ಅಮೃತಧಾರೆ ಧಾರಾವಾಹಿಯಲ್ಲಿ (Amruthadhaare serial) ದಿನದಿಂದ ದಿನಕ್ಕೆ ಕುತಂತ್ರಿಗಳ ತಂತ್ರ ಹೆಚ್ಚುತ್ತಾ ಸಾಗುತ್ತಿದೆ. ಎಲ್ಲಾ ಆಸ್ತಿಯನ್ನು ತಮ್ಮದಾಗಿಸಲು ಬಯಸಿರುವ ಶಕುಂತಲಾ ಮತ್ತವರ ಅಣ್ಣ ಹಾಗೂ ಮಗ, ಹೇಗಾದರೂ ಮಾಡಿ ಆಸ್ತಿ ಹೊಡೆಯಲು ಬೇಕಾದ ಎಲ್ಲಾ ತಂತ್ರಗಳನ್ನು ಮಾಡ್ತಾ ಬರುತ್ತಿದ್ದಾರೆ. ಅದಕ್ಕೆ ಒಬ್ಬರನ್ನು ಸಾಯಿಸೋದಕ್ಕೂ ಹೇಸೋದಿಲ್ಲ ಈ ಜನ.
27
ಒಂದು ಕಡೆ ಜೈ ದೇವ್, ಅಪ್ಪನ ಆಸ್ತಿಯಲ್ಲಿ ಪಾಲು ಹೊಂದಿರುವ ಸುಧಾಳನ್ನು, ಅವಳ ಮಗುವನ್ನು ಕೊಲ್ಲೋದಕ್ಕೆ ನಿರ್ಧರಿಸಿ, ರೌಡಿಗಳಿಗೆ ಸುಪಾರಿ ಕೊಟ್ಟು ಕೊಲ್ಲಿಸೋ ಪ್ಲ್ಯಾನ್ ಮಾಡಿದ್ದ, ಆದರೆ, ಆಪದ್ಭಾಂಧವ ಸಚಿನ್ ನಿಂದ ಅವತ್ತು ಸುಧಾ, ಮಗು, ಭೂಮಿಕಾ ಬದುಕುಳಿದಿದ್ದರು.
37
ಭೂಮಿಕಾ ಗರ್ಭಿಣಿ (pregnant Bhoomika) ಎಂದು ತಿಳಿದ ಮೇಲೆ ನಿಂತಲ್ಲೆ ನಿಲ್ಲಲಾರದೆ ತೊಳಲಾಡುತ್ತಿರುವ ಶಕುಂತಲಾ ಮತ್ತು ಅಣ್ಣ, ಹೇಗಾದರು ಮಾಡಿ, ಭೂಮಿಕಾ ಹೊಟ್ಟೆಯಲ್ಲಿರುವ ಮಗುವನ್ನು ಸಾಯಿಸಬೇಕು ಎಂದು ಏನೇನೋ ಕುತಂತ್ರಗಳನ್ನು ಮಾಡುತ್ತಿದ್ದಾರೆ.
47
ಈ ಹಿಂದೆ ಹಾಲಿನಲ್ಲಿ ವಿಷವನ್ನು ಬೆರೆಸಿ, ಅದನ್ನು ಭೂಮಿಕಾಗೆ ಕುಡಿಯಲು ನೀಡಿದ್ದರು. ಆದರೆ ಅಷ್ಟ್ರಲ್ಲಿ ಮಲ್ಲಿ , ಭೂಮಿಕಾ ಅಮ್ಮ ಕಳುಹಿಸಿದ ಸಿಹಿ ತಿಂಡಿಗಳನ್ನೆಲ್ಲಾ ತಂದು ಭೂಮಿ ಮುಂದೆ ಇಟ್ಟಾಗ, ಅದನ್ನೆಲ್ಲಾ ತಿಂದ ಭೂಮಿ, ಹಾಲು ಕುಡಿಯದೇ ಹಾಗೆ ಉಳಿಸಿದ್ದಳು. ಅಲ್ಲೂ ಭೂಮಿ ಬಚಾವಾಗಿದ್ದಳು.
57
ಇದೀಗ ಭೂಮಿಯನ್ನು ಕೊಲ್ಲಲು, ಮೆಟ್ಟಿಲುಗಳ ಮೇಲೆ ನೀರು ಹಾಕಿ, ಅಲ್ಲಿಂದ ಎಲೆಕ್ಟ್ರಿಕ್ ವೈರ್ ನೀರಿಗೆ ಬೀಳುವಂತೆ ಮಾಡಿ, ಭೂಮಿಕಾ ಬರುವಾಗ ಶಾಕ್ ಹೊಡೆಯುವಂತೆ ಮಾಡಿದ್ದಳು. ಆದರೆ ಗೌತಮ್ ತಾಯಿ ಭಾಗ್ಯ ಶಕುಂತಲಾ ತಂತ್ರವನ್ನು ಅರಿತು, ತನ್ನನ್ನು ತಾನು ಅಪಾಯಕ್ಕೆ ನೂಕುವ ಮೂಲಕ ಭೂಮಿಕಾಳನ್ನು ರಕ್ಷಿಸಿದ್ದರು.
67
ಇದೆನ್ನೆಲ್ಲಾ ನೋಡಿ ಮನೆಯವರಿಗೆಲ್ಲಾ ಗಾಬರಿಯಾಗಿರೋದು ಸಾಮಾನ್ಯ. ಆದರೆ ಮಲ್ಲಿ ಮತ್ತಷ್ಟು ಸಿಡಿದೆದ್ದು, ಇದಕ್ಕೆಲ್ಲಾ ಕಾರಣ ಭೂಪತಿ ಎಂದು ಭೂಮಿಕಾ ಬಳಿ ಹೇಳಿದ್ದಾರೆ. ಅವನನ್ನು ಸುಮ್ಮನೆ ಬಿಡಬಾರದು ಅಂತ ಕೂಡ ಹೇಳಿದ್ದಾಳೆ.
77
ಮನೆಯವರ ತಂಟೆಗೆ ಬಂದ್ರೆ ಸುಮ್ಮನೆ ಕೂರದ ಮಲ್ಲಿ ಭೂಪತಿ ಮನೆಗೆ ಹೋಗಿ ಆತನಿಗೆ ವಾರ್ನಿಂಗ್ (Malli warns Bhoopati) ಕೊಟ್ಟಿದ್ದಾಳೆ. ಆತ ಎದುರಾಡಿದಾಗ, ಕತ್ತಿಯನ್ನು ತೆಗೆದು ಭೂಪತಿ ಕತ್ತಿಗೆ ಹಿಡಿದು ನಮ್ಮ ಮನೆಯವರ ತಂಟೆಗೆಬಂದ್ರೆ ಯಾರನ್ನೂ ನಾನು ಸುಮ್ಮನೆ ಬಿಡೋದಿಲ್ಲ ಎಂದಿದ್ದಾಳೆ. ಅಮ್ಮ -ಮಗಳ ಕದನ ಶುರುವಾಗಿದ್ದು ನೋಡಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಮುಂದೇನಾಗುತ್ತೆ ಕಾದು ನೋಡಬೇಕು.