ಹಿತಾ ಮತ್ತು ದುರ್ಗಾರನ್ನು ಬೇರೆ ಮಾಡಲು ಮಾಯಾ ಮಾಡಿದ ಪ್ಲ್ಯಾನ್ ವಿಫಲವಾಗುತ್ತದೆ. ದುರ್ಗಾ ತನ್ನ ಬುದ್ಧಿವಂತಿಕೆಯಿಂದ ಅಪ್ಪ-ಮಗಳಾದ ಶರತ್ ಮತ್ತು ಹಿತಾಳನ್ನು ಒಂದು ಮಾಡುತ್ತಾಳೆ. ಆದರೆ, ಹಿತಾಳ 7ನೇ ಹುಟ್ಟುಹಬ್ಬದಂದೇ ಆಕೆಯನ್ನು ಬ*ಲಿ ಕೊಡಲು ಮಾಳವಿಕಾ ಸಿದ್ಧತೆ. ಮುಂದೇನು?
ಯಾವುದೇ ಕಾರಣಕ್ಕೂ ದುರ್ಗಾ ಮತ್ತು ಹಿತಾ ಒಂದಾಗಬಾರದು. ಹಿತಾ ಮತ್ತು ಅಪ್ಪ ಶರತ್ ಒಟ್ಟಾಗಬಾರದು ಎಂದು ಮಾಯಾ ಹರಸಾಹಸ ಪಡುತ್ತಿದ್ದಾರೆ. ಇವರೆಲ್ಲರ ನಡುವೆ ಜಗಳ ಮಾಡಿಸುವ ಸಂಬಂಧ ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇದ್ದಾಳೆ. ಇದೀಗ ಹಿತಾಳ ಫೆವರೆಟ್ ಗೊಂಬೆಯನ್ನು ದುರ್ಗಾ ಕ್ಲೀನ್ ಮಾಡಿ ಇಟ್ಟಿದ್ದರೆ, ಅದಕ್ಕೆ ಆ್ಯಸಿಡ್ ಹಾಕಿ ವಿರೂಪಗೊಳಿಸಿದ್ದಾಳೆ ಮಾಯಾ. ಕೊನೆಗೆ ಶರತ್ ಬಳಿ ಹೋಗಿ ಕ್ಲೀನ್ ಮಾಡುವಾಗ ದುರ್ಗಾಳೆ ಹಾಳು ಮಾಡಿರುವುದಾಗಿ ಹೇಳಿದ್ದಾಳೆ.
26
ದುರ್ಗಾಳ ಮೇಲೆ ಹಿತಾ ಕೋಪ
ಗೊಂಬೆ ನೋಡಿ ಹಿತಾಳಿಗೆ ಇನ್ನಿಲ್ಲದ ನೋವು ಉಂಟಾಗಿ ಅದಕ್ಕೆ ದುರ್ಗನೇ ಕಾರಣ ಎಂದುಕೊಂಡು ಅವಳನ್ನು ರೂಮಿನಿಂದ ಹೊರಕ್ಕೆ ದಬ್ಬಿದ್ದಾಳೆ. ಇತ್ತ ಹಿತಾಳ ವಿಷಯದಲ್ಲಿ ದುರ್ಗಾ ಯಾವ ತಪ್ಪನ್ನೂ ಮಾಡುವುದಿಲ್ಲ ಎನ್ನುವುದು ಶರತ್ಗೆ ಗೊತ್ತು. ಆದ್ದರಿಂದ ದುರ್ಗಾಳನ್ನು ಸಮಾಧಾನಪಡಿಸಿ, ನಿನ್ನ ತಪ್ಪಿಲ್ಲ ಎನ್ನುವುದು ಗೊತ್ತು ಎಂದಾಗ ದುರ್ಗಾಗೆ ಸಮಾಧಾನವಾಗಿದೆ. ಅದೇ ರೀತಿ ಚಿಟ್ಟೆಯೊಂದು ದುರ್ಗಳ ಬಳಿ ಬಂದಾಗ, ಹಿತಾಳಿಗೂ ಅಮ್ಮನ ಮಾತು ನೆನಪಾಗಿ ದುರ್ಗಾಳನ್ನು ಬೈದುದಕ್ಕಾಗಿ ಕ್ಷಮೆ ಕೋರಿದ್ದಾಳೆ.
36
ಅಪ್ಪ-ಮಗಳ ಒಂದು ಮಾಡಲು ದುರ್ಗಾ ಪ್ಲ್ಯಾನ್
ಒಟ್ಟಿನಲ್ಲಿ ಮಾಯಾ ಪ್ಲ್ಯಾನ್ ಬುಡಮೇಲಾಗಿದೆ. ಕೊನೆಗೆ ದುರ್ಗಾಳ ಬಳಿ ಬಂದ ಹಿತಾ, ನಿನಗೆ ಅಮ್ಮ ಕಾಣಿಸ್ತಾಳಲ್ವಾ ಹಾಗಿದ್ರೆ ಅಮ್ಮ ಈಗ ಏನು ಹೇಳಿದಳು ಎಂದು ಕೇಳಿದಾಗ, ಅಪ್ಪ-ಮಗಳನ್ನು ಒಂದು ಮಾಡಲು ಇದೇ ಒಳ್ಳೆಯ ಟೈಮ್ ಎಂದುಕೊಂಡ ದುರ್ಗಾ, ನಿನ್ನ ಅಪ್ಪ ನಿನಗೆ ಹುಟ್ಟುಹಬ್ಬದ ಗಿಫ್ಟ್ ಕೊಡಲು ಕಾಯುತ್ತಿದ್ದು, ಅದನ್ನು ತೆಗೆದುಕೊಳ್ಳುವಂತೆ ಅಮ್ಮ ಹೇಳಿದ್ದಾಳೆ ಎನ್ನುತ್ತಾಳೆ.
ಇದನ್ನು ಕೇಳಿ ಹಿತಾಗೆ ಖುಷಿಯಾಗುತ್ತದೆ. ಓಡೋಡಿ ಅಪ್ಪನ ಬಳಿ ಬರುತ್ತಾಳೆ. ಹುಟ್ಟುಹಬ್ಬಕ್ಕೆ ತಂದ ಕಾಲ್ಗೆಜ್ಜೆಯನ್ನು ಅವಳಿಗೆ ಹೇಗೆ ಕೊಡುವುದು ಎಂದು ಶರತ್ ಚಿಂತಾಕ್ರಾಂತನಾಗಿ ಕುಳಿತಿರುತ್ತಾನೆ. ಆಗ ಅಲ್ಲಿಗೆ ಬಂದ ಹಿತಾ, ಒಂದು ಕಥೆಯನ್ನು ಹೇಳುತ್ತಾ, ಗಿಫ್ಟ್ ಕೊಡುವಂತೆ ಹೇಳಿದಾಗ ಶರತ್ಗೆ ಆಶ್ಚರ್ಯ ಖುಷಿ ಎಲ್ಲವೂ ಆಗುತ್ತದೆ.
56
ಮಗಳಿಗೆ ಗೆಜ್ಜೆ ತೊಡಿಸಿದ ಶರತ್
ಕೊನೆಗೆ ತನ್ನ ಮಗಳಿಗೆ ತಾನು ತಂದ ಗೆಜ್ಜೆಯನ್ನು ತೊಡಿಸಿದಾಗ ಹಿತಾಳಿಗೆ ಇನ್ನಿಲ್ಲದ ಖುಷಿ. ಅಲ್ಲಿಗೆ ದುರ್ಗಾಳ ಪ್ಲ್ಯಾನ್ ಸಕ್ಸಸ್ ಆಗಿದ್ದು, ಅಪ್ಪ-ಮಗಳನ್ನು ಸದಾ ದೂರ ಮಾಡಲು ಹೊಂಚು ಹಾಕ್ತಿರೋ ಮಾಯಾ ಪ್ಲ್ಯಾನ್ ಠುಸ್ ಆಗುತ್ತದೆ.
66
ಹಿತಾಳ ಬ*ಲಿಗೆ ಸಿದ್ಧತೆ
ಇನ್ನು, ಸೀರಿಯಲ್ನಲ್ಲಿ ಸಕತ್ ಟ್ವಿಸ್ಟ್ ಇದೆ. ಇದು ಹಿತಾಳ 7ನೇ ವರ್ಷದ ಹುಟ್ಟುಹಬ್ಬ ಆಗಿದ್ದು, ಅಂದು ಆಕೆಯನ್ನು ಬ*ಲಿ ಕೊಡಲು ಸಿದ್ಧತೆ ನಡೆಯುತ್ತಿದೆ. ಮಾಳವಿಕಾ ಹಿತಾಳ ಬ*ಲಿಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾಳೆ. ಆಮೇಲೆ ಏನಾಗುತ್ತದೆ ಎನ್ನುವುದು ಈ ಕೆಳಗಿರುವ ಲಿಂಕ್ನಲ್ಲಿ ವಿಷಯವಿದೆ ನೋಡಿ...