ಮಾಜಿ ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ, ಬಿಗ್‌ಬಾಸ್ ಮನೆಯೊಳಗಿನ ಸ್ನೇಹ ಮತ್ತು ಪ್ರೀತಿಯ ಸಂಬಂಧಗಳು ಶಾಶ್ವತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸೀಸನ್ 12ರ ಗಿಲ್ಲಿ ನಟ ಮತ್ತು ಕಾವ್ಯಾ ಜೋಡಿಯ ಬಗ್ಗೆ ಮಾತನಾಡುತ್ತಾ, ಮನೆಯಿಂದ ಹೊರಬಂದ ಮೇಲೆ ಈ ಸಂಬಂಧಗಳು ಮುಂದುವರಿಯುವುದಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಬಿಗ್‌ಬಾಸ್ ಸೀಸನ್ 8 ಮತ್ತು 9ರ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರಗಿ ಸಂದರ್ಶನವೊಂದರಲ್ಲಿ ಆಚೆ ಬಂದ್ರೆ ಫ್ರೆಂಡ್‌ಶಿಪ್ ಉಳಿಯಲ್ಲ, ಈ ಲವ್ವೆಲ್ಲಾ ಕಬ್ಬನ್ ಪಾರ್ಕ್‌ಗೆ ಸೀಮಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೀಸನ್ 12ರ ಗಿಲ್ಲಿ ನಟ ಮತ್ತು ಕಾವ್ಯಾ ಸ್ನೇಹದ ಕುರಿತು ಮಾತನಾಡುವ ಸಂದರ್ಭದಲ್ಲಿ ಹೊರಗೆ ಬಂದ್ಮೇಲೆ ಯಾವುದೂ ಮುಂದುವರಿಯಲ್ಲ ಎಂದಿದ್ದಾರೆ.
25
ಮದುವೆ
ನಮ್ಮ ಸೀಸನ್‌ನಲ್ಲಿಯೀ ಅರವಿಂದ್ ಮತ್ತು ದಿವ್ಯಾ ಇದ್ರು. ಐದು ವರ್ಷ ಆಯ್ತು, ಮದುವೆ ಆಗಿದೆಯಾ ಇಲ್ಲ. ಹಾಗೆ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೀವನದಲ್ಲಿ ಏನಾಗ್ತಿದೆ ಅಂತ ಎಲ್ಲರಿಗೂ ಗೊತ್ತಿದೆ. ಹಾಗೆಯೇ ದೀಪಿಕಾ ದಾಸ್-ಶೈನ್ ಶೆಟ್ಟಿ ಇದ್ರು ಎಂದು ಪ್ರಶಾಂತ್ ಸಂಬರಗಿ ಹೇಳಿದರು.
35
ಕೆಮಿಸ್ಟ್ರಿ
ಬಿಗ್‌ಬಾಸ್ ಮನೆಯಲ್ಲಿ ಅನೇಕ ಕೆಮಿಸ್ಟ್ರಿಗಳು ಬೆಳವಣಿಗೆ ಆಗುತ್ತವೆ. ಆ ಎಲ್ಲಾ ಕೆಮಿಸ್ಟ್ರಿಗಳು ಕೇವಲ ನೂರು ದಿನಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಒಂದು ಕೆಮಿಸ್ಟ್ರಿ ಆಚೆ ಮತ್ತು ಒಂದು ಸ್ಟುಡಿಯೋದಲ್ಲಿ ಆಗೋದಕ್ಕೆ ತುಂಬಾ ವ್ಯತ್ಯಾಸವಿದೆ. ಬಿಗ್‌ಬಾಸ್ ಮನೆ ಅನ್ನೋದು ಸ್ಟುಡಿಯೋ ಎಂದು ಹೇಳಿದರು.
ಬಿಗ್‌ಬಾಸ್ ಮನೆಯಲ್ಲಿ ರಚನೆಯಾಗುವ ಫ್ರೆಂಡ್‌ಶಿಪ್ ಸಹ ಅಷ್ಟೆ, ನಾವು ಒಬ್ಬರಿಗೊಬ್ಬರು ಸಂಪರ್ಕದಲ್ಲಿರಬಹುದು. ಆ ಸ್ನೇಹ ಮುಂದುವರಿಯುವ ಸಾಧ್ಯತೆಗಳು ಕಡಿಮೆ ಇರುತ್ತವೆ. ಡೀಪ್ ಫ್ರೆಂಡ್‌ಶಿಪ್ ಆಗಬೇಕೆಂದ್ರೆ ಹೊರಗೆ ಅದರೊಂದಿಗೆ ಹೋಗಬೇಕು. ಇಲ್ಲಿ ಉಂಟಾಗುವ ಸ್ನೇಹ ತೇಲಿಕೊಂಡು ಹೋಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಒಳ್ಳೆಯ ಜೋಡಿ. ಒಬ್ಬರಿಗೊಬ್ಬರು ತಮ್ಮ ವ್ಯಕ್ತಿತ್ವ ಬಿಟ್ಟುಕೊಡದೇ ಚೆನ್ನಾಗಿ ಆಟವಾಡುತ್ತಿದ್ದಾರೆ. ಇಬ್ಬರು ಸಹ ಟಾಪ್ 5ನಲ್ಲಿರುವ ಸ್ಪರ್ಧಿಗಳು. ಕಾವ್ಯಾ ಸಹ ಚೆನ್ನಾಗಿ ಆಟವಾಡುತ್ತಿದ್ದಾರೆ. ಅದ್ಯಾವುದು ಲವ್ ಅಲ್ಲ ಅನ್ನೋ ಸ್ಪಷ್ಟನೆಯಲ್ಲಿದ್ದಾರೆ ಎಂದರು.