ಅಣ್ಣಯ್ಯ ಧಾರಾವಾಹಿಯ ಮುದ್ದಾದ ಜೋಡಿಗಳಾದ ಪಾರು ಮತ್ತು ಶಿವಣ್ಣ, ಜೀ ಕನ್ನಡ ನಾಮಿನೇಷನ್ ಪಾರ್ಟಿಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದು ಈ ಜೋಡಿಯನ್ನು ನೋಡಿ ವೀಕ್ಷಕರು, ಅಭಿಮಾನಿಗಳು ಇವರಿಗೆ ಯಾವ ದೃಷ್ಟಿಯೂ ತಾಗದೇ ಇರಲಿ ಎಂದು ಹಾರೈಸಿದ್ದಾರೆ.
ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಅಣ್ಣಯ್ಯ. ಸೀರಿಯಲ್ ಕಥೆ, ನಟರು, ನಟನೆ ಎಲ್ಲವನ್ನೂ ಜನ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಪಾರು ಮತ್ತು ಶಿವು ಜೋಡಿಯ ಬಗ್ಗೆ ಹೇಳೋದಕ್ಕೆ ಎರಡು ಮಾತಿಲ್ಲ. ಇವರು ಕನ್ನಡ ಕಿರುತೆರೆಯ ಮೋಸ್ಟ್ ಫೇವರಿಟ್ ಜೋಡಿಗಳು.
27
ಶಿವು -ಪಾರು
ಶಿವು ಮತ್ತು ಪಾರು ಜೋಡಿಯನ್ನು ಕಿರುತೆರೆಯ ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಅವರಿಬ್ಬರ ಕೆಮೆಷ್ಟ್ರಿ ತುಂಬಾನೆ ಚೆನ್ನಾಗಿ ವರ್ಕೌಟ್ ಆಗ್ತಿದೆ. ಕೇವಲ ಆನ್ ಸ್ಕ್ರೀನ್ ಮಾತ್ರವಲ್ಲ, ಆಫ್ ಸ್ಕ್ರೀನಲ್ಲೂ ಈ ಜೋಡಿ ಬಗ್ಗೆ ಜನ ಮೆಚ್ಚುಗೆ ಸೂಚಿಸುತ್ತಲೇ ಇರುತ್ತಾರೆ.
37
ಹೊಸ ಫೋಟೊ ಸೂಪರ್
ಇದೀಗ ಪಾರು ಖ್ಯಾತಿಯ ನಿಶಾ ರವಿಕೃಷ್ಣನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿದ್ದಾರೆ. ವಿಕಾಶ್ ಉತ್ತಯ್ಯ ಜೊತೆಗಿನ ಮುದ್ದಾದ ಫೋಟೊಗಳು ಇವು. ಮುದ್ದಾದ ಫೋಟೊಗಳನ್ನು ನೋಡಿ ಜನ ಈ ಜೋಡಿಗೆ ದೃಷ್ಟಿ ತೆಗೆಯುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿಸ್ ಅದ್ಯ ನಾಮಿನೇಶನ್ ಪಾರ್ಟಿ ನಡೆಯುತ್ತಿದ್ದು, ಈ ಸಂಭ್ರಮದಲ್ಲಿ ಜೋಡಿ ಜೊತೆಯಾಗಿ ಫೋಟೊ ಶೂಟ್ ಮಾಡಿಸಿದ್ದು, ಅದೇ ಫೋಟೊಗಳನ್ನು ಶೇರ್ ಮಾಡಿ ನಿಶಾ ನಗೂನು ರೂಢಿಯಾಗಿದೆ ಎಂದು ಕ್ಯಾಪ್ಶನ್ ಹಾಕಿದ್ದಾರೆ.
57
ನಿಜವಾಗಿಯೂ ಲವ್ ಮಾಡ್ತಿದ್ದಾರ ಜೋಡಿ
ನಿಶಾ ರವಿ ಕೃಷ್ಣನ್ ಮತ್ತು ವಿಕಾಶ್, ಹೆಚ್ಚಾಗಿ ಜೊತೆಯಲ್ಲಿ ಫೋಟೊ ಶೂಟ್, ವಿಡಿಯೋ ರೀಲ್ಸ್ ಮಾಡೀ ಶೇರ್ ಮಾಡುತ್ತಿದ್ದು, ಕಾರ್ಯಕ್ರಮಗಳಲ್ಲೂ ಇವರಿಬ್ಬರು ಜೊತೆಯಾಗಿ ಇರೋದನ್ನು ನೋಡಿ ಜನ ಇವರಿಬ್ಬರು ಲವ್ ಮಾಡ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಈ ಜೋಡಿ ಆ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
67
ರೀಲ್ ಇಂದ ರಿಯಲ್ ಜೋಡಿಯಾಗಿ
ಸದ್ಯ ರೀಲ್ ನಲ್ಲಿ ದಂಪತಿಗಳಾಗಿ ಮಿಂಚುತ್ತಿರುವ ಈ ಜೋಡಿ, ರಿಯಲ್ ಲೈಫಲ್ಲಿ ಆದಷ್ಟು ಬೇಗ ಜೋಡಿಯಾಗಲಿ ಎಂದು ಜನರು ಹಾರೈಸುತ್ತಿದ್ದಾರೆ. ಯಾರ ದೃಷ್ಟಿಯೂ ಬೀಳದಿರಲಿ, ಇಬ್ಬರು ಯಾವಾಗ್ಲೂ ಜೊತೆ ಜೊತೆಯಾಗಿರಿ, ನಿಮ್ಮನ್ನು ಹೀಗೆ ನೋಡೋದೆ ನಮಗಿಷ್ಟ ಎನ್ನುತ್ತಿದ್ದಾರೆ.
77
ಸೀರಿಯಲ್ ಕಥೆ ಏನು?
ಸದ್ಯ ಅಣ್ಣಯ್ಯ ಧಾರಾವಾಹಿಯಲ್ಲಿ ರೋಚಕ ತಿರುವು ಸಿಕ್ಕಿದೆ. ಪಾರು ಮುಂದೆ ಅಣ್ಣಯ್ಯ ಶಿವು ಸತ್ಯ ರಿವೀಲ್ ಆಗಿದೆ. ಶಿವು ಅಂದ್ರೆ ತುಂಬಾನೇ ಮುಗ್ಧ ಎಂದು ಅಂದುಕೊಂಡಿದ್ದ ಪಾರುಗೆ ಈಗ ಆತ ಹಿಂದೆ ಒಬ್ಬ ದೊಡ್ಡ ರೌಡಿಯಾಗಿದ್ದ ಎನ್ನೋದು ಗೊತ್ತಾಗಿದೆ. ಹಾಗಿದ್ರೆ ಮುಂದೆ ಕಥೆ ಏನಾಗುತ್ತೆ? ಪಾರು -ಶಿವುನ ಒಪ್ಪಿಕೊಳ್ಳೋದಕ್ಕೆ ರೆಡಿ ಇದ್ದಾಳ ಕಾದು ನೋಡಬೇಕು.