Siddarth Swamy : ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮೈನಾ ಧಾರಾವಾಹಿಯಲ್ಲಿ ನಾಯಕ ಧ್ರುವನ ಪಾತ್ರದಲ್ಲಿ ಮಿಂಚುತ್ತಿರುವ ನಟ ಸಿದ್ಧಾರ್ಥ್ ಆರ್ ಸ್ವಾಮಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಿದ್ಧಾರ್ಥ್ ಮದುವೆಯಾಗಿರುವ ಹುಡುಗಿ ಯಾರು? ಅವರು ಕೂಡ ಜನಪ್ರಿಯ ನಟಿ. ಪೂರ್ತಿ ಮಾಹಿತಿ ಇಲ್ಲಿದೆ.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮೈನಾ ಧಾರಾವಾಹಿಯಲ್ಲಿ ನಾಯಕ ಧ್ರುವನ ಪಾತ್ರದ ನಟಿ ಕಿರುತೆರೆ ವೀಕ್ಷಕರ ಮನೆಮಗನಾಗಿರುವ ನಟ ಸಿದ್ದಾರ್ಥ್ ಆರ್ ಸ್ವಾಮಿ ಸುದ್ದಿ ಇಲ್ಲದೇ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅಂದರೆ ನಟ ಸುದ್ದಿ ಇಲ್ಲದೇ ಕೆಲವು ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
25
ಮೈನಾ ಧಾರಾವಾಹಿ ನಾಯಕಿಯ ಜೊತೆಗೆ ಮದುವೇನಾ?
ಮೈನಾ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ವಿಜಯಲಕ್ಷ್ಮೀ ಜೊತೆ ಸಿದ್ದಾರ್ಥ್ ತೆರೆ ಮೇಲೆ ಹಾಗೂ ತೆರೆಯ ಹಿಂದೆ ಉತ್ತಮ ಸ್ನೇಹ ಹೊಂದಿದ್ದಾರೆ. ಇಬ್ಬರು ಜೊತೆಯಾಗಿ ಫೋಟೊ ಶೂಟ್, ರೀಲ್ಸ್, ಡ್ಯಾನ್ಸ್ ಮಾಡುತ್ತಾ, ಸೋಶಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿದ್ದರು. ಇವರಿಬ್ಬರು ಬೆಸ್ಟ್ ಜೋಡಿ ಎಂದೇ ಜನ ಹೇಳುತ್ತಿದ್ದರು.
35
ಮದುವೆಯಾಗಿದ್ದು ಯಾರನ್ನು?
ವೀಕ್ಷಕರು ಹಾಗೂ ಅಭಿಮಾನಿಗಳು ಸಿದ್ದಾರ್ಥ್ ಮದುವೆ ವಿಜಯಲಕ್ಷ್ಮೀ ಅವರ ಜೊತೆ ನಡೆದಿದೆ ಎಂದು ಹೇಳುತ್ತಿದ್ದರು. ಸಿದ್ದಾರ್ಥ್ ಕೂಡ ತಮ್ಮ ಹುಡುಗಿಯ ಫೋಟೊ ರಿವೀಲ್ ಮಾಡದೆ ಇಬ್ಬರು ಕೈ ಕೈ ಹಿಡಿದಿರುವ ಫೋಟೊ ಹಂಚಿಕೊಂಡು 23.04.2026 - Forever begins now ಎಂದು ಬರೆದುಕೊಂಡಿದ್ದಾರೆ.
ಸಿದ್ದಾರ್ಥ್ ಸ್ವಾಮಿ ಕಳೆದ ಆರು ವರ್ಷಗಳಿಂದ ಕಿರುತೆರೆ ನಟರಾಗಿ ಗುರುತಿಸಿಕೊಂಡಿದ್ದಾರೆ. ಇವರು ಕನ್ನಡ ಸೇರಿ ಹಲವಾರು ತೆಲುಗು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಇದೀಗ ತೆಲುಗು ಕಿರುತೆರೆ ನಟಿ ಹಾಗೂ ವಿಜೆ ಸಂಯುಕ್ತಾ ಜೊತೆ ಸಿದ್ದಾರ್ಥ್ ವೈವಾಹಿಕ ಜಿವನಕ್ಕೆ ಕಾಲಿಟ್ಟಿದ್ದಾರೆ. ಇದೇ ಏಪ್ರಿಲ್ 23 ರಂದು ಸಪ್ತಪದಿ ತುಳಿದಿದ್ದರು.
55
ಸಂಯುಕ್ತಾ ನಟಿಸಿದ ಧಾರಾವಾಹಿಗಳು
ಸಂಯುಕ್ತಾ ಹಲವಾರು ವರ್ಷಗಳಿಂದ ವಿಜೆಯಾಗಿ ಹಾಗೂ ನಟಿಯಾಗಿ ತೆಲುಗು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ‘ಮುದ್ದು ಸೊಸೆ’ ನಟಿ ಪ್ರತಿಮಾ ಠಾಕೂರ್ ಅವರು ನಾಯಕಿ ಆಗಿ ಅಭಿನಯಿಸಿದ ತೆಲುಗು ಧಾರಾವಾಹಿ ‘ಸಿವಾಂಗಿ’ಯಲ್ಲಿ ಮಿತ್ರಾ ಎಂಬ ಪಾತ್ರ ಮಾಡಿದ್ದರು. ಇದಲ್ಲದೇ ‘ಕಲ್ಯಾಣ ವೈಭೋಗಂ’, ಪೌರ್ಣಮಿ ಮೊದಲಾದ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.