ಪಾಕೆಟ್ ಮನಿ ತಗೊಳೋ ಟೈಮಲ್ಲಿ ಗಂಡ ಬ್ಯುಸಿನೆಸ್‌ ಮ್ಯಾನ್: ಇಸ್ಮಾರ್ಟ್ ಜೋಡಿಗೆ ದಿಶಾ ಮದನ್ ಎಂಟ್ರಿ

First Published | Jul 15, 2022, 4:16 PM IST

ಹಲವು ವರ್ಷಗಳ ನಂತರ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ದಿಶಾ ಮದನ್. ಎಷ್ಟು ಗುಲಾಬಿ ಹೂ ಕೊಟ್ಟಿದ್ದಾರೆ ಗೊತ್ತಾ?

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಇಸ್ಮಾರ್ಟ್‌ ಜೋಡಿ ರಿಯಾಲಿಟಿ ಶೋನಲ್ಲಿ ಸೋಷಿಯಲ್ ಮೀಡಿಯಾ influencer, ನಟಿ ಕಮ್ ಡ್ಯಾನ್ಸರ್ ದಿಶಾ ಮದನ್ ಮತ್ತು ಪತಿ ಶಶಾಂತ್ ಸ್ಪರ್ಧಿಸುತ್ತಿದ್ದಾರೆ. 

ಇಬ್ಬರು ಮುದ್ದಾದ ಮಕ್ಕಳಿರುವ ಕಾರಣ ದಿಶಾ ಮೀಡಿಯಾದಿಂದ ದೂರ ಉಳಿದುಕೊಂಡಿದ್ದರು. ಆದರೆ ಮದರ್‌ವುಡ್‌ ಜರ್ನಿ ಎಂಜಾಯ್ ಮಾಡುತ್ತಲೇ ಫ್ರೆಂಚ್ ಬಿರಿಯಾನಿ ಮತ್ತು ಹಂಬಲ್ ಪೊಲಿಟಿಷಿಯನ್‌ ನೋಗರಾಜ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Tap to resize

ಈಗ ದಿಶಾ ಮತ್ತು ಪತಿ ಶಶಾಂಕ್ ಇಸ್ಮಾರ್ಟ್‌ ಜೋಡಿಗೆ ಎಂಟ್ರಿ ಕೊಡುತ್ತಿದ್ದಾರೆ. ಇಬ್ಬರೂ ಪ್ರೀತಿಸುತ್ತಿರುವಾಗ ಶಶಾಂತ್ ದಿನವೂ ತಪ್ಪದೆ ಒಂದು ಗುಲಾಬಿ ಹೂವನ್ನು ನೀಡುತ್ತಿದ್ದರಂತೆ. ಪ್ರತಿಯೊಂದು ಹೂವನ್ನು ದಿಶಾ ಕಲೆಕ್ಟ್‌ ಮಾಡಿಕೊಂಡು ಈಗಲ್ಲೂ ಸೇಫ್‌ ಆಗಿಟ್ಟಿದ್ದಾರೆ.

ಪಾಕೆಟ್‌ ಮನಿ ತಗೊಳೋ ಸಮಯದಲ್ಲಿ ಶಶಾಂಕ್ ಬ್ಯುಸಿನೆಸ್ ಆರಂಭಿಸಿ ಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದರು. ಬಾಲ್ಯದಿಂದ ಡ್ಯಾನ್ಸ್‌ ಕಲಿತು ರಾಜ್ಯ ಮಟ್ಟದಲ್ಲಿ ದಿಶಾ ಸ್ಪರ್ಧಿಸಿದ್ದಾರೆ.

ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಕಾರಣ ದಿಶಾಗೆ ದೊಡ್ಡ ಮಟ್ಟದಲ್ಲಿ ವೋಟ್‌ ಬರುವ ನಿರೀಕ್ಷೆ ಇದೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಸಖತ್ ಆಕ್ಟಿವ್ ಆಗಿದ್ದಾರೆ. 

ದಿಶಾ ಮತ್ತು ಶಶಾಂಕ್ ಹಲವು ವರ್ಷಗಳ ಕಾಲ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದುಕೊಂಡು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮಕ್ಕಳಾದ ವಿಹಾನ್ ಮತ್ತು ಅವಿರಾ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ಕೂಡ ತೆರೆದಿದ್ದಾರೆ.

Latest Videos

click me!