ಹವಾಮಾನ ವೈಪರೀತ್ಯ ಅಥವಾ ಹೆಚ್ಚು ದಿನಗಳಾದಾಗ ದೋಸೆ ಹಿಟ್ಟು ಅತಿಯಾಗಿ ಹುಳಿಯಾಗುತ್ತದೆ. ಇಂತಹ ಹಿಟ್ಟಿನಿಂದ ದೋಸೆ ಮಾಡಿದರೆ ರುಚಿ ಇರುವುದಿಲ್ಲ. ಆಗ ಹಿಟ್ಟು ವ್ಯರ್ಥ ಮಾಡಬೇಡಿ, ಈ ಸರಳ ಹ್ಯಾಕ್ ಬಳಸಿ.
kitchen Sep 05 2026
Author: Ashwini HR Image Credits:AI Image
Kannada
ಮೊದಲು ನೀರು ಹಾಕಿ
ಹುಳಿಯಾಗಿರುವ ದೋಸೆ ಹಿಟ್ಟಿನ ಪಾತ್ರೆಗೆ ಸುಮಾರು ಒಂದು ಲೀಟರ್ ಅಥವಾ ಹಿಟ್ಟಿನ ಪ್ರಮಾಣಕ್ಕೆ ತಕ್ಕಂತೆ ನೀರನ್ನು (Normal Water) ಸೇರಿಸಿ.
Image credits: Getty
Kannada
ಚೆನ್ನಾಗಿ ಕಲಕಿ
ನೀರು ಹಾಕಿದ ನಂತರ ಸೌಟಿನಿಂದ ಹಿಟ್ಟನ್ನು ಚೆನ್ನಾಗಿ ಕಲಕಿ. ಹಿಟ್ಟು ಮತ್ತು ನೀರು ಸಂಪೂರ್ಣವಾಗಿ ಒಂದಾಗಲಿ.
Image credits: Gemini
Kannada
10 ನಿಮಿಷ ಹಾಗೆಯೇ ಬಿಡಿ
ಕಲಕಿದ ನಂತರ ಮಿಶ್ರಣವನ್ನು ಕನಿಷ್ಠ 10 ನಿಮಿಷಗಳ ಕಾಲ ಮುಟ್ಟಬೇಡಿ. ಹಿಟ್ಟು ತಳಭಾಗದಲ್ಲಿ ಕುಳಿತುಕೊಳ್ಳುತ್ತದೆ ಮತ್ತು ಹುಳಿ ಅಂಶವಿರುವ ನೀರು ಮೇಲೆ ಬರುತ್ತದೆ.
Image credits: Instagram
Kannada
ಮೇಲಿನ ನೀರನ್ನು ಚೆಲ್ಲಿ ಬಿಡಿ
ಪಾತ್ರೆಯನ್ನು ಜಾಗರೂಕತೆಯಿಂದ ಬಗ್ಗಿಸಿ, ಮೇಲಿರುವ ತಿಳಿ ನೀರನ್ನು ಮಾತ್ರ ಬಸಿದುಕೊಳ್ಳಿ (ಚೆಲ್ಲಿ ಬಿಡಿ). ಕೆಳಗಿರುವ ಗಟ್ಟಿ ಹಿಟ್ಟು ಪಾತ್ರೆಯಲ್ಲೇ ಇರಲಿ.
Image credits: Gemini
Kannada
ಈಗ ಹಿಟ್ಟು ದೋಸೆಗೆ ರೆಡಿ!
ಈಗ ಪಾತ್ರೆಯಲ್ಲಿ ಉಳಿದಿರುವ ಹಿಟ್ಟನ್ನು ಉಪಯೋಗಿಸಿ. ಈಗ ಹುಳಿ ಅಂಶ ಗಣನೀಯವಾಗಿ ಕಡಿಮೆಯಾಗಿರುತ್ತದೆ ಮತ್ತು ದೋಸೆ ಅತ್ಯಂತ ರುಚಿಯಾಗಿ ಬರುತ್ತದೆ.