'ನಾ ನಿನ್ನ ಬಿಡಲಾರೆ' ಧಾರಾವಾಹಿಯ ನಿಗೂಢ ಶಂಭು ಪಾತ್ರಧಾರಿ ಸಂತೋಷ್ ಕರ್ಕಿ, ನಿಜ ಜೀವನದಲ್ಲಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಅವರ ಅಸಲಿ ರೂಪದಲ್ಲಿ ಅವರನ್ನು ಗುರುತಿಸುವುದು ಕಷ್ಟ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಇವರು 'ಗರುಡ ಪುರಾಣ' ಚಿತ್ರದಲ್ಲೂ ನಟಿಸಿದ್ದಾರೆ.
ಹರುಕು-ಮುರುಕು ಡ್ರೆಸ್. ಕೆದರಿದ ಕೂದಲು, ಕೈಯಲ್ಲಿ ಒಂದು ಕೋಲು. ಇರುವುದು ಸ್ಮಶಾನದಲ್ಲಿ. ಬಾಯಿ ಬಿಟ್ಟರೆ ಚಿತ್ರ- ವಿಚಿತ್ರ ನಿಗೂಢ ಮಾತು. ಭವಿಷ್ಯದ ಬಗ್ಗೆಯೂ ನುಡಿಯುವ ಚಾಣಾಕ್ಷತನ. ದೈವೀ ಭಕ್ತ, ದುಷ್ಟ ಶಕ್ತಿಯನ್ನು ಬಗ್ಗುಬಡಿಸುವ ಮಹಾಜೀವಿ... ಹೀಗೆ ಹೇಳುತ್ತಿದ್ದಂತೆಯೇ, ಸಿರಿಯಲ್ ಪ್ರಿಯರಿಗೆ ನಾ ನಿನ್ನ ಬಿಡಲಾರೆ (Naa Ninna Bidallare) ಸೀರಿಯಲ್ ಶಂಭು ವೇಷಧಾರಿ ಕಣ್ಣ ಮುಂದೆ ಬರುತ್ತಾನೆ.
26
ವಿಡಿಯೋ ವೈರಲ್
ಶಂಭು ಪಾತ್ರಧಾರಿಯ ರಿಯಲ್ ಹೆಸರು ಸಂತೋಷ್ ಕರ್ಕಿ (Shambhu urf Santosh Karki). ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಶಂಭು ಅವರು ರಿಯಲ್ ವೇಷದಲ್ಲಿ ಬಂದರೆ ಗುರುತು ಸಿಗುವುದೇ ಇಲ್ಲ ಬಿಡಿ! ಇದೀಗ ಅವರು, ಉಪ್ಪಿಗಿಂತ ರುಚಿ ಬೇರೆ ಇಲ್ಲ... ಹಿನ್ನೆಲೆಯಲ್ಲಿ ಹಾಕಿರುವ ಮೂರ್ನಾಲ್ಕು ಸೆಕೆಂಡ್ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡುತ್ತಿದೆ.
36
ಗುರುತೇ ಸಿಗಲ್ಲ
ಸಾಮಾನ್ಯವಾಗಿ, ಯಾವುದೇ ಪಾತ್ರಧಾರಿ ಇದ್ದರೂ, ಅವರು ಯಾವುದೇ ವೇಷದಲ್ಲಿ ಬಂದರೂ ಗುರುತಿಸಬಹುದು. ಆದರೆ ಶಂಭು ಪಾತ್ರ ಅದೆಷ್ಟು ವಿಚಿತ್ರವಾಗಿದೆ ಎಂದರೆ ಸಂತೋಷ್ ಅವರು ರಿಯಲ್ಲಾಗಿ ಬಂದು ನಾನೇ ಶಂಭು ಎಂದರೂ, ಇಲ್ಲಪ್ಪಾ ಎನ್ನುವವರೇ ಹೆಚ್ಚು.
ಇದಕ್ಕೆ ಈ ಹಿಂದೆ ಜೀ ಕುಟುಂಬ ಅವಾರ್ಡ್ಸ್ ಕೂಡ ಸಾಕ್ಷಿಯಾಗಿತ್ತು. ಇವರಿಗೆ ಜೀ ಕುಟುಂಬ ಅವಾರ್ಡ್ಸ್ನಲ್ಲಿ ಬೆಸ್ಟ್ ಅಪ್ಪ ಪ್ರಶಸ್ತಿ ಬಂದಾಗ, ಅವರ ವಿಟಿ ಒಂದನ್ನು ತೋರಿಸಲಾಗಿತ್ತು. ರಿಯಲ್ ವೇಷದಲ್ಲಿ ಹೋದಾಗ, ನಾನೇ ಶಂಭು ಎಂದರೂ ಜನರು ನಂಬಿರಲಿಲ್ಲ. ಶಂಭುವಿನ ವೇಷದಲ್ಲಿ ಹೋದಾಗ ಕೆಲವು ಮಹಿಳೆಯರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ್ದರು.
56
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್
ನಾಟಕಗಳಿಂದಲೂ ಫೇಮಸ್ ಆಗ್ತಿರೋ ಸಂತೋಷ್ ಅವರು, ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇದ್ದಾರೆ. ತಮ್ಮ ರಿಯಲ್ ಮತ್ತು ರೀಲ್ ಫ್ಯಾಮಿಲಿಗಳ ಜೊತೆ ರೀಲ್ಸ್ ಮಾಡುತ್ತಿರುತ್ತಾರೆ. ಹಲವು ಸಂದರ್ಭಗಳಲ್ಲಿ ಸಂತೋಷ್ ಅವರು ತಮ್ಮ ನಾ ನಿನ್ನ ಬಿಡಲಾರೆ ಸೀರಿಯಲ್ ಮಕ್ಕಳು ಹಾಗೂ ಇತರ ಕಲಾವಿದರ ಜೊತೆಯೂ ಶಂಭುವಿನ ವೇಷದಲ್ಲಿಯೇ ರೀಲ್ಸ್ ಮಾಡಿ ಹಂಚಿಕೊಳ್ಳುವುದು ಇದೆ.
66
ಗರುಡ ಪುರಾಣದಲ್ಲಿ ನಟನೆ
ಅಂದಹಾಗೆ, ಸಿನಿಮಾದಲ್ಲಿಯೂ ಇವರು ಮಿಂಚಿದ್ದಾರೆ. ಸಂತೋಷ್ ಕರ್ಕಿ ಅವರು 2023ರಲ್ಲಿ ಬಿಡುಗಡೆಯಾದ ಕನ್ನಡದ ಅಪರಾಧ ಥ್ರಿಲ್ಲರ್ ಚಲನಚಿತ್ರ "ಗರುಡ ಪುರಾಣ" ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಂಜುನಾಥ್ ಬಿ. ನಾಗಬಾ ನಿರ್ದೇಶನದ ಈ ಚಿತ್ರದಲ್ಲಿ ದಿಶಾ ಶೆಟ್ಟಿ, ಚೆಲುವರಾಜು ಮುಂತಾದವರು ಇದ್ದು, ಕೊಲೆ ರಹಸ್ಯದ ಸುತ್ತ ಕಥೆ ಸಾಗುತ್ತದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.