ಬಿಳಿ ಸೀರೆಯಲ್ಲಿ ಮೋಕ್ಷಿತಾ ಪೈ…. ಅಂದದಿಂದಲೇ ಮನಸನ್ನ ಕದ್ದು, ಕಣ್ಣಲ್ಲೇ ಸೆಳೆದ ಪಾರು
ನಟಿ ಮೋಕ್ಷಿತಾ ಪೈ ಬಿಳಿ ಸೀರೆಯುಟ್ಟು ಒಂದು ಸುಂದರವಾದ ಫೋಟೊ ಶೂಟ್ ಮಾಡಿಸಿದ್ದು, ಸಖತ್ ಸುಂದ್ರಿಯಾಗಿ ಕಾಣಿಸುತ್ತಿದ್ದು, ಸಿಂಪಲ್ ಆಗಿ, ಎಲಿಗೆಂಟ್ ಆಗಿ ಕಾಣಿಸ್ತಿದ್ದಾರೆ.
ನಟಿ ಮೋಕ್ಷಿತಾ ಪೈ ಬಿಳಿ ಸೀರೆಯುಟ್ಟು ಒಂದು ಸುಂದರವಾದ ಫೋಟೊ ಶೂಟ್ ಮಾಡಿಸಿದ್ದು, ಸಖತ್ ಸುಂದ್ರಿಯಾಗಿ ಕಾಣಿಸುತ್ತಿದ್ದು, ಸಿಂಪಲ್ ಆಗಿ, ಎಲಿಗೆಂಟ್ ಆಗಿ ಕಾಣಿಸ್ತಿದ್ದಾರೆ.
ಪಾರು ಸೀರಿಯಲ್ ಮೂಲಕ ಮನೆಮಾತಾಗಿ, ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Season 11) ರ ಮೂಲಕ ಜನಪ್ರಿಯತೆ ಗಳಿಸಿದ ನಟಿ ಮೋಕ್ಷಿತಾ ಪೈ, ತಮ್ಮ ಸೌಂದರ್ಯ, ಬೋಲ್ಡ್ ಆಗಿ ಆಟವಾಡುವ ರೀತಿ ಹಾಗೂ ನೇರವಾದ ಮಾತುಗಳಿಂದಲೇ ಜನರಿಗೆ ಇಷ್ಟವಾಗಿದ್ದರು.
ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಮೋಕ್ಷಿತಾ ಪೈ (Mokshitha Pai) ತಮ್ಮ ಗೆಳತಿ ಮಾನ್ಸಿ ಜೋಶಿ ಮದುವೆ, ಐಶ್ವರ್ಯಾ, ಶಿಶಿರ್ ಜೊತೆ ಟೆಂಪಲ್ ರನ್, ವಿವಿಧ ತಾಣಗಳಿಗೆ ಸ್ನೇಹಿತರ ಜೊತೆ ಟ್ರಾವೆಲ್ ಮಾಡುತ್ತಾ ಬ್ಯುಸಿಯಾಗಿ ಬಿಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟಿವ್ ಆಗಿರುವ ಮೋಕ್ಷಿತಾ ಪೈ, ಎಲ್ಲಾ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಹೊಸದಾಗಿ ಸೀರೆಯುಟ್ಟಿರುವ ಫೋಟೊಗಳನ್ನು ಮೋಕ್ಷಿತಾ ಶೇರ್ ಮಾಡಿದ್ದಾರೆ.
ಮೋಕ್ಷಿತಾ ಸಿಂಪಲ್ ಆಗಿರುವ ಫ್ಲೋರಲ್ ಪ್ರಿಂಟ್ ಹೊಂದಿರುವ ಬಿಳಿ ಬಣ್ಣದ ಸೀರೆಯುಟ್ಟಿದ್ದು, ಅದಕ್ಕೆ ಮ್ಯಾಚ್ ಆಗುವಂತೆ, ಫ್ಲೋರಲ್ ಸ್ಲೀವ್ ಲೆಸ್ ಡಿಸೈನರ್ ಬ್ಲೌಸ್ ಧರಿಸಿದ್ದಾರೆ. ಈ ಫೋಟೊಗಳ ಜೊತೆ ನಟಿ Simple & Stunning ಎಂದು ಬರೆದುಕೊಂಡಿದ್ದಾರೆ.
ಈ ಸಿಂಪಲ್ ಲುಕ್ ನಲ್ಲಿ ಮೋಕ್ಷಿತಾ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಮೋಕ್ಷಿತಾ ಫೋಟೊಗಳ ಜೊತೆ ಕದ್ದಳು ಮನಸ್ಸನ್ನ ಅವಳಂತ ಬ್ಯೂಟೀನಾ ಹಾಡು ಹಾಕಿದ್ದು, ನಿಜವಾಗಿಯೂ ನೋಡುಗರ ಮನಸ್ಸನ್ನು ಕದಿಯುತ್ತಿದ್ದಾರೆ ಮೋಕ್ಷಿತಾ. ಫೋಟೊಗಳನ್ನು ನೋಡಿ ಫ್ಯಾನ್ಸ್ ಪ್ರಿಟಿ, ಎಲಿಗೆಂಟ್, ಸುಂದರಿ, ನಮ್ಮ ಮುದ್ದು ಗೊಂಬೆ ಮೋಕ್ಷಿತಾ ಯಾವಾಗಲೂ ಬ್ಯೂಟಿಫುಲ್. ಏನು ಹೇಳಿ ಅಂದಾನ, ಸಾಲುತ್ತಿಲ್ಲಾ ವ್ಯಾಕರಣ, ಇರೋದೆ ಒಂದು ಹೃದಯ ಎಷ್ಟು ಸಲ ಅಂತ ಗೆಲ್ತೀರಾ ಎಂದು ಕಾಮೆಂಟ್ ಮಾಡಿ ಹೊಗಳಿದ್ದಾರೆ.
ಅಂದ ಹಾಗೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಮೋಕ್ಷಿತಾ ಪೈ ಸ್ಯಾಂಡಲ್ ವುಡ್ ಗೆ ಎಂಟ್ರಿ (ready to enter sandalwood) ಕೊಡೋದಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಕೂಡ ನಡೆದಿದೆ. ಸದ್ಯದಲ್ಲೇ ನಟಿ ಚಂದನವನದಲ್ಲಿ ಮಿಂಚಲಿದ್ದಾರೆ. ‘ಮಿಡಲ್ ಕ್ಲಾಸ್ ರಾಮಾಯಣ' ಅನ್ನೋದು ಸಿನಿಮಾ ಹೆಸರಾಗಿದ್ದು, ಮೋಕ್ಷಿತಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.