ಬಿಗ್‌ಬಾಸ್‌ನಿಂದ ಖ್ಯಾತರಾದ ಡಾಗ್ ಸತೀಶ್ ಇದೀಗ ಅಚ್ಚರಿಯ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಅವರು ಬ್ರಷ್ ಬಳಸದೆ, ಬರಿಗೈಯಲ್ಲೇ ಟಾಯ್ಲೆಟ್ ಕ್ಲೀನ್ ಮಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಸ್ವಚ್ಛತೆಗೆ ಹೇಸಿಗೆ ಏಕೆ ಎಂದು ಪ್ರಶ್ನಿಸಿರುವ ಅವರು, ಕೈ ಉರಿಯುತ್ತಿದ್ದರೂ ಈ ಕೆಲಸ ಮಾಡಿದ್ದಾರೆ.
ಬಿಗ್ಬಾಸ್ (Bigg Boss) ನಿಂದ ಹೊರಕ್ಕೆ ಬರುತ್ತಿದ್ದಂತೆಯೇ ಸ್ಪರ್ಧಿಗಳು ಕೆಲ ದಿನಗಳ ಮಟ್ಟಿಗೆ ಸೆಲೆಬ್ರಿಟಿಗಳಾಗುತ್ತಾರೆ. ಎಲ್ಲಾ ಮಾಧ್ಯಮಗಳಲ್ಲಿ ಅವರೇ ಹೈಲೈಟ್. ಈ ಸಂದರ್ಭದಲ್ಲಿ ಬಿಗ್ಬಾಸ್ ಮನೆಯೊಳಗಿನ ಕೆಲವು ಸಿಹಿ ಕಹಿ ಘಟನೆಗಳನ್ನು ಮೀಡಿಯಾಗಳ ಮುಂದೆ ಶೇರ್ ಮಾಡಿಕೊಳ್ಳುವುದು ಸಾಮಾನ್ಯ. ಅಂಥವರಲ್ಲಿ ಒಬ್ಬರು ಡಾಗ್ ಸತೀಶ್.
28
ಡಾಗ್ ಸತೀಶ್ ಹವಾ
ನೂರಾರು ಕೋಟಿ ರೂಪಾಯಿಗಳ ನಾಯಿಗಳ ಒಡೆದ ಎಂದೇ ಫೇಮಸ್ ಆಗಿರೋ ಡಾಗ್ ಸತೀಶ್ (Bigg Boss Dog Sathish) ಅವರಿಗೆ ತಮ್ಮ ಶ್ರೀಮಂತಿಕೆ ಮತ್ತು ಸೌಂದರ್ಯದ ಮೇಲೆ ಎಷ್ಟು ಕಾನ್ಫೆಡೆನ್ಸ್ ಇದೆಯೋ, ಅದೇ ರೀತಿ ತಮ್ಮ ಮಾತಿನ ಮೇಲೂ ಇದೆ. ಇದಾಗಲೇ ಹಲವಾರು ಮಾಧ್ಯಮಗಳಲ್ಲಿ ಅವರು ಬಿಗ್ಬಾಸ್ ಬಗ್ಗೆ ಮಾತನಾಡುತ್ತಲೇ ಕೆಲವು ನೆಗೆಟಿವ್ ಕಮೆಂಟ್ಸ್ ಕೂಡ ಮಾಡಿದ್ದಿದೆ.
38
ಬರಿಗೈಯಲ್ಲಿ ಟಾಯ್ಲೆಟ್
ತಾವು ಮನಸ್ಸು ಮಾಡಿದ್ರೆ ಬಿಗ್ಬಾಸ್ ಅನ್ನು ವಿಶ್ವದ ಮಟ್ಟಿಗೆ ಕೊಂಡೊಯ್ಯುವ ತಾಕತ್ತು ಇದೆ ಎನ್ನುತ್ತಲೇ ಹೈಪ್ ಕ್ರಿಯೇಟ್ ಮಾಡುತ್ತಿರೋ ಡಾಗ್ ಸತೀಶ್ ಇದೀಗ ಬರಿಗೈಯಲ್ಲಿ ಟಾಯ್ಲೆಟ್ ತೊಳೆದಿದ್ದಾರೆ! ಇದನ್ನು ಎಸ್ಎಸ್ಟಿವಿ ಶೇರ್ ಮಾಡಿಕೊಂಡಿದೆ.
Glouse, ಬ್ರಷ್ ಕೂಡ ಬಳಸದೇ ತುಂಬಾ ಜನ ಬಳಸಿರುವ ಟಾಯ್ಲೆಟ್ ಅನ್ನು ಅವರು ಕ್ಲೀನ್ ಮಾಡಿದ್ದಾರೆ. ಹಲವಾರು ಮಂದಿ ಮೀಡಿಯಾದವರು ಇಲ್ಲಿ ಬಂದಿದ್ದರು. ಅವರೆಲ್ಲರೂ ಇದನ್ನು ಯೂಸ್ ಮಾಡಿದ್ರು. ನಮ್ಮ ಮನೆಯ ಟಾಯ್ಲೆಟ್ ಅನ್ನು ನಾವು ಕ್ಲೀನ್ ಮಾಡದೇ ಇನ್ನಾರು ಮಾಡಬೇಕು ಅಲ್ಲವೆ ಎಂದು ಪ್ರಶ್ನಿಸಿದ್ದಾರೆ.
58
ಕೈ ಉರಿ
ಟಾಯ್ಲೆಟ್ ಕ್ಲೀನರ್ ಹಾಕಿ, ಟಾಯ್ಲೆಟ್ನ ಒಳಗಡೆಗೂ ಬರಿಗೈನಲ್ಲೇ ತಿಕ್ಕಿ ಉಜ್ಜಿದ್ದಾರೆ. ಟಾಯ್ಲೆಟ್ ಕ್ಲೀನರ್ನಿಂದ ಕೈ ಉರಿಯಾಗುತ್ತಿದೆ. ಆದರೂ ನಾನು ಕ್ಲೀನ್ ಮಾಡುತ್ತೇನೆ ಎಂದಿದ್ದಾರೆ.
68
ಕೈಯಲ್ಲೇ ಕ್ಲೀನ್
ಅಷ್ಟಕ್ಕೂ ಇವರು ಟಾಯ್ಲೆಟ್ ಅನ್ನು ಬರಿಗೈಯಲ್ಲಿ ಕ್ಲೀನ್ ಮಾಡಿದ್ದು ಯಾಕೆ ಎಂದು ಗೊತ್ತಿಲ್ಲ. ಆದರೆ ಬ್ರಷ್ನಲ್ಲಿ ಕ್ಲೀನ್ ಮಾಡುವುದಕ್ಕಿಂತ ಬರಿಗೈಯಲ್ಲಿ ಕ್ಲೀನ್ ಮಾಡಿದ್ರೆ ತುಂಬಾ ಚೆನ್ನಾಗಿ ಇರುತ್ತದೆ ಎನ್ನುವುದು ಅವರ ಮಾತು.
78
ಘಮ್ ಪರಿಮಳ!
ನೋಡಿ ನನ್ನ ಕೈ ಉರಿಯುತ್ತಿದೆ. ಆದರೆ ಇಲ್ಲಿ ನೋಡಿ ಕೈಯಲ್ಲಿ ಘಮ್ ಎನ್ನುವ ಪರಿಮಳವೂ ಬರುತ್ತಿದೆ ಎಂದು ಅಲ್ಲಿಗೆ ಬಂದ ವಿಡಿಯೋದವರ ಅನುಮತಿ ಪಡೆದು ನಂತರ ಕೈಯನ್ನು ತೊಳೆದಿದ್ದಾರೆ.
88
ನಿಮ್ಮ ಮನೆಗೂ ಬರ್ತೀನಿ
ನಿಮ್ಮ ಮನೆಗೂ ಬೇಕಾದ್ರೆ ಬರ್ತೀನಿ, ಕ್ಲೀನ್ ಮಾಡಲು ಹೇಸಿಗೆ ಯಾಕೆ, ಮುಖ ಸಿಂಡರಿಸಿಕೊಳ್ಳುವುದು ಏಕೆ, ಇದು ಶುಚಿಯಾಗಿ ಇರಬೇಕು ಎನ್ನುವುದು ನನ್ನ ಭಾವನೆ ಎಂದಿದ್ದಾರೆ!