ಬಿಗ್‌ಬಾಸ್ ಸೀಸನ್ 8ರ ಸ್ಪರ್ಧಿ, ಸದ್ಯದ ಸೀಸನ್ 12ರ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾನ್ವಿ ಸ್ನೇಹದ ಬಗ್ಗೆ ವಿಶ್ಲೇಷಿಸಿದ್ದಾರೆ. ಬಿಗ್‌ಬಾಸ್ ಇವರಿಬ್ಬರ ಜೋಡಯಲ್ಲಿ ಯಾರು ಮೊದಲು ಹೊರಬರಬಹುದು ಎಂದು ಸಂಬರಗಿ ಭವಿಷ್ಯ ನುಡಿದಿದ್ದಾರೆ.
ಬಿಗ್‌ಬಾಸ್ ಸೀಸನ್ 8ರ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರಗಿ ನೀಡಿದ ಸಂದರ್ಶನದಲ್ಲಿ ಸದ್ಯ ನಡೆಯುತ್ತಿರುವ ಸೀಸನ್ 12ರ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದಾರೆ. ಯುಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಸ್ನೇಹದ ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಇದೇ ವೇಳೆ ಇಬ್ಬರಲ್ಲಿ ಮೊದಲು ಹೊರಗೆ ಬರೋದು ಯಾರು ಎಂಬ ವಿಷಯವನ್ನು ಪ್ರಶಾಂತ್ ಸಂಬರಗಿ ಹಂಚಿಕೊಂಡಿದ್ದಾರೆ.
25
ಸ್ಟ್ರಾಂಗ್ ಜೋಡಿ
ಸಾಮಾನ್ಯವಾಗಿ ಮನೆಯಲ್ಲಿರುವ ಸ್ಟ್ರಾಂಗ್ ಜೋಡಿಯನ್ನು ಬಿಗ್‌ಬಾಸ್ ಮುರಿದು ಹಾಕುತ್ತಾರೆ. ಈ ಸೀಸನ್‌ನಲ್ಲಿರುವ ಅಶ್ವಿನಿ ಗೌಡ ಮತ್ತು ಜಾನ್ವಿ ಜೋಡಿಯನ್ನು ಬಿಗ್‌ಬಾಸ್ ಬ್ರೇಕ್ ಮಾಡ್ತಾರೆ. ಜೋಡಿಗಳ ಪೈಕಿ ಇಬ್ಬರದ್ದು ನಿಜವಾದ ವ್ಯಕ್ತಿತ್ವವನ್ನು ನೋಡುವ ಉದ್ದೇಶಕ್ಕಾಗಿ ಸ್ನೇಹವನ್ನು ಬಿಗ್‌ಬಾಸ್ ಕಟ ಮಾಡುತ್ತಾರೆ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
35
ಜಾನ್ವಿ ಮತ್ತು ಅಶ್ವಿನಿ ಸ್ನೇಹ ಬ್ರೇಕ್
ಈ ಒಂದು ಕಾರಣಕ್ಕಾಗಿ ಜಾನ್ವಿ ಮತ್ತು ಅಶ್ವಿನಿ ಸ್ನೇಹ ಬ್ರೇಕ್ ಆಗಲಿದೆ. ಇಬ್ಬರ ಪೈಕಿ ಮೊದಲು ಜಾನ್ವಿ ಮೊದಲು ಮನೆಯಿಂದ ಹೊರಗೆ ಬರಬಹುದು ಅನ್ನೋದು ನನ್ನ ಲೆಕ್ಕಾಚಾರ ಎಂದು ಹೇಳಿದರು. ಮುಂದುವರಿದ ಮಾತನಾಡಿದ ಪ್ರಶಾಂತ್, ಶ್ರೀಮಂತ ಮನೆಯಿಂದ ಬಂದಿರುವ ಅಶ್ವಿನಿ ಗೌಡ ಅಲ್ಲಿ ಏಕವಚನ-ಬಹುವಚನ ಅತ ಹೇಳಿಕೊಂಡು ದಬ್ಬಾಳಿಕೆ ಮಾಡಿ ತಮಗೆ ಹೇಗೆ ಬೇಕು ಹಾಗೆ ಬಿಗ್‌ಬಾಸ್ ಮನೆಯಲ್ಲಿದ್ದರು. ಈ ಬಗ್ಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು.
ಈ ಜೋಡಿಯನ್ನು ವೈಯಕ್ತಿಕವಾಗಿ ಹೇಗೆ ನೋಡಬೇಕೆಂದು ತಿಳಿದುಕೊಳ್ಳಲು ಇಬ್ಬರ ಸ್ನೇಹ ಬ್ರೇಕ್ ಮಾಡಲಾಗುತ್ತದೆ. ಅಶ್ವಿನಿ ಮತ್ತು ಜಾನ್ವಿ ಯಾವಾಗಲು ಟಾಮ್ ಆಂಡ್ ಜರ್ರಿ ರೀತಿ ಜೊತೆಯಲ್ಲಿರುತ್ತಾರೆ. ಮನೆಯಲ್ಲಿ ಇಬ್ಬರು ಪಾರ್ಟನರ್ ರೀತಿ ನೋಡುತ್ತಿದ್ದೇವೆ. ಇಬ್ಬರು ವೈಯಕ್ತಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಪ್ರಶಾಂತ್ ಸಂಬರಗಿ ಹೇಳಿದರು.
ಮಾಧ್ಯಮ ಹಿನ್ನೆಲೆಯಿಂದ ಬಂದಿರುವ ಜಾನ್ವಿ ತುಂಬಾ ಸೇಫ್ ಆಗಿ ಆಡುತ್ತಿದ್ದಾರೆ. ಎಲ್ಲಾ ಪ್ರತಿಭೆಯನ್ನು ಹೊಂದಿದ್ರೂ ಅಶ್ವಿನಿ ಗೌಡ ಅವರ ಬಾಲಗೊಂಚಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆಯಲ್ಲಿ ಶೋಗಳನ್ನು ಮಾಡಿದ್ದಾರೆ. ಚೆನ್ನಾಗಿ ಮಾತನಾಡುತ್ತಾರೆ. ಆದರೂ ಬೇರೆಯವರ ಮೇಲೆ ಅವಲಂಬಿತರಾಗಿದ್ದಾರೆ. ಈ ಕಾರಣದಿಂದ ಜಾನ್ವಿ ಮೊದಲು ಮನೆಯಿಂದ ಹೊರಗೆ ಬರುತ್ತಾರೆ ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.