'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಅಂಬಿಕಾ ಆತ್ಮವಾಗಿ ಕಾಣಿಸಿಕೊಂಡರೆ, ನಿಜ ಜೀವನದಲ್ಲಿ ಅಂಬಿಕಾ ಪಾತ್ರಧಾರಿ ನೀತಾ ಅಶೋಕ್ ಮತ್ತು ಮಗಳು ಹಿತಾ ಪಾತ್ರಧಾರಿ ಮಹಿತಾ ರೀಲ್ಸ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ನಲ್ಲಿ ಸದ್ಯ ಅಂಬಿಕಾ ಆತ್ಮ ದುರ್ಗಾಗೆ ಮಾತ್ರ ಕಾಣಿಸುತ್ತಿದೆ. ದುರ್ಗಾ ಮತ್ತು ಅಂಬಿಕಾ ಅಕ್ಕ- ತಂಗಿ ಎನ್ನೋ ಸತ್ಯ ಅಂಬಿಕಾಗೆ ಗೊತ್ತು, ಆದರೆ ದುರ್ಗಾ ಮಾತ್ರ ತನ್ನ ಅಕ್ಕ ಅವಳೇ ಎನ್ನುವುದು ಗೊತ್ತಿಲ್ಲ.
27
ಅಮ್ಮನಿಗಾಗಿ ಹಂಬಲ
ಅದೇ ಇನ್ನೊಂದೆಡೆ, ಪುಟಾಣಿ ಹಿತಾ ಅಮ್ಮನಿಗಾಗಿ ಹಂಬಲಿಸುತ್ತಾ ಇದ್ದಾಳೆ. ಕನಸಿನಲ್ಲಿ ಅಮ್ಮ ಬಂದು ಪ್ರೀತಿಯ ಧಾರೆ ಹರಿಸೋದು ಬಿಟ್ಟರೆ ಅಮ್ಮ ಆಕೆಗೆ ಕಾಣಿಸುತ್ತಿಲ್ಲ.
37
ಮಗಳಿಗೂ ಕಂಡೇ ಬಿಟ್ಟಳು
ಆದರೆ ಇದೀಗ ಹಿತಾಗೆ ಅಮ್ಮ ಅಂಬಿಕಾ ಕಾಣಿಸಿಬಿಟ್ಟಿದ್ದಾಳೆ! ಹಾಗೆಂದು ಇದು ಸೀರಿಯಲ್ನಲ್ಲಿ ಅಲ್ಲ. ಬದಲಿಗೆ ಈ ಸೀರಿಯಲ್ ಅಮ್ಮ- ಮಗಳು ಸೇರಿ ರೀಲ್ಸ್ ಮಾಡಿದ್ದಾರೆ.
ಅಂಬಿಕಾ ಪಾತ್ರಧಾರಿಯಾಗಿರುವ ನೀತಾ ಅಶೋಕ್ (Neetha Ashok) ಹಾಗೂ ಹಿತಾ ಪಾತ್ರಧಾರಿಯಾಗಿರುವ ಮಹಿತಾ (Mahita) ಸೀರಿಯಲ್ನಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್ನಲ್ಲಿಯೂ ಸಕತ್ ಫೇಮಸ್ ಆಗಿದ್ದಾರೆ. ಇವರಿಬ್ಬರೂ ಹಲವಾರು ರೀಲ್ಸ್ಗಳನ್ನು ಮಾಡುತ್ತಿರುತ್ತಾರೆ.
57
ಪುಟಾಣಿ ಮಹಿತಾ ಕುರಿತು
ಇನ್ನು ಎಲ್ಲರ ಮನ ಗೆದ್ದಿರೋ ಪುಟಾಣಿ ಹಿತಾ ಅರ್ಥಾತ್ ಬಾಲಕಿ ಮಹಿತಾ ಕುರಿತು ಹೇಳುವುದಾದರೆ, ಈಕೆ ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಮಹಿತಾ, ನಂತರ ಚುಕ್ಕಿತಾರೆ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಳು. ಸದಾ ನಟನೆಯಲ್ಲಿ ಮಿಂಚುತ್ತಿರುವ ಮಹಿತಾ ಒಳ್ಳೆಯ ಸಿಂಗರ್ ಕೂಡ. ಈಕೆ ಇನ್ಸ್ಟಾಗ್ರಾಮ್ ಪುಟ ಹೊಂದಿದ್ದು ಅದರಲ್ಲಿ, ನಾನಿನ್ನ ಬಿಡಲಾರೆ ಸೀರಿಯಲ್ನ ಟೈಟಲ್ ಸಾಂಗ್ ಅನ್ನು ಅದ್ಭುತವಾಗಿ ಹಾಡಿರುವುದನ್ನು ನೋಡಬಹುದು.
67
ಅಂಬಿಕಾ ಅರ್ಥಾತ್ ನೀತಾ ಅಶೋಕ್ ಕುರಿತು
ಇನ್ನು ನಟಿ ನೀತಾ ಅಶೋಕ್ ಕುರಿತು ಹೇಳುವುದಾದರೆ, ಇವರು ಅನೂಪ್ ಭಂಡಾರಿ (Anoop Bandhari) ನಿರ್ದೇಶನದ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರು ಅಪರ್ಣಾ ಬಲ್ಲಾಳ್ (ಪನ್ನಾ) ಪಾತ್ರದಲ್ಲಿ ನಟಿಸಿದ್ದಾರೆ. ನೀತಾ ನಟಿಸಿರುವುದು ಒಂದೇ ಸಿನಿಮಾದಲ್ಲಿ ಆದರೂ ಅವರ ಫ್ಯಾನ್ಸ್ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇದೆ.
77
ತುಳು ಚಿತ್ರದಲ್ಲಿಯೂ ಮಿಂಚಿಂಗ್
ವಿಕ್ರಾಂತ್ ರೋಣದಲ್ಲಿ ನಟಿಸುವ ಮುನ್ನ ಅಂದರೆ 2019ರಲ್ಲಿ ತುಳು ಚಲನಚಿತ್ರ ಜಬರ್ದಸ್ತ್ ಶಂಕರದಲ್ಲಿ ನೀತಾ ನಟಿಸಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಯಶೋದಾ' ಧಾರಾವಾಹಿಯ ಮೂಲಕವು ಹೆಸರು ಮಾಡಿದ್ದಾರೆ ನೀತಾ ಅಶೋಕ್. ಇದರಲ್ಲದೇ ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ದೂರದರ್ಶನದಲ್ಲಿ ಹಿಂದಿ ಧಾರಾವಾಹಿಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ.