'ಅಮೃತಧಾರೆ' ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದ್ದು, ಜೈದೇವ್ ಪಾತ್ರದ ಅಂತ್ಯವಾಗಿದೆ. ಇದರ ನಡುವೆ ಬಿಡುಗಡೆಯಾದ ಹೊಸ ಪ್ರೊಮೋ, ಗೌತಮ್ ಪಾತ್ರಕ್ಕೆ ಹೊಸ ನಟನ ಆಗಮನದ ಬಗ್ಗೆ ಸುಳಿವು ನೀಡುತ್ತಿದ್ದು, ರಾಜೇಶ್ ನಟರಂಗ ಧಾರಾವಾಹಿ ಬಿಡುತ್ತಾರೆಯೇ ಎಂಬ ಚರ್ಚೆ ಹುಟ್ಟುಹಾಕಿದೆ.
ಅಮೃತಧಾರೆ ಸೀರಿಯಲ್ (Amruthadhaare Serial) ಸದ್ಯ ಕುತೂಹಲ ಹಂತ ತಲುಪಿದೆ. ಇನ್ನೇನು ಸೀರಿಯಲ್ ಮುಗಿಯತ್ತೆ, ಮುಗಿಯತ್ತೆ ಎನ್ನೋವಾಗ್ಲೇ ಮತ್ತೊಂದು, ಇನ್ನೊಂದು ರೋಚಕತೆ ತಂದು ಸೀರಿಯಲ್ ಎಳೆಯಲಾಗುತ್ತಿದೆ.
26
ಜೈದೇವ್ ಅಂತ್ಯ
ಇದರ ನಡುವೆಯೇ ಜೈದೇವನ ಅಂತ್ಯ ಹಾಡಿದಂತೆ ತೋರಿಸಲಾಗಿದೆ. ಮಿಂಚುವನ್ನು ಜೈದೇವ್ ಕಿಡ್ನ್ಯಾಪ್ ಮಾಡಿದಾಗ, ಜೀವನ ಕೈಯಿಂದ ಅವನ ಕೊಲೆಯಾದಂತೆ ತೋರಿಸಲಾಗಿದ್ದು, ಅವನನ್ನು ಹೂತು ಕೂಡ ಆಗಿದೆ.
36
ಬದುಕಿ ಬರ್ತಾನಾ?
ಆದರೆ ಜೈದೇವ ಬದುಕಿ ಬರ್ತಾನಾ ಎನ್ನುವ ಕುತೂಹಲ ಕೂಡ ಇದೆ. ಇದಕ್ಕೆ ಕಾರಣ, ಜೈದೇವನ ಪಾತ್ರ ಇಲ್ಲದೇ ಹೋದರೆ ಈ ಸೀರಿಯಲ್ಗೆ ಕಳೆಯೇ ಇಲ್ಲ.
ಆದರೆ, ಇವೆಲ್ಲವುಗಳಿಗಿಂತಲೂ ಮುಖ್ಯವಾಗಿ, ಗೌತಮ್ ಪಾತ್ರಕ್ಕೆ ಬೇರೆ ನಟನ ಎಂಟ್ರಿ ಆಗಲಿದೆಯೇ ಎನ್ನುವ ಸಂದೇಹವೂ ಕಾಡುತ್ತಿದೆ. ಇದಕ್ಕೆ ಕಾರಣ, ಬಿಡುಗಡೆಯಾಗಿರುವ ಹೊಸ ಪ್ರೊಮೋ.
56
ಪ್ರಶ್ನಾರ್ಥಕ ಚಿಹ್ನೆ
ಇದರಲ್ಲಿ ಭೂಮಿಕಾಳನ್ನಷ್ಟೇ ತೋರಿಸಲಾಗಿದ್ದು, ಪಕ್ಕದಲ್ಲಿ ಪ್ರಶ್ನಾರ್ಥಕ ಚಿಹ್ನೆ ಇಡಲಾಗಿದೆ. ಹೊಸ ಅಧ್ಯಾಯ ಎಂದು ತೋರಿಸಲಾಗಿದೆ. ಹಾಗಿದ್ದರೆ ಗೌತಮ್ ಪಾತ್ರ ಬದಲಾಗ್ತಿದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ.
66
ರಾಜೇಶ್ ನಟರಂಗ ಸೀರಿಯಲ್ ಬಿಡ್ತಾರಾ?
ಇದಾಗಲೇ ಗೌತಮ್ ಪಾತ್ರಧಾರಿ ರಾಜೇಶ್ ನಟರಂಗ ಅವರು, ಬೇರೆ ಬೇರೆ ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡಿದ್ದು, ಅದರಲ್ಲಿ ಬಿಜಿಯಾಗಿದ್ದಾರೆ. ಸೀರಿಯಲ್ನಲ್ಲಿ ಸದ್ಯ ಗೌತಮ್ನನ್ನು ಫಾರಿನ್ಗೆ ಕಳುಹಿಸಲಾಗಿದೆ. ಈ ಎಲ್ಲಾ ಘಟನೆ ನೋಡಿದರೆ, ಹೊಸ ಪ್ರೊಮೋ ಬೇರೆಯದ್ದೇ ಹಿಂಟ್ ಕೊಡುತ್ತಿದೆ ಎಂದು ಎನ್ನಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.