ಗೆ ಒಗಟಾಗಿ ಹೇಳುವ ಪಾತ್ರವೊಂದು ಕಣ್ಣೆದುರಿಗೆ ಬರುತ್ತದೆ.
27
ಸಾಫ್ಟ್‌ವೇರ್ ಎಂಜಿನಿಯರ್
ಅಂದಹಾಗೆ ಶಂಭು ಪಾತ್ರಧಾರಿಯ ಹೆಸರು ಸಂತೋಷ್ ಕರ್ಕಿ. ಇವರ ಇನ್ಸ್ಟಾಗ್ರಾಮ್ ಪ್ರೊಫೈಲ್ ನೋಡಿದರೆ ಇವರೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಎನ್ನುವುದು ತಿಳಿಯುತ್ತದೆ. ಇವರಿಗೆ ಜೀ ಕುಟುಂಬ ಅವಾರ್ಡ್ಸ್ (Zee Kutumba Awards) ಬೆಸ್ಟ್ ಅಪ್ಪ ಪ್ರಶಸ್ತಿ ಸಿಕ್ಕಿದೆ.
37
ಜಗ್ಗೇಶ್ ಕಡೆಯಿಂದ ಪ್ರಶಸ್ತಿ
ಈ ಸಂದರ್ಭದಲ್ಲಿ ಅವರು ನಟ ಜಗ್ಗೇಶ್ ಕಡೆಯಿಂದ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆದರೆ ಸಂತೋಷ್ ಅವರು ವೇದಿಕೆಯ ಮೇಲೆ ಹೋದರೆ ಬಹುಶಃ ಯಾರೊಬ್ಬರೂ ಅವರನ್ನು ಗುರುತು ಹಿಡಿಯಲು ಸಾಧ್ಯವೇ ಇಲ್ಲ.
ಅದೇ ರೀತಿ, ಇವರು ಹಲವು ಜನರ ಬಳಿ ಅಸಲಿ ವೇಷದಲ್ಲಿ ಹೋಗಿ ಮಾತನಾಡಿರುವುದನ್ನು ತೋರಿಸಿದ್ದಾರೆ. ಆದರೆ ಯಾರೊಬ್ಬರೂ ಇವರ ಗುರುತು ಹಿಡಿಯಲಿಲ್ಲ. ನಾನೇ ಶಂಭು ಎಂದು ಹೇಳಿದರೂ ಸುಳ್ಳು ಹೇಳಬೇಡಿ ಎಂದಿದ್ದಾರೆ.
57
ನಾನೇ ಶಂಭು ಎಂದ್ರೂ ನಂಬದ ಜನ
ನಾ ನಿನ್ನ ಬಿಡಲಾರೆ ಸೀರಿಯಲ್ ನೋಡುತ್ತೇನೆ ಎಂದು ಹೇಳಿದರೂ, ನೀವ್ಯಾರೋ ಗೊತ್ತಿಲ್ಲ ಎಂದು ಕೆಲವರು ಹೇಳಿದ್ರೆ, ನಾನೇ ಶಂಭು ಪಾತ್ರಧಾರಿ ಎಂದರೂ ನಂಬಲು ರೆಡಿ ಇಲ್ಲ.
67
ಶಂಭು ವೇಷ ತೊಟ್ಟು ಹೋದಾಗ ಜನರ ಭಯ!
ಬಳಿಕ, ಶಂಭು ಕ್ಯಾರೆಕ್ಟರ್ ಗೆಟಪ್ನಲ್ಲಿ ಹೋದಾಗ ಜನರೆಲ್ಲ ಅವರನ್ನು ಕಂಡು ಖುಷಿಯೋ ಖುಷಿ. ತುಂಬಾ ಚೆನ್ನಾಗಿ ಬರ್ತಾ ಇದೆ ಸೀರಿಯಲ್. ನಿಮ್ಮ ಕ್ಯಾರೆಕ್ಟರ್ ತುಂಬಾ ಇಷ್ಟವಾಯ್ತು ಎಂದಿದ್ದಾರೆ. ಕೆಲವರು ಇವರನ್ನು ನೋಡಿ ಹೆದರಿಕೊಂಡರು ಕೂಡ.
77
ಮುಗಿಬಿದ್ದ ಜನ
ಗುರುತು ಹಿಡಿದ ಬಳಿಕ ಸೆಲ್ಫೀಗಾಗಿ ಅಭಿಮಾನಿಗಳು ಮುಗಿಬಿದ್ದರು.