ಬೃಂದಾವನ ಹೀರೋ ಚೇಂಜ್! ವೀಕ್ಷಕರಿಗೆ ತಲೆಬಾಗಿತಾ ಕಲರ್ಸ್‌ ಕನ್ನಡ?

First Published | Nov 18, 2023, 2:25 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನಪ್ರೀಯತೆ ಗಳಿಸುತ್ತಿರುವ ಧಾರವಾಹಿ ಬೃಂದಾವನ ಬಗ್ಗೆ ಮಹತ್ವದ ಸುದ್ದಿಯೊಂದು ಹರಿದಾಡುತ್ತಿದೆ. ಧಾರವಾಹಿ ತಂಡ ಹೀರೋ ಪಾತ್ರಧಾರಿಯನ್ನು ಬದಲಾವಣೆ ಮಾಡುತ್ತಿದೆ ಎಂದು ಸುದ್ದಿ ಹಬ್ಬಿದೆ.

ದಸರಾ ಹಬ್ಬದ ಸಮಯದಲ್ಲಿ ಆರಂಭವಾದ ಬೃಂದಾವನ ಧಾರವಾಹಿ 25 ಸಂಚಿಕೆಗಳನ್ನು ಪೂರೈಸುತ್ತಿದೆ ಇದರ ಬೆನ್ನಲ್ಲೇ ಸೀರಿಯಲ್‌ ನಿಂದ ನಾಯಕ ನಟನನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ರಾಮೋಜಿ ಟಾಕೀಸ್‌ ನಿಂದ ಮೂಡಿಬರುತ್ತಿರುವ ಈ ಸೀರಿಯಲ್‌ ಅಕ್ಟೋಬರ್ 23ರಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ. ಸದ್ಯ ಈ ಸೀರಿಯಲ್‌ನಲ್ಲಿ ಸುಧಾಮೂರ್ತಿ ಮೊಮ್ಮಗ ಆಕಾಶ್ ಮತ್ತು ಪುಷ್ಪಾ ಮದುವೆ ಸಂಭ್ರಮ ನಡೆಯುತ್ತಿದೆ.

Tap to resize

ಹಾಡುಗಾರ ವಿಶ್ವನಾಥ್ ಹಾವೇರಿ ಆಕಾಶ್ ಪಾತ್ರದಲ್ಲಿ ಹಿರೋ ಆಗಿ ಕಾಣಿಸಿಕೊಂಡಿದ್ದರು. ಧಾರವಾಹಿ ಆರಂಭವಾದ ದಿನದಿಂದ ಹಿರೋ ವಯಸ್ಸು ತುಂಬಾ ಚಿಕ್ಕದು. ಹೀರೋಯಿನ್‌ ವಯಸ್ಸು ದೊಡ್ಡದು. ಜೋಡಿಗಳು ಮ್ಯಾಚ್‌ ಆಗಲ್ಲ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಹಿರೋ ಆಕಾಶ್ ಮತ್ತು ಹಿರೋಯಿನ್‌ ಪುಷ್ಪಾ ಅವರ ಮದುವೆ ಬಾಲ್ಯವಿವಾಹ ಥರ ಅನ್ನಿಸುತ್ತೆ. ಹಿರೋ ತುಂಬಾ ಕ್ಯೂಟ್‌ ಇದ್ದಾನೆ. ಆದರೆ ಹಿರೋಯಿನ್‌ ಗೆ ಹೊಂದುತ್ತಿಲ್ಲ ಎಂದು ವೀಕ್ಷಕರು ಕಾಮೆಂಟ್‌ ಮಾಡಿದ್ದರು.

ಸದ್ಯ ಧಾರವಾಹಿ ತಂಡ ಆಕಾಶ್ ಮತ್ತು ಪುಪ್ಪಾ ಮದುವೆ ಸೀನ್‌ ಶೂಟಿಂಗ್‌ನಲ್ಲಿದೆ. ಮದುವೆ ಎಪಿಸೋಡ್‌ ಬಳಿಕ ಧಾರವಾಹಿ ವಿಶ್ವನಾಥ್ ಹಾವೇರಿ ಅವರ ಬದಲಿಗೆ ಬೇರೆ ಹಿರೋವನ್ನು ತೋರಿಸಲಿದೆ ಎಂದು ಸುದ್ದಿ ಇದೆ.

ಕೂಡು ಕುಟುಂಬದ ಕಥೆ ಹೊಂದಿರುವ ಈ ಧಾರವಾಹಿ ವಿಭಿನ್ನ ಕಥಾ ಹಂದರವನ್ನು ಹೊಂದಿದೆ. ಬಿಗ್‌ಬಾಸ್‌ ಖ್ಯಾತಿಯ, ಗಾಯಕ ವಿಶ್ವನಾಥ್ ಹಾವೇರಿ ಸದ್ಯ ಸೀರಿಯಲ್ ನಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಪುಷ್ಪಾ ಮದುವೆ ನಂತರ ಹಿರೋ ಬದಲಾಗಿದ್ದಾರೆ ಎಂಬ   ಶಾಕಿಂಗ್‌ ಸುದ್ದಿ ವೈರಲ್‌ ಆಗುತ್ತಿದ್ದಂತೆಯೇ  ವೀಕ್ಷಕರು ನಾನಾ ಥರದ ಕಮೆಂಟ್‌ ಮಾಡುತ್ತಿದ್ದಾರೆ.

ಕೆಲ ವೀಕ್ಷಕರು ಬದಲಾವಣೆ ಆಗಬೇಕು ಎಂದು ಕಮೆಂಟ್‌ ಮಾಡಿದರೆ, ಕೆಲವರು ಪಾಪ ಹುಡುಗನನ್ನು ಬದಲಾವಣೆ ಮಾಡಬೇಡಿ. ಆತನಿಗೆ ಸರಿಯಾದ ಹಿರೋಯಿನ್‌ ಹುಡುಕಿ ಎನ್ನುತ್ತಿದ್ದಾರೆ. ಇನ್ನು ಕೆಲವರಂತೂ ಮದುವೆ ಇವನ ಜೊತೆ, ಪ್ರಸ್ತ ಬೇರೆಯವನ ಜೊತೆ ಇದೆಂತಾ ನ್ಯಾಯ ಎಂದೆಲ್ಲ ಫನ್ನಿಯಾಗಿ ಕಮೆಂಟ್‌ ಮಾಡಿದ್ದಾರೆ.

ಇನ್ನು ಕೆಲವರು ಮದುವೆ ನಿರೀಕ್ಷೆಯಲ್ಲಿದ್ದೆವು ಕ್ಯೂಟ್‌ ಹುಡುಗ ಬದಲಾವಣೆಯಾಗುತ್ತಿದ್ದಾನೆ ಮುಂದೆ ಯಾವ ರೀತಿಯ ಹುಡುಗನನ್ನು ಹಿರೋ ಆಗಿ ಆಯ್ಕೆ ಮಾಡುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

Brundavana colors kannada

ಇಷ್ಟೆಲ್ಲ ಗಾಸಿಪ್‌ ಇದ್ದರೂ ಕಲರ್ಸ್ ಕನ್ನಡವಾಗಲಿ, ಬೃಂದಾವನ ಧಾರವಾಹಿ ಟೀಂ ಆಗಲಿ, ರಾಮೋಜಿ ಟಾಕೀಸ್‌ ಕಡೆಯಿಂದ ಆಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಭವಿಷ್ಯದ ಎಪಿಸೋಡ್‌ಗಳು ನೋಡಿದ ನಂತರವಷ್ಟೇ  ಸತ್ಯ ತಿಳಿಯಲಿದೆ.

Latest Videos

click me!