ಲಂಗ ದಾವಣಿಯಲ್ಲಿ ಅಪ್ಸರೆಯಂತೆ ಕಂಡ ಮೇಘಾ ಶೆಟ್ಟಿ, ಯಾರಾದ್ರೂ ದೃಷ್ಟಿ ತೇಗಿರೆಂದ ಅಭಿಮಾನಿ

First Published | Aug 8, 2024, 3:58 PM IST

ನಟಿ ಮೇಘಾ ಶೆಟ್ಟಿ ಹುಟ್ಟುಹಬ್ಬದ ಬೆನ್ನಲ್ಲೆ ಹೊಸ ಫೋಟೋ ಶೂಟ್ ಶೇರ್ ಮಾಡಿದ್ದು ನೀಲಿ ಲಂಗ ದಾವಣಿಯಲ್ಲಿ ನಟಿ ಅಪ್ಸರೆಯಂತೆ ಕಾಣಿಸ್ತಿದ್ದಾರೆ. 
 

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಸುಂದರಿ ಮೇಘಾ ಶೆಟ್ಟಿ (Megha Shetty), ಮೊದಲ ಸೀರಿಯಲ್ ಮೂಲಕವೇ ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು. 
 

ಮೇಘಾ ಶೆಟ್ಟಿ ಎನ್ನುವ ರಿಯಲ್ ಹೆಸರಿಗಿಂತ ಅನು ಸಿರಿಮನೆ ಎನ್ನುವ ಪಾತ್ರದ ಹೆಸರಿನ ಮೂಲಕವೇ ಜನಪ್ರಿಯತೆ ಪಡೆದಿರುವ ಮೇಘಾ ಜೊತೆ ಜೊತೆಯಲಿ (jothe jotheyali) ಧಾರಾವಾಹಿ ಮುಗಿದ ಬಳಿಕ, ಸಿನಿಮಾಗಳಲ್ಲಿ, ನಿರ್ಮಾಣಗಳಲ್ಲಿ ಬ್ಯುಸಿಯಾಗಿದ್ದಾರೆ. 
 

Tap to resize

ಮೇಘಾ ಶೆಟ್ಟಿ ಈಗಾಗಲೇ ಕನ್ನಡದಲ್ಲಿ ಒಂದೆರಡು ಧಾರಾವಾಹಿಗಳನ್ನು ನಿರ್ಮಿಸಿ, ಯಶಸ್ಸು ಕಂಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕೆಂಡ ಸಂಪಿಗೆ ಧಾರಾವಾಹಿ ನಿರ್ಮಾಣದ ಹೊಣೆ ಹೊತ್ತಿರೋದು ಮೇಘಾ ಶೆಟ್ಟಿ. 
 

ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿಯೂ ಗುರುತಿಸಿಕೊಂಡಿರುವ ಈ ಬ್ಯೂಟಿ ಟ್ರಿಪಲ್ ರೈಡಿಂಗ್, ದಿಲ್ ಪಸಂದ್ ಮತ್ತು ಕೈವಾ ಸಿನಿಮಾಗಳಲ್ಲಿ ನಟಿಸುವ ಮೂಲಕ ಹಿರಿತೆರೆಗೂ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಇನ್ನೂ ಮೂರು ಸಿನಿಮಾಗಳು ಮೇಘಾ ಕೈಯಲ್ಲಿವೆ. 
 

ಮೇಘಾ ಶೆಟ್ಟಿ ಹುಟ್ಟುಹಬ್ಬದ ದಿನ ಮೂರು ಸಿನಿಮಾಗಳ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಗ್ರಾಮಾಯಣ, ಚೀತಾ, ಆಫ್ಟರ್ ಆಪರೇಶನ್ ಲಂಡನ್ ಕೆಫೆ ಸಿನಿಮಾಗಳಲ್ಲಿ ಮೇಘಾ ನಾಯಕಿಯಾಗಿ ನಟಿಸುತ್ತಿದ್ದಾರೆ. 
 

ಮೇಘಾ ಶೆಟ್ಟಿ ಅಪ್ಪಟ ಗ್ರಾಮೀಣ ಹುಡುಗಿಯಾಗಿ ನಟಿಸುತ್ತಿರುವ 'ಆಫ್ಟರ್ ಆಪರೇಷನ್ ಲಂಡನ್ ಕೆಫೆ'  (After operation London Cafe) ಸಿನಿಮಾ ಶೂಟಿಂಗ್ ಮುಗಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಜೋಡಿಯಾಗಿ ನಟಿಸುತ್ತಿದ್ದು, ಈ ಸಿನಿಮಾ ಕನ್ನಡ, ಮರಾಠಿಯಲ್ಲಿ ಬಿಡುಗಡೆಯಾಗಲಿದೆ. 
 

ಇದಲ್ಲದೇ ವಿನಯ್‌ ರಾಜ್‌ಕುಮಾರ್ ಜೊತೆ 'ಗ್ರಾಮಾಯಣ' ಸಿನಿಮಾದಲ್ಲಿಯೂ ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devraj) ಅಭಿನಯದ 'ಚೀತಾ'  ಸಿನಿಮಾದಲ್ಲೂ ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದು, ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಮೇಘಾ ಶೆಟ್ಟಿಯ ಕತ್ತಿಗೆ ಹಾರ, ಮುಖಕ್ಕೆ ಕುಂಕುಮ ಹಚ್ಚಿ, ಕೈಯಲ್ಲಿ ಕುಡುಗೋಲು ಹಿಡಿದುಕೊಂಡು ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂರು ಸಿನಿಮಾಗಳ ಪೋಸ್ಟರ್ ನಟಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿತ್ತು. 
 

ಹುಟ್ಟುಹಬ್ಬದ ಬೆನ್ನಲ್ಲೆ ನಟಿ ಲಂಗ ದಾವಣಿ ತೊಟ್ಟು ಫೋಟೋ ಶೂಟ್ (photo shoot) ಮಾಡಿಸಿದ್ದು, ನೀಲಿ ಬಣ್ಣದ ಲಂಗ ದಾವಣಿಯಲ್ಲಿ ಮೇಘಾ ಅಪ್ಸರೆಯಂತೆ ಕಾಣಿಸುತ್ತಿದ್ದಾರೆ. ಇವರ ಅಂದ ನೋಡಿ ಅಭಿಮಾನಿಗಳು ಯಾರಾದ್ರೂ ದೃಷ್ಟಿ ಬೊಟ್ಟು ಇಡಿ ಎಂದಿದ್ದಾರೆ. ಅಲ್ಲದೇ ಫ್ಯೂಚರ್ ಬಿಗ್ ಸ್ಟಾರ್ ಎಂದು ಸಹ ಹೊಗಳಿದ್ದಾರೆ ಅಭಿಮಾನಿಗಳು. 
 

Latest Videos

click me!