Madhu Gowda Seemantha: ಚಿನ್ನದ ಬೆಲೆ ಗಗನಕ್ಕೇರುತ್ತಿದ್ದರೂ, ಜನಪ್ರಿಯ ಯೂಟ್ಯೂಬರ್ ಮಧು ಗೌಡ ತಮ್ಮ ಸೀಮಂತಕ್ಕಾಗಿ ಭರ್ಜರಿ ಜ್ಯುವೆಲರಿ ಶಾಪಿಂಗ್ ಮಾಡಿದ್ದಾರೆ. ಅವರ ಈ ಆಭರಣದ ಕಲೆಕ್ಷನ್ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಚಿನ್ನದ ಆಭರಣಗಳ ಶಾಪಿಂಗ್ ಸೀಮಂತದ ಸಂಭ್ರಮದಲ್ಲಿರುವ ಜನಪ್ರಿಯ ಯೂಟ್ಯೂಬರ್ ಮಧು ಗೌಡ ಇತ್ತೀಚೆಗಷ್ಟೇ ಮಾಡಿದ ಆಭರಣಗಳ ಶಾಪಿಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೈಸೂರಿನ ಪ್ರತಿಷ್ಠಿತ ಚಿನ್ನದ ಮಳಿಗೆಗೆ ಭೇಟಿ ನೀಡಿದ ಮಧು, ತಮಗೆ ಬೇಕಾದ ವಿಶಿಷ್ಟ ಡಿಸೈನ್ಸ್ ಆಯ್ಕೆ ಮಾಡಿದ್ದಾರೆ.
27
ಪರ್ಲ್ ಮತ್ತು ಸ್ಟೋನ್ ವರ್ಕ್
ಪರ್ಲ್ ಮತ್ತು ಸ್ಟೋನ್ ವರ್ಕ್ ಮಧು ಗೌಡ ಅವರು ತಮ್ಮ ಸೀಮಂತಕ್ಕೆ ಅತ್ಯಂತ ವಿಭಿನ್ನವಾದ (Unique) ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದು, ಆ ಸೀರೆಗೆ ಸಾಂಪ್ರದಾಯಿಕ ಒಡವೆಗಳು ಮ್ಯಾಚ್ ಆಗುವುದಿಲ್ಲವೆಂದು ವಿಶೇಷವಾದ ಪರ್ಲ್ (ಮುತ್ತು) ಮತ್ತು ಸ್ಟೋನ್ ವರ್ಕ್ ಇರುವ ಆಭರಣಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
37
ಫೈನಲೈಸ್ ಆಯ್ತು ಜ್ಯುವೆಲರಿ
ಫೈನಲೈಸ್ ಆಯ್ತು ಜ್ಯುವೆಲರಿ ಮಳಿಗೆಯಲ್ಲಿ ನವಿಲಿನ ವಿನ್ಯಾಸವಿರುವ (Peacock Design) ಶಾರ್ಟ್ ಹಾರ ಹಾಗೂ ಅದಕ್ಕೆ ಮ್ಯಾಚ್ ಆಗುವಂತಹ ಉದ್ದನೆಯ ಹಾರಗಳನ್ನು (Long Haram) ಅವರು ಟ್ರೈ ಮಾಡಿದ್ದಾರೆ. "ನಾನು ದಪ್ಪ ಆಗಿರುವುದರಿಂದ ತುಂಬಾ ಅಗಲವಾದ ಒಡವೆ ಹಾಕಿಕೊಂಡರೆ ಚೆನ್ನಾಗಿ ಕಾಣುವುದಿಲ್ಲ" ಎಂದು ತಮಾಷೆ ಮಾಡುತ್ತಲೇ ತಮಗೆ ಒಪ್ಪುವಂತಹ ಆಭರಣಗಳನ್ನು ಫೈನಲೈಸ್ ಮಾಡಿದ್ದಾರೆ.
ಸಹಾಯ ಮಾಡಿದ ನಿಶಾ ಮತ್ತು ದೀಪ್ತಿ ಶಾಪಿಂಗ್ ವೇಳೆ ಮಧು ಗೌಡ ಅವರ ಮುಂದೆ ಸುಮಾರು 450 ರಿಂದ 500 ಗ್ರಾಂ ತೂಕದ ವಿವಿಧ ಆಭರಣಗಳಿದ್ದ ಟ್ರೇ ಇಡಲಾಗಿತ್ತು. "ನೋಡ್ರಿಪ್ಪಾ, ಕಣ್ಣು ತುಂಬಿಸಿಕೊಳ್ಳಿ" ಎಂದು ತಮಾಷೆ ಮಾಡಿದ ಮಧು, ಇಷ್ಟೊಂದು ಒಡವೆಗಳ ನಡುವೆ ತಮಗೆ ಬೇಕಾದ ಬೆಸ್ಟ್ ಪೀಸ್ ಆರಿಸಲು ನಿಶಾ ಮತ್ತು ದೀಪ್ತಿ ಅವರ ಸಹಾಯ ಪಡೆದರು.
57
ವಿಭಿನ್ನವಾದ ಆಭರಣ
ವಿಭಿನ್ನವಾದ ಆಭರಣ ಮದುವೆಯಲ್ಲಿ ಗ್ರೀನ್ ಬೀಡ್ಸ್ ಹಾಕಿದ್ದ ಕಾರಣ, ಈ ಬಾರಿ ಸ್ವಲ್ಪ ವಿಭಿನ್ನವಾಗಿ ಮುತ್ತುಗಳು ಮತ್ತು ಹಳದಿ ಬಣ್ಣದ ಸೀರೆಗೆ ಕಾಂಪ್ಲಿಮೆಂಟ್ ನೀಡುವಂತಹ ಆಭರಣಗಳನ್ನು ಅವರು ಗಮನಿಸಿದ್ದಾರೆ.
67
ಅಪ್ಪಟ ಚಿನ್ನ ರೀ ಎಂದ ಮಧು
ಅಪ್ಪಟ ಚಿನ್ನ ರೀ ಎಂದ ಮಧು ಶಾಪಿಂಗ್ ವಿಡಿಯೋ ನೋಡಿ ಯಾರೂ ಕನ್ಫ್ಯೂಸ್ ಆಗಬಾರದು ಎಂದು "ನಾನು ತಗೋತಾ ಇರೋದು ಅಪ್ಪಟ ಚಿನ್ನ (Gold), ಇದು ಆರ್ಟಿಫಿಶಿಯಲ್ ಅಲ್ಲ" ಎಂದು ತಮ್ಮ ಸ್ಟೈಲ್‌ನಲ್ಲೇ ಸ್ಪಷ್ಟನೆ ನೀಡಿದ್ದಾರೆ.
77
ಚಿನ್ನದ ಬೆಲೆ ಏರಿಕೆಯ ನಡುವೆಯೂ ಖರೀದಿ
ಚಿನ್ನದ ಬೆಲೆ ಏರಿಕೆಯ ನಡುವೆಯೂ ಖರೀದಿ ಚಿನ್ನದ ಬೆಲೆ ಏರಿಕೆಯ ನಡುವೆಯೂ ತಮ್ಮ ಕನಸಿನ ಸೀಮಂತಕ್ಕಾಗಿ ಮಧು ಗೌಡ ಅವರು ನೆಚ್ಚಿನ ಆಭರಣಗಳನ್ನು ಖರೀದಿಸಿದ್ದಾರೆ. ಇವರ ಈ ಜ್ಯುವೆಲರಿ ಕಲೆಕ್ಷನ್ ನೋಡಿ ಅಭಿಮಾನಿಗಳು "ಸೀಮಂತದ ದಿನ ನೀವು ಮಹಾಲಕ್ಷ್ಮಿಯಂತೆ ಕಾಣುವುದು ಖಂಡಿತ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.