ಕೊನೆಗೂ ಪುಟ್ಟ ತಂಗಿಯ ಮುಖ ತೋರಿಸಿದ ಭವ್ಯಾ ಗೌಡ; ವಯಸ್ಸಿನ ಅಂತರ ನೋಡಿ ಕಾಲೆಳೆದ ನೆಟ್ಟಿಗರು!

First Published | Aug 8, 2024, 1:55 PM IST

ಭವ್ಯಾ ಗೌಡ ಮನೆಯಲ್ಲಿ ನಾಲ್ಕು ಹೆಣ್ಣುಮಕ್ಕಳು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಅಗಿರುವ ಈ ಸುಂದರಿಯರು......... 
 

ಕನ್ನಡ ಕಿರುತೆರೆ ಜನಪ್ರಿಯ 'ಗೀತಾ' ಧಾರಾವಾಹಿಯಲ್ಲಿ ಮಿಂಚಿರುವ ಭವ್ಯಾ ಗೌಡ ಇದೀಗ ತಮ್ಮ ಪುಟ್ಟ ಸಹೋದರಿಯ ಮುಖವನ್ನು ಹುಟ್ಟುಹಬ್ಬದಂದು ರಿವೀಲ್ ಮಾಡಿದ್ದಾರೆ.

ಹೌದು! ಭವ್ಯಾ ಗೌಡ ಜೊತೆ ಹುಟ್ಟಿದವರು ಮೂವರು. ಮೊದಲನೇ ಅಕ್ಕನಿಗೆ ಮದುವೆ ಆಗಿತ್ತು. ಪುಟ್ಟ ಮಗು ಕೂಡ ಇತ್ತು. ಆದರೆ ಅನಾರೋಗ್ಯದಿಂದ ಅಗಲಿದರು.

Tap to resize

ಎರಡನೇ ಸಹೋದರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ಫೋಟೋಶೂಟ್ ಮಾಡಿಸುತ್ತಾರೆ. 

ಮೂರನೆಯವರು ಭವ್ಯಾ ಗೌಡ. ನಾಲ್ಕನೇ ಸಹೋದರಿ ಕಾಲೇಜ್‌ಗೆ ಹೋಗುತ್ತಿದ್ದರು. ಈಕೆ ಕ್ಯಾಮೆರಾದಿಂದ ಸ್ವಲ್ಪ ದೂರ ಉಳಿದುಬಿಟ್ಟಿದ್ದಾರೆ.

ಈಗ ಭವ್ಯಾ ಪರಿಚಯ ಮಾಡಿಕೊಟ್ಟಿರುವುದು ಮೊದಲನೇ ಅಕ್ಕನ ಮಗಳು. ಅಕ್ಕ ಅಗಲಿದ ಮೇಲೆ ಅವರ ಮಗಳನ್ನು ಇವರೇ ನೋಡಿಕೊಳ್ಳುತ್ತಿದ್ದಾರೆ.

ಇನ್ನೂ ಸ್ಕೂಲಿಗೆ ಹೋಗುತ್ತಿರುವ ಪುಟ್ಟ ಹುಡುಗಿ ಆಗಿರುವ ಕಾರಣ ಕ್ಯಾಮೆರಾದಿಂದ ದೂರವಿಟ್ಟಿದ್ದರು. ಆದರೆ ಹುಟ್ಟುಹಬ್ಬದ ದಿನ ವಿಶ್ ಮಾಡಿ ಫೋಟೋ ರಿವೀಲ್ ಮಾಡಿದ್ದಾರೆ. 

ನಿಮ್ಮ ಸಹೋದರಿಯರ ನಡುವೆ ವಯಸ್ಸಿನ ಅಂತರ ಎಷ್ಟಿದೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಕೆಲವರು ಅಕ್ಕನ ಮಗಳನ್ನು ನೋಡಿ ಆಕೆ ಭವ್ಯಾ ಸಹೋದರಿನೇ ಅಂದುಕೊಂಡಿದ್ದಾರೆ. 

Latest Videos

click me!