Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!

Published : Dec 05, 2025, 10:44 PM IST

ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ, ಅಂಬಿಕಾ ಕಾಣಿಸಿಕೊಳ್ಳುವ ಸತ್ಯ ತಿಳಿದ ಮಾಳವಿಕಾ ದುರ್ಗಾಳನ್ನು ಮುಗಿಸಲು ಸಂಚು ರೂಪಿಸುತ್ತಿದ್ದಾಳೆ. ಇನ್ನೊಂದೆಡೆ, ಅಪ್ಪ-ಮಗಳನ್ನು ಒಂದು ಮಾಡಲು ಯತ್ನಿಸುತ್ತಿರುವ ದುರ್ಗಾಳಿಗೆ ಶರತ್‌ನಿಂದ ಅಪ್ಪುಗೆ ಸಿಕ್ಕಿದ್ದು, ಇದು ದುರ್ಗಾಳ ಪ್ರಾಣಕ್ಕೆ ಅಪಾಯವನ್ನು ತಂದೊಡ್ಡಿದೆ.

PREV
17
ದುರ್ಗಾಳ ಮುಗಿಸಲು ಸ್ಕೆಚ್​

ನಾ ನಿನ್ನ ಬಿಡಲಾರೆ (Naa Ninna Bidalaare) ನಲ್ಲಿ ಸದ್ಯ ವಿಲನ್​ಗಳ ಕೈ ಮೇಲಾಗುತ್ತಿದೆ. ಇದಾಗಲೇ ದುರ್ಗಾಳಿಗೆ ಅಂಬಿಕಾ ಕಾಣಿಸಿಕೊಳ್ಳುವ ವಿಷಯ ಮಾಳವಿಕಾಗೆ ತಿಳಿದಿದೆ. ದುರ್ಗಾಳನ್ನು ಮುಗಿಸಲು ಆಕೆ ಸ್ಕೆಚ್​ ಹಾಕುತ್ತಿದ್ದಾಳೆ.

27
ಅಕ್ಕ-ತಂಗಿ ಸಂಬಂಧ

ಆಕೆಯ ಮಾಯಾವಿ ಕರ್ಣ ಪಿಶಾಚಿ, ದುರ್ಗಾ ಮತ್ತು ಅಂಬಿಕಾಗೆ ಸಂಬಂಧ ಇರುವ ಬಗ್ಗೆ ತಿಳಿಸಿದೆ. ಆದರೆ ಅಕ್ಕ- ತಂಗಿ ಎನ್ನುವುದು ಮಾತ್ರ ಗೊತ್ತಿಲ್ಲ. ಅದೇನೇ ಇದ್ದರೂ ಹೆಜ್ಜೆ ಹೆಜ್ಜೆಗೂ ಹಿತಾಳನ್ನು ಕಾಪಾಡುವ ದುರ್ಗಾಳನ್ನು ಮುಗಿಸುವ ಪ್ರಯತ್ನದಲ್ಲಿ ಇದ್ದಾಳೆ ಮಾಳವಿಕಾ.

37
ಅಪ್ಪ-ಮಗಳು ದೂರ

ಅದೇ ಇನ್ನೊಂದೆಡೆ, ಹಿತಾ ಮತ್ತು ಶರತ್​ ಅಪ್ಪ-ಮಗಳನ್ನು ದೂರ ಮಾಡಲು ಮಾಯಾ ಇನ್ನಿಲ್ಲದಂತೆ ಪ್ರಯತ್ನ ಪಡುತ್ತಿದ್ದಾಳೆ. ಇದಾಗಲೇ ಆಕೆ ಒಂದು ಹಂತದಲ್ಲಿ ಸಕ್ಸಸ್​ ಕೂಡ ಆಗಿದ್ದಾಳೆ.

47
ತಬ್ಬಿಕೊಂಡ ಶರತ್​

ಆದರೆ, ದುರ್ಗಾ ಎಲ್ಲಾ ಶಕ್ತಿ ಮೀರಿ ಅಪ್ಪ-ಮಗಳನ್ನು ಒಂದು ಮಾಡಲು ನೋಡುತ್ತಿದ್ದಾಳೆ. ಇದೀಗ ಹಿತಾ ಅಪ್ಪನ ಪರವಾಗಿ ಇರುವುದನ್ನು ನೋಡಿದಾಗ ಶರತ್​ ಖುಷಿಯಿಂದ ದುರ್ಗಾಳನ್ನು ತಬ್ಬಿಕೊಂಡಿದ್ದಾನೆ.

57
ಮಾಯಾ ಹೊಟ್ಟೆ ಉರಿ

ಇದನ್ನು ನೋಡಿ ಮಾಯಾ ಹೊಟ್ಟೆ ಉರಿದುಕೊಂಡರೆ, ಅಂಬಿಕಾ ಮಾತ್ರ ಖುಷಿಯಿಂದ ಕಣ್ಣೀರಾಗಿದ್ದಾಳೆ. ಆಕೆಗೆ ಹೇಗಾದರೂ ಮಾಡಿ ದುರ್ಗಾ ಮತ್ತು ಶರತ್​ನನ್ನು ಒಂದು ಮಾಡುವ ಹಂಬಲ.

67
ಏಕೈಕ ಮಹಿಳೆ

ಇದರ ಪ್ರೊಮೋ ರಿಲೀಸ್​ ಆಗುತ್ತಲೇ, ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಇದಾಗಲೇ ಈ ದೆವ್ವ ಅಂಬಿಕಾ ಬರೀ ಬೆಡ್​ರೂಮ್​ನಲ್ಲೇ ಇರೋದು ಯಾಕೆ ಎಂದು ಪ್ರಶ್ನಿಸ್ತಾ ಇದ್ದರು. ಇದೀಗ ದುರ್ಗಾಳನ್ನು ತನ್ನ ಗಂಡ ಶರತ್​ ತಬ್ಬಿಕೊಂಡಾಗ ಆಕೆ ಖುಷಿ ಪಡುವುದನ್ನು ನೋಡಿದ ನೆಟ್ಟಿಗರು, ಹೀಗೆ ಖುಷಿ ಪಡುವ ಜಗತ್ತಿನ ಏಕೈಕ ಮಹಿಳೆ ಎನ್ನುತ್ತಿದ್ದಾರೆ.

77
ಪ್ರಾಣಕ್ಕೆ ಅಪಾಯ

ಒಟ್ಟಿನಲ್ಲಿ ದುರ್ಗಾಳ ಮೇಲೂ ಈಗ ಸಾವಿನ ತೂಗುಗತ್ತಿ ಇದೆ. ಆಕೆಗೆ ಈ ಬಗ್ಗೆ ಏನೂ ಗೊತ್ತಿಲ್ಲ. ತನ್ನಲ್ಲಿರುವ ಶಕ್ತಿಯೂ ಗೊತ್ತಿಲ್ಲ. ಆದರೆ ಆಕೆಗೆ ಅಂಬಿಕಾ ಕಾಣಿಸಿಕೊಳ್ತಿರೋ ವಿಷಯ ತಿಳಿದಿರುವ ಹಿನ್ನೆಲೆಯಲ್ಲಿ ಆಕೆಯ ಪ್ರಾಣಕ್ಕೆ ಅಪಾಯವಿದೆ.

Read more Photos on
click me!

Recommended Stories