ಫ್ಯಾಮಿಲಿ ಜೊತೆ ಥೈಲ್ಯಾಂಡ್ ಪ್ರವಾಸ: ನೆನಪುಗಳನ್ನ ಮೆಲುಕು ಹಾಕಿದ ಶ್ವೇತಾ ಚಂಗಪ್ಪ

Published : Aug 08, 2024, 01:52 PM IST

ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ತಮ್ಮ ಥೈಲ್ಯಾಂಡ್ ಪ್ರವಾಸದ ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಂಡಿದ್ದಾರೆ.   

PREV
17
ಫ್ಯಾಮಿಲಿ ಜೊತೆ ಥೈಲ್ಯಾಂಡ್ ಪ್ರವಾಸ: ನೆನಪುಗಳನ್ನ ಮೆಲುಕು ಹಾಕಿದ ಶ್ವೇತಾ ಚಂಗಪ್ಪ

ಕನ್ನಡ ಕಿರುತೆರೆಯಲ್ಲಿ ನಟಿ ನಿರೂಪಕಿಯಾಗಿ ಗುರುತಿಸಿಕೊಂಡ ಶ್ವೇತಾ ಚಂಗಪ್ಪ (Shwetha Changappa), ನಟನೆಗೂ ಸೈ ಮತ್ತು ನಿರೂಪಣೆಗೂ ಸೈ ಅನ್ನೋದನ್ನ ತೋರಿಸಿ ಕೊಟ್ಟಿದ್ದಾರೆ. ಸದ್ಯ ನಟಿ ನಟನೆ ಬಿಟ್ಟು ಸಂಪೂರ್ಣವಾಗಿ ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

27

ಒಂದಾದ ಮೇಲೆ ಒಂದರಂತೆ ಹಲವು ರಿಯಾಲಿಟಿ ಶೋಗಳಿಗೆ (reality show) ನಿರೂಪಕಿಯಾಗಿ ಕಾರ್ಯಕ್ರಮಗಳನ್ನ ಅದ್ಭುತವಾಗಿ ನಡೆಸಿಕೊಟ್ಟ ಶ್ವೇತಾ, ಇದೀಗ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಗೆ ತೀರ್ಪುಗಾರ್ತಿಯಾಗಿದ್ದಾರೆ. 
 

37

ಹೆಚ್ಚಾಗಿ ಸೋಶಿಯಲ್ ಮಿಡೀಯಾದಲ್ಲಿ ಆಕ್ಟೀವ್ ಆಗಿರುವ ನಟಿ ಶ್ವೇತಾ, ತಮ್ಮ ವಿವಿಧ ಫೋಟೋ ಶೂಟ್, ರೀಲ್ಸ್, ಡ್ಯಾನ್ಸ್ ಜೊತೆಗೆ ಫ್ಯಾಮಿಲಿ ಫೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 
 

47

ಶೂಟಿಂಗ್‌ನಿಂದ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ದೇಶ, ವಿದೇಶ ಟ್ರಾವೆಲ್ ಮಾಡುವ ನಟಿ ಶ್ವೇತಾ ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಥೈಲ್ಯಾಂಡ್ ಟ್ರಿಪ್  (Thailand Trip) ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

57

ಶ್ವೇತಾ ಚಂಗಪ್ಪ, ಇದೇ ಮೇ  ಸುಡು ಬೇಸಿಗೆಯಲ್ಲಿ ತಮ್ಮ ಫ್ಯಾಮಿಲಿ ಜೊತೆ ಥೈಲ್ಯಾಂಡ್ ಪ್ರವಾಸ ಮಾಡಿದ್ದರು. ಆವಾಗ ಒಂದಿಷ್ಟು ಫೋಟೋಗಳನ್ನ ಶೇರ್ ಮಾಡಿದ್ದರು. ಇದೀಗ ಮತ್ತೆ ಥೈಲ್ಯಾಂಡ್‌ನ ಸುಂದರ ತಾಣಗಳಲ್ಲಿ ತೆಗೆಸಿಕೊಂಡಂತಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

67

ಗಂಡ ಕಿರಣ್ ಅಪಚ್ಚು, ಮಗನ್ ಜಿಯಾನ್ ಅಯ್ಯಪ್ಪ ಮತ್ತು ಕುಟುಂಬದ ಇತರ ಸ್ನೇಹಿತರ ಜೊತೆಗೆ ಥೈಲ್ಯಾಂಡ್‌ಗೆ ತೆರಳಿದ್ದ ನಟಿ ಅಲ್ಲಿನ ಕೋಹ್ ಸಮುಯಿಯ (koh Samui ) ಸುಂದರ ಸ್ಥಳಗಳ ಫೋಟೋಗಳನ್ನು ಇದೀಗ ತಮ್ಮ ಇನ್‌ಸ್ಟಾಗ್ರಾಂ ಪೇಜಿನಲ್ಲಿ ಶೇರ್ ಮಾಡಿದ್ದಾರೆ. 
 

77

ಇದು ನಮ್ಮ ಥೈಲ್ಯಾಂಡ್ ಟ್ರಿಪ್ ಫೋಟೋ, ನಾವು ಅಲ್ಲಿಗೆ ಭೇಟಿ ನೀಡಿದ್ದಾಗ ಸುಡು ಬೇಸಿಗೆ. ಅಲ್ಲಿನ ಬಿಸಿಲನ್ನ ತಡೆಯೋದಕ್ಕೆ ಸಾಧ್ಯ ಆಗ್ಲಿಲ್ಲ. ಆದರೂ ನಮ್ಮ ಗ್ಯಾಂಗ್ ಜೊತೆ ಎಂಜಾಯ್ ಮಾಡಿದ್ದೆವು ಎಂದು ಬರೆದುಕೊಂಡಿದ್ದಾರೆ. ಇವರ ಮುದ್ದಾದ ಫ್ಯಾಮಿಲಿ ಫೋಟೋ ನೋಡಿ, ಅಭಿಮಾನಿಗಳು ನೀವು ಯಾವಾಗ್ಲೂ ಹೀಗೆ ಖುಷಿಯಾಗಿರಿ ಎಂದಿದ್ದಾರೆ. 
 

Read more Photos on
click me!

Recommended Stories