'ನಾ ನಿನ್ನ ಬಿಡಲಾರೆ' ಸೀರಿಯಲ್ನಲ್ಲಿ ದುರ್ಗಾ ಮತ್ತು ಹಿತಾಳನ್ನು ಮುಗಿಸಲು ಮಾಳವika ಸಂಚು ರೂಪಿಸುತ್ತಿದ್ದಾಳೆ. ಇದರ ನಡುವೆ, ದುರ್ಗಾ ಪಾತ್ರಧಾರಿ ರಿಷಿಕಾ, ಸಾನ್ವಿ ಜೊತೆ ಡಾನ್ಸ್ ಮಾಡುತ್ತಿರುವ ರೀಲ್ಸ್ ವೈರಲ್ ಆಗಿದ್ದು, ಅಭಿಮಾನಿಗಳು ತಮಾಷೆಯಾಗಿ ಎಚ್ಚರಿಸುತ್ತಿದ್ದಾರೆ.
ನಾ ನಿನ್ನ ಬಿಡಲಾರೆ (Na Ninna Bidalaare) ಸೀರಿಯಲ್ನಲ್ಲಿ ದುರ್ಗಾ ಮತ್ತು ಅಂಬಿಕಾ ಸತ್ಯ ಎಲ್ಲಾ ಮಾಳವಿಕಾಗೆ ತಿಳಿದಿದೆ. ದುರ್ಗಾಳನ್ನು ಮುಗಿಸಲು ಸ್ಕೆಚ್ ಹಾಕುತ್ತಿದ್ದಾಳೆ. ಇದಾಗಲೇ ಹಲವು ಬಾರಿ ಪ್ರಯತ್ನಿಸಿದರೂ, ದೇವಿ ಅದನ್ನು ತಡೆದಿದ್ದಾಳೆ.
26
ಸರ್ವ ಶಕ್ತಿ
ಅದೇ ಇನ್ನೊಂದೆಡೆ ಹಿತಾ ಕೂಡ ಅಜ್ಜ ಕೊಟ್ಟಿರೋ ಸರವನ್ನು ಕಳೆದುಕೊಂಡಿರೋ ಹಿನ್ನೆಲೆಯಲ್ಲಿ, ಅವಳಿಗೂ ಅಪಾಯ ಕಾದಿದೆ. ಅವಳನ್ನು ಸಾಯಿಸಿ ಸರ್ವ ಶಕ್ತಿಯನ್ನು ಪಡೆಯಲು ಮಾಳವಿಕಾ ಕಾಯುತ್ತಿದ್ದಾಳೆ.
36
ಕಮೆಂಟಿಗರು ಏನಂದ್ರು?
ಇಷ್ಟೆಲ್ಲಾ ಇದ್ದರೂ ಇದೀಗ ನಾ ನಿನ್ನ ಬಿಡಲಾರೆ ದುರ್ಗಾ, ಸಾನ್ವಿಯ ಜೊತೆಗೂಡಿ ಡಾನ್ಸ್ ಮಾಡ್ತಿದ್ದಾಳೆ. ಮಾಳವಿಕಾ ಬರ್ತಾಳೆ ಹುಷಾರ್ ಕಣಮ್ಮಾ ಎಂದು ಅಭಿಮಾನಿಗಳು ನಟಿಯ ಕಾಲೆಳೆಯುತ್ತಿದ್ದಾರೆ.
ಅಂದಹಾಗೆ ದುರ್ಗಾ ಪಾತ್ರಧಾರಿ ಹೆಸರು ರಿಷಿಕಾ. ಸಾನ್ವಿ ಪಾತ್ರಧಾರಿಯ ಹೆಸರು ಲೇಖನಾ ಎಚ್ಎಂ. ರಿಷಿಕಾಗೆ ಇದು ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು.
56
ಸೀರಿಯಲ್ಗಳಲ್ಲಿ ನಟನೆ
ಮೊದಲ ಸೀರಿಯಲ್ನಲ್ಲಿ ಸೈಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾದಾನ' ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.
66
ಫ್ಯಾನ್ಸ್ ಫಿದಾ
ಇವರಿಬ್ಬರ ಡಾನ್ಸ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟಕ್ಕೂ ದುರ್ಗಾ ಪಾತ್ರಧಾರಿ ರಿಷಿಕಾ ಅವರು, ಅಂಬಿಕಾ ಪಾತ್ರಧಾರಿ ನೀತಾ ಅಶೋಕ್ ಜೊತೆ ಹಲವಾರು ರೀಲ್ಸ್ ಮಾಡುತ್ತಲೇ ಇರುತ್ತಾರೆ. ಇದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.