ಈ ಲೇಖನದಲ್ಲಿ ರುಚಿಕರ ಮತ್ತು ಆರೋಗ್ಯಕರ ತರಕಾರಿ ದೋಸೆ ಮಾಡುವ ವಿಧಾನವನ್ನು ವಿವರಿಸಲಾಗಿದೆ. ದೋಸೆ ಹಿಟ್ಟು ಮತ್ತು ಕ್ಯಾರಟ್, ಸೌತೆಕಾಯಿ, ಈರುಳ್ಳಿಯಂತಹ ತರಕಾರಿಗಳನ್ನು ಬಳಸಿ, ಹಿಟ್ಟಿನಲ್ಲಿ ಮಿಶ್ರಣ ಮಾಡಿ ಅಥವಾ ದೋಸೆಯ ಮೇಲೆ ಉದುರಿಸಿ ಎರಡು ವಿಧಗಳಲ್ಲಿ ಇದನ್ನು ತಯಾರಿಸಬಹುದು.
ಮಸಾಲೆ, ಬೆಣ್ಣೆ, ಖಾಲಿ ದೋಸೆಯನ್ನು ಎಲ್ಲರ ಮನೆಯಲ್ಲಿಯೂ ಟ್ರೈ ಮಾಡಬಹುದು. ಇಂದು ನಾವು ನಿಮಗೆ ಪತ್ನಿ ನಿಧಿಗಾಗಿ ಡಾಕ್ಟರ್ ಕರ್ಣ ಮಾಡಿಕೊಟ್ಟ ರುಚಿಯಾದ ಮತ್ತು ಆರೋಗ್ಯಕರ ತರಕಾರಿ ದೋಸೆ ಮಾಡೋದು ಹೇಗೆ ಎಂದು ನೋಡೋಣ ಬನ್ನಿ.
25
ತರಕಾರಿ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು
ದೋಸೆ ಹಿಟ್ಟು, ಕ್ಯಾರಟ್ (ಗಜ್ಜರಿ), ಸೌತೆಕಾಯಿ, ಈರುಳ್ಳಿ, ಕೋತಂಬರಿ ಸೊಪ್ಪು, ಕರೀಬೇವು, ಟೊಮೆಟೋ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಡುಗೆಎಣ್ಣೆ ಅಥವಾ ತುಪ್ಪ
35
ತರಕಾರಿ ದೋಸೆ ಮಾಡುವ ವಿಧಾನ
ಮೊದಲಿಗೆ ಕ್ಯಾರಟ್, ಸೌತೆಕಾಯಿಯನ್ನು ತುರಿದುಕೊಳ್ಳಿ. ನಂತರ ಈರುಳ್ಳಿ, ಟೊಮೆಟೋ, ಹಸಿಮೆಣಸಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಹಾಗೆಯೇ ಕರೀಬೇವು ಮತ್ತು ಕೋತಂಬರಿ ಸೊಪ್ಪು ಸಹ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ. (ಇವುಗಳ ಜೊತೆ ನಿಮ್ಮಿಷ್ಟದ ತರಕಾರಿ ಸೇರಿಸಿಕೊಳ್ಳಿ). ಎರಡು ವಿಧಾನದಲ್ಲಿ ಈ ದೋಸೆ ಮಾಡಿಕೊಳ್ಳಿ.
ಈ ವಿಧಾನದಲ್ಲಿ ಕತ್ತರಿಸಿಕೊಂಡಿರುವ ಎಲ್ಲಾ ತರಕಾರಿಯನ್ನು ಹಿಟ್ಟಿನಲ್ಲಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕಾವಲಿ ಬಿಸಿಯಾದ್ಮೇಲೆ ತರಕಾರಿ ಮಿಶ್ರಿತ ದೋಸೆಹಿಟ್ಟನ್ನು ಹಾಕಿ. ನಂತರ ಮೇಲೆ ತುಪ್ಪ ಅಥವಾ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ 2 ರಿಂದ 3 ನಿಮಿಷ ಬೇಯಿಸಿಕೊಳ್ಳಿ. ತದನಂತರ ಮುಚ್ಚಳ ತೆಗೆದು ಎರಡೂ ಬದಿಯಲ್ಲಿ ಬೇಯಿಸಿಕೊಂಡ್ರೆ ತರಕಾರಿ ದೋಸೆ ಸವಿಯಲು ರೆಡಿ
55
ಎರಡನೇ ವಿಧಾನ
ಈ ವಿಧಾನದಲ್ಲಿ ಕಾವಲಿ ಮೇಲೆ ಹಿಟ್ಟನ್ನು ಸೆಟ್ ದೋಸೆಯಂದೆ ದಪ್ಪವಾಗಿ ಹಾಕಿಕೊಳ್ಳಿ. ಈಗ ಕತ್ತರಿಸಿಕೊಂಡಿರುವ ತರಕಾರಿಗಳನ್ನು ದೋಸೆ ಮೇಲೆ ಹಾಕಿ, ಕೈಯಿಂದ ಒತ್ತಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿಕೊಂಡ್ರೆ ರುಚಿಯಾದ ತರಕಾರಿ ದೋಸೆ ಸವಿಯಲು ಸಿದ್ಧವಾಗುತ್ತದೆ. ಟೊಮೆಟೋ ಅಥವಾ ತೆಂಗಿನಕಾಯಿ ಚಟ್ನಿ ಜೊತೆ ದೋಸೆ ಸವಿಯಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.