Karna Serial ರೋಚಕ ಎಪಿಸೋಡ್​: ಸೀರೆಯುಟ್ಟ ನೀರೆಯರ ಭರ್ಜರಿ ಫೈಟಿಂಗ್​- ಹಾರಿ ಹಾರಿ ಬಿದ್ದ ರೌಡಿಗಳು!

Published : Feb 25, 2026, 05:01 PM IST

 ಕರ್ಣ ಜೈಲು ಸೇರಿದ್ದಾನೆ. ಅವನನ್ನು ಪಾರು ಮಾಡಲು 'ಬ್ರಹ್ಮಗಂಟು', 'ಅಮೃತಧಾರೆ' ಸೇರಿದಂತೆ ವಿವಿಧ ಸೀರಿಯಲ್​ಗಳ ನಾಯಕಿಯರು ಒಂದಾಗಿದ್ದಾರೆ. ಅವರು ಸಾಕ್ಷಿದಾರರನ್ನು ರಕ್ಷಿಸಿದ್ದು, ಕರ್ಣನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಸಜ್ಜಾಗಿದ್ದಾರೆ.

PREV
16
ಆರೋಗ್ಯ ಸಚಿವನ ಕುತಂತ್ರ

ಕರ್ಣ ಸೀರಿಯಲ್​ನಲ್ಲಿ ಇದೀಗ ಕುತಂತ್ರಿಗಳ ಕುತಂತ್ರದಿಂದ ಕರ್ಣ ಜೈಲುಪಾಲಾಗಿದ್ದಾನೆ. ಅವನನ್ನು ಈ ಕೇಸ್​ನಲ್ಲಿ ಫಿಕ್ಸ್​ ಮಾಡಿ, ದೊಡ್ಡ ಜೈಲಿಗೆ ಕಳುಹಿಸುವಂತೆ ಆರೋಗ್ಯ ಸಚಿವ ಪೊಲೀಸರಿಗೆ ಆರ್ಡರ್​ ಕೊಟ್ಟೂ ಆಗಿದೆ. ಕರ್ಣ ತಪ್ಪು ಮಾಡದಿದ್ರೂ ಅವನನ್ನು ಫಿಕ್ಸ್​ ಮಾಡುವಂತೆ ಹೇಳಲಾಗಿದೆ.

26
ಸಾಕ್ಷಿದಾರರ ಕಿಡ್​ನ್ಯಾಪ್​

ಅದೇ ಇನ್ನೊಂದೆಡೆ, ಆಸ್ಪತ್ರೆಯಲ್ಲಿ ನಕಲಿ ಮಾತ್ರೆಗಳನ್ನು ಇಟ್ಟಿದ್ದು, ನಯನತಾರಾ ಆ್ಯಂಡ್​ ಗ್ಯಾಂಗ್​ ಎನ್ನುವುದರನ್ನು ಅರಿತಿರುವ ಮಹಿಳೆಯರನ್ನು ಕಿಡ್​ನ್ಯಾಪ್​ ಮಾಡಿಸಿ ಅವರನ್ನು ಕಟ್ಟಿ ಹಾಕಲಾಗಿದೆ.

36
ನಾಯಕಿಯರು ಒಗ್ಗಟ್ಟು

ಕರ್ಣನನ್ನು ಜೈಲಿನಿಂದ ಬಿಡಿಸಲು ವಿವಿಧ ಸೀರಿಯಲ್​ ನಾಯಕಿಯರು ಒಟ್ಟಿಗೇ ಬಂದಿದ್ದಾರೆ. ಬ್ರಹ್ಮಗಂಟು ದೀಪಾ, ಶ್ರಾವಣಿ ಸುಬ್ರಹ್ಮಣ್ಯ ಶ್ರಾವಣಿ, ಅಮೃತಧಾರೆ ಮಲ್ಲಿ, ಅಣ್ಣಯ್ಯ ರಾಣಿ ಎಲ್ಲರೂ ಬಂದಿದ್ದಾರೆ. ಇದು ವೀಕ್ಷಕರನ್ನು ರೋಮಾಂಚನಗೊಳಿಸಿದೆ.

46
ನೀರೆಯರ ಭರಾಟೆ

ಇದೇ ವೇಳೆ ರೌಡಿಗಳು ನಿತ್ಯಾಳನ್ನು ಸಾಯಿಸಲು ಹೋಗಿದ್ದಾರೆ. ಆ ಸಮಯದಲ್ಲಿ ಬಂದ ಉಳಿದ ಮಹಿಳಾಮಣಿಗಳು ಸೀರೆಯಲ್ಲಿಯೇ ಭರ್ಜರಿ ಫೈಟಿಂಗ್​ ಮಾಡಿದ್ದಾರೆ.

56
ಸೀರೆಯಲ್ಲಿಯೇ ಫೈಟಿಂಗ್​

ಅಮೃತಧಾರೆಯ ಮಲ್ಲಿ ಬಿಟ್ಟು ಉಳಿದವರೆಲ್ಲರೂ ಸೀರೆಯಲ್ಲಿಯೇ ಫೈಟಿಂಗ್​ ಮಾಡಿರುವುದು ವಿಶೇಷ. ಎಲ್ಲರೂ ರೌಡಿಗಳನ್ನು ಬಗ್ಗು ಬಡಿಸಿದ್ದಾರೆ.

66
ಸಾಬೀತು ಮಾಡಬೇಕಿದೆ

ಕಿಡ್​ನ್ಯಾಪ್​ ಮಾಡಿ ಇಡಲಾದ ಸಾಕ್ಷಿದಾರ ಮಹಿಳೆಯರನ್ನು ಇದೇ ನಾಯಕಿಯರು ಹೋಗಿ ಬಿಡಿಸಿಕೊಂಡು ಬಂದಿದ್ದಾರೆ. ಇನ್ನೇನಿದ್ದರೂ ಅವರ ಬಾಯಿಯಿಂದ ಸತ್ಯ ಹೇಳಿಸುವುದು, ಕರ್ಣನನ್ನು ನಿರಪರಾಧಿ ಎಂದು ಪ್ರೂವ್ ಮಾಡುವುದು ಬಾಕಿ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories