ಜಾಲಿ ಮೂಡಲ್ಲಿ ಮೋಕ್ಷಿತಾ ಪೈ, ಸ್ನೇಹಿತರ ಜೊತೆ ಹೋಗಿದ್ದೆಲ್ಲಿ?
ಬಿಗ್ ಬಾಸ್ ಸೀಸನ್ 11 ಸೆನ್ಸೇಶನ್ ಮೋಕ್ಷಿತಾ ಪೈ ಬೇಸಿಗೆಯನ್ನು ಎಂಜಾಯ್ ಮಡೋದಕ್ಕೆ ಸ್ನೇಹಿತರ ಜೊತೆ ಜಾಲಿ ಟ್ರಿಪ್ ಮಾಡುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 11 ಸೆನ್ಸೇಶನ್ ಮೋಕ್ಷಿತಾ ಪೈ ಬೇಸಿಗೆಯನ್ನು ಎಂಜಾಯ್ ಮಡೋದಕ್ಕೆ ಸ್ನೇಹಿತರ ಜೊತೆ ಜಾಲಿ ಟ್ರಿಪ್ ಮಾಡುತ್ತಿದ್ದಾರೆ.
ಪಾರು ಸೀರಿಯಲ್ ಮೂಲಕ ಜನಮನ ಗೆದ್ದು, ಬಿಗ್ ಬಾಸ್ ಸೀಸನ್ 11ರ ಮೂಲಕ ಭಾರಿ ಸದ್ದು ಮಾಡಿದ ನಟಿ ಮೋಕ್ಷಿತಾ ಪೈ (Mokshitha Pai). ಬಿಗ್ ಬಾಸ್ ಬಳಿಕ ಸಖತ್ ಆಕ್ಟಿವ್ ಆಗಿದ್ದಾರೆ ನಟಿ.
ಮೋಕ್ಷಿತಾ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಪಾರು ಸೀರಿಯಲ್ ನಟಿ ಹಾಗೂ ಮೋಕ್ಷಿತಾ ಗೆಳತಿಯಾಗಿರುವ ಮಾನ್ಸಿ ಜೋಶಿ (Mansi Joshi) ಮದುವೆ, ಹಳದಿ, ಮೆಹೆಂದಿ ಕಾರ್ಯಕ್ರಮ, ಸಂದರ್ಶನ ಎಂದು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು.
ಟ್ರಾವೆಲ್ ಪ್ರಿಯೆಯಾಗಿರುವ ಮೋಕ್ಷಿತಾ ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಐಶ್ವರ್ಯ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರೀ ಜೊತೆ ಟ್ರಾವೆಲ್ ಮಾಡೋದ್ರಲ್ಲಿ ಬ್ಯುಸಿ ಆಗಿದ್ರು.
ಬಿಗ್ ಬಾಸ್ ನ (Bigg Boss Season 11) ಸ್ನೇಹಿತರ ಜೊತೆ ಮೋಕ್ಷಿತಾ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಪಡೆದು ಬಂದಿದ್ದರು. ಜೊತೆಗೆ ವಿಶೇಷ ಪೂಜೆ ಕೂಡ ಮಾಡಿಸಿದ್ದರು.
ಇತ್ತೀಚೆಗೆ ‘ಬಿಗ್ ಬಾಸ್’ ರಂಜಿತ್ ಎಂಗೇಜ್‌ಮೆಂಟ್‌ನಲ್ಲಿ ಶಿಶಿರ್, ಐಶ್ವರ್ಯಾ, ಅನುಷಾ ರೈ ಜೊತೆ ಮೋಕ್ಷಿತಾ ಕೂಡ ಭಾಗಿಯಾಗಿ ನವಜೋಡಿಗೆ ಶುಭಕೋರಿ ಬಂದಿದ್ದರು.
ಇದೀಗ ಮೋಕ್ಷಿತಾ ತಮ್ಮ ಸ್ನೇಹಿತರ ಜೊತೆ ಸಮ್ಮರ್ ವೆಕೇಶನ್ ಎಂಜಾಯ್ ಮಾಡೋದಕ್ಕೆ ದೇವರ ನಾಡು (Gods own country) ಕೇರಳಕ್ಕೆ ಹಾರಿ ಎಂಜಾಯ್ ಮಾಡ್ತಿದ್ದಾರೆ. ಫೋಟೊ, ವಿಡಿಯೋ ಶೇರ್ ಮಾಡ್ತಿದ್ದಾರೆ.
ಮೋಕ್ಷಿತಾ ವಯನಾಡಿಗೆ ತೆರಳಿದ್ದು, ಅಲ್ಲಿನ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದು, ಅಲ್ಲಿನ ಸುಂದರ ಪ್ರದೇಶಗಳಿಗೆ ಭೇಟಿ ನೀಡಿ ಎಂಜಾಯ್ ಮಾಡ್ತಿದ್ದಾರೆ. ಸದ್ಯ ನಟಿ ಶೇರ್ ಮಾಡಿರುವ ಫೋಟೊಗಳು ವೈರಲ್ ಆಗುತ್ತಿವೆ.
ವಯನಾಡಿನಲ್ಲಿ ಮೋಕ್ಷಿತಾ ತಮ್ಮ ಗ್ಯಾಂಗ್ ಜೊತೆ ಸೇರಿ ಟ್ರೆಕ್ಕಿಂಗ್ ಕೂಡ ಮಾಡಿದ್ದು, ಆ ವಿಡಿಯೋವನ್ನು ಸಹ ಪೋಸ್ಟ್ ಮಾಡಿದ್ದರು. ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡ್ತಿದ್ದಾರೆ.
ಇನ್ನು ಕರಿಯರ್ ವಿಷಯಕ್ಕೆ ಬಂದ್ರೆ ಮೋಕ್ಷಿತಾ ‘ಮಿಡಲ್ ಕ್ಲಾಸ್ ರಾಮಾಯಣ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿದಿದ್ದು, ಸಿನಿಮಾ ಶಿಘ್ರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಈ ಸಿನಿಮಾ ಮೂಲಕ ಮೊದಲ ಬಾರಿಗೆ ಮೋಕ್ಷಿತಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಆ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ.