'ನಾ ನಿನ್ನ ಬಿಡಲಾರೆ' ಧಾರಾವಾಹಿಯ ಕ್ಯೂಟ್ ದೆವ್ವ ಅಂಬಿಕಾ ಪಾತ್ರದಿಂದ ಖ್ಯಾತರಾದವರು ನಟಿ ನೀತಾ ಅಶೋಕ್. 'ವಿಕ್ರಾಂತ್ ರೋಣ' ಚಿತ್ರದ ಮೂಲಕ ಸಿನಿಮಾರಂಗದಲ್ಲೂ ಗುರುತಿಸಿಕೊಂಡಿರುವ ಇವರು, ಇತ್ತೀಚೆಗೆ ಸತೀಶ್ ಎಂಬುವವರನ್ನು ವಿವಾಹವಾಗಿದ್ದಾರೆ.
ದೆವ್ವ, ಭೂತ, ಪಿಶಾಚಿ ಎಂದರೆ ಸಾಮಾನ್ಯವಾಗಿ ಎಲ್ಲರೂ ಹೆದರುವವರೇ. ಇವು ಅಸ್ತಿತ್ವದಲ್ಲಿ ಇಲ್ಲಾ ಎಂದು ಹೇಳುವವವರು ಕೂಡ ಅಂಥ ಸನ್ನಿವೇಶ ಬಂದರೆ ಹೆದರುವುದು ಉಂಟು. ಆದರೆ ಕ್ಯೂಟ್ ದೆವ್ವ ಎಂದು ಸೀರಿಯಲ್ ಪ್ರಿಯರಿಗೆ ಕೇಳಿದ್ರೆ ಅವರೆಲ್ಲಾ ಖುಷಿ ಪಡುವ ದೆವ್ವ ಒಂದೇ. ಅದು ನಾ ನಿನ್ನ ಬಿಡಲಾರೆ ಸೀರಿಯಲ್ನ ಅಂಬಿಕಾ.
27
ಕ್ಯೂಟ್ ದೆವ್ವ
ಮೋಸದಿಂದ ಸತ್ತು ಹೋದ ಈ ಕ್ಯೂಟ್ ದೆವ್ವ ಅಂಬಿಕಾ ಎಂದರೆ ಸೀರಿಯಲ್ ಪ್ರಿಯರಿಗೆ ತುಂಬಾ ಖುಷಿ. ತನ್ನ ತಂಗಿ ಮತ್ತು ಗಂಡನನ್ನು ಒಂದು ಮಾಡಲು ಈ ದೆವ್ವ ಸಾಕಷ್ಟು ಪ್ರಯತ್ನ ಮಾಡುತ್ತಲೇ ಇದೆ. ತಂಗಿಗೆ ಮಾತ್ರ ಕಾಣಿಸಿಕೊಳ್ಳುವ ಈ ಭೂತ ಕಂಡರೆ ವೀಕ್ಷಕರಿಗೆ ಇಷ್ಟವೋ ಇಷ್ಟ.
37
ದೆವ್ವದ ರಿಯಲ್ ಹೆಸರು
ಅಂದ ಹಾಗೆ ಈ ಸುಂದರ ದೆವ್ವದ ರಿಯಲ್ ಹೆಸರು ನೀತಾ ಅಶೋಕ್. ನೀತಾ ಅವರು ಇದೀಗ ಸಕತ್ ವಿಡಿಯೋಶೂಟ್ ಮಾಡಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಒಂದೇ ರೀತಿಯ ಸೀರೆ ತೊಟ್ಟು ಬರುವ ನೀತಾ ಅಶೋಕ್ ಇದೀಗ ಸೀರೆ ಬದಲಿಸಿ, ಆಭರವನ್ನೂ ಹಾಕಿಕೊಂಡು ವಿಡಿಯೋ ಶೂಟ್ ಮಾಡಿಸಿದ್ದಾರೆ.
ಇನ್ನು ನಟಿ ನೀತಾ ಅಶೋಕ್ ಕುರಿತು ಹೇಳುವುದಾದರೆ, ಇವರು ಅನೂಪ್ ಭಂಡಾರಿ (Anoop Bandhari) ನಿರ್ದೇಶನದ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರು ಅಪರ್ಣಾ ಬಲ್ಲಾಳ್ (ಪನ್ನಾ) ಪಾತ್ರದಲ್ಲಿ ನಟಿಸಿದ್ದಾರೆ. ನೀತಾ ನಟಿಸಿರುವುದು ಒಂದೇ ಸಿನಿಮಾದಲ್ಲಿ ಆದರೂ ಅವರ ಫ್ಯಾನ್ಸ್ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇದೆ.
57
ವಿಕ್ರಾಂತ್ ರೋಣದಿಂದ ಫೇಮಸ್
ವಿಕ್ರಾಂತ್ ರೋಣದಲ್ಲಿ ನಟಿಸುವ ಮುನ್ನ ಅಂದರೆ 2019ರಲ್ಲಿ ತುಳು ಚಲನಚಿತ್ರ ಜಬರ್ದಸ್ತ್ ಶಂಕರದಲ್ಲಿ ನೀತಾ ನಟಿಸಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಯಶೋದಾ' ಧಾರಾವಾಹಿಯ ಮೂಲಕವು ಹೆಸರು ಮಾಡಿದ್ದಾರೆ ನೀತಾ ಅಶೋಕ್. ಇದರಲ್ಲದೇ ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ದೂರದರ್ಶನದಲ್ಲಿ ಹಿಂದಿ ಧಾರಾವಾಹಿಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ.
67
ವೈವಾಹಿಕ ಜೀವನ
2023ರಂದು ನೀತಾ ಅಶೋಕ್ ಅವರು ಸತೀಶ್ ಎನ್ನುವವರನ್ನು ಮದುವೆಯಾಗಿದ್ದಾರೆ. ಕಾಲೇಜಿನಿಂದಲೇ ಇವರಿಬ್ಬರು ಸ್ನೇಹಿತರಾಗಿದ್ದು, ಆಮೇಲೆ ಪ್ರೀತಿ ಹುಟ್ಟಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಅಂದಹಾಗೆ ಸತೀಶ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ನೀತಾ ಅವರು ಮೂಲತಃ ಉಡುಪಿಯವರು.
77
ತಾಯಿ-ಮಗಳು
ರಿಯಲ್ ಲೈಫ್ನಲ್ಲಿ ನೀತಾ ಅಶೋಕ್ ಅವರು ಇನ್ನೂ ತಾಯಿಯಾಗಿಲ್ಲ. ಆದರೆ ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ನಲ್ಲಿ ಹಿತಾ ಎನ್ನುವ ಮಗಳ ತಾಯಿ. ನಿಜಕ್ಕೂ ಇವಳು ನನ್ನ ಮಗಳೇ ಎನ್ನಿಸುತ್ತದೆ. ಇದ್ದರೆ ಇಂಥದ್ದೇ ಮಗಳು ಇರಬೇಕು ಎಂದು ಜೀ ಅವಾರ್ಡ್ ವೇದಿಕೆಯಲ್ಲಿ ನೀತಾ ಹೇಳಿದ್ದರು.