Amruthadhaare: ಹೆಡ್ ಶೇವ್ ಬಳಿಕ ಭೂಮಿ ತೂಕದ ಮಾತುಗಳನ್ನಾಡಿ ನೋವು ಮರೆಸಿದ ಭೂಮಿಕಾ

Published : Aug 04, 2026, 08:22 AM IST

ಅಮೃತಧಾರೆ ಧಾರಾವಾಹಿಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಭೂಮಿಕಾ, ಚಿಕಿತ್ಸೆಗಾಗಿ ತನ್ನ ಕೂದಲನ್ನು ತೆಗೆಸಿದ್ದಾಳೆ. ಈ ಸಂಕಷ್ಟದ ಸಮಯದಲ್ಲೂ ಧೈರ್ಯದಿಂದ ಮಾತನಾಡಿ ಎಲ್ಲರನ್ನೂ ಸಮಾಧಾನಪಡಿಸಿದ್ದು, ಪತಿ ಗೌತಮ್ ಆಕೆಯ ಆರೈಕೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾನೆ.

PREV
15
ಅಮೃತಧಾರೆ ಸೀರಿಯಲ್

ಅಮೃತಧಾರೆಯ ಭೂಮಿಕಾ ಕ್ಯಾನ್ಸರ್‌ಗೆ ತುತ್ತಾಗಿರೋ ವಿಷಯ ಮನೆಯ ಎಲ್ಲಾ ಸದಸ್ಯರಿಗೂ ಗೊತ್ತಾಗಿದೆ. ಎಲ್ಲಾ ಕೆಲಸಗಳನ್ನು ಸೋದರ ಪಾರ್ಥ ಮತ್ತು ಗೆಳೆಯ ಆನಂದ್‌ ಹೆಗಲಿಗೆ ವರ್ಗಾಯಿಸಿರುವ ಗೌತಮ್, ಸಂಪೂರ್ಣವಾಗಿ ಪತ್ನಿ ಆರೈಕೆಯಲ್ಲಿ ತೊಡಗಿಕೊಂಡಿದ್ದಾನೆ. ಈ ನಡುವೆ ಭೂಮಿಕಾ ತನ್ನ ಕೂದಲು ತೆಗೆಸಿದ್ದಾಳೆ.

25
ಮನೆ ಮಂದಿಯೆಲ್ಲಾ ಭಾವುಕ

ಸುಂದರವಾದ ಕೂದಲು ತೆಗೆದು ಕ್ಲೀನ್‌ಶೇವ್ ಬಳಿಕ ಭೂಮಿಕಾ ಭೂಮಿ ತೂಕದ ಮಾತುಗಳನ್ನಾಡಿದ್ದಾಳೆ. ಭೂಮಿಕಾ ಮಾತುಗಳನ್ನು ಕೇಳಿ ಗೌತಮ್, ಮಲ್ಲಿ ಮತ್ತು ಪಾರ್ಥ್ ಅಚ್ಚರಿಗೊಂಡಿದ್ದಾರೆ. ನೀವು ಮಾತ್ರ ಇಂಥಾ ಟೈಮ್‌ನಲ್ಲಿ ಜೋಕ್ ಮಾಡಲು ಸಾಧ್ಯ ಎಂದು ಹೇಳಿ ಪಾರ್ಥ್ ಭಾವುಕನಾಗಿದ್ದಾನೆ. ಭೂಮಿಕಾ ಮಾತುಗಳನ್ನು ಕೇಳಿದ ಗೌತಮ್, ಸಂಕಷ್ಟದಲ್ಲಿಯೇ ನಗಲು ಪ್ರಯತ್ನಿಸಿದ್ದಾನೆ.

35
ಭೂಮಿಕಾ ಹೇಳಿದ ಮಾತು ಏನು?

ಹೆಡ್‌ ಶೇವ್ ಬಳಿಕ ಎಲ್ಲರ ಮುಂದೆ ಬಂದ ಭೂಮಿಕಾ, ಈ ಹೇರ್‌ಸ್ಟೈಲ್‌ನಲ್ಲಿ ನಾನು ಇಷ್ಟು ಮುದ್ದಾಗಿ ಕಾಣಿಸುತ್ತೇನೆ ಎಂದು ನಿಜಕ್ಕೂ ಅಂದ್ಕೊಂಡಿರಲಿಲ್ಲ. ಕನ್ನಡಿಯಲ್ಲಿ ಮುಖ ನೋಡಿಕೊಂಡು ಅಳೋದಕ್ಕೆ ಆಗುತ್ತಾ? ಬಂದಿರೋದನ್ನು ಎದುರಿಸುತ್ತಾ ಹೋಗುವುದೇ ಜೀವನ ಅಲ್ಲವಾ ಎಂದು ಎಲ್ಲರನ್ನು ಭೂಮಿಕಾ ಸಮಾಧಾನ ಮಾಡಿದ್ದಾಳೆ.

45
ಭೂಮಿಕಾ ತಾಯಿಯ ಕಣ್ಣೀರು

ಮಗಳು ಮಾರಣಾಂತಿಕ ಕಾಯಿಲೆಗೆ ತುತ್ತಾಗಿರೋ ವಿಷಯ ತಿಳಿದು ಭೂಮಿಕಾ ತಾಯಿ ಗಳಗಳನೇ ಅಳುತ್ತಿದ್ದಾಳೆ. ಅತ್ತೆಯನ್ನು ಸಂತೈಸಿರುವ ಗೌತಮ್, ಈಗ ತಾನೇ ಕಾಯಿಲೆ ವಿರುದ್ಧ ಮೊದಲ ಹೆಜ್ಜೆಯನ್ನಿಟ್ಟಿದ್ದಾಳೆ. ಚಿಕಿತ್ಸೆ ತೆಗೆದುಕೊಳ್ಳಲು ಒಪ್ಪಿಸಿದ್ದೇನೆ. ಈ ಸಮಯದಲ್ಲಿ ಭೂಮಿಕಾಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದ್ದಾನೆ.

55
ಗೌತಮ್ ಮನವಿ

ಇದು ಯಾಕಾಯ್ತು? ಹೇಗೆ ಆಯ್ತು? ಮುಂದೇನು ಎಂದು ಭೂಮಿಕಾಳನ್ನು ಪ್ರಶ್ನೆ ಮಾಡಿ. ಈ ಸಮಯದಲ್ಲಿ ಧೈರ್ಯದ ಮಾತುಗಳನ್ನಾಡಬೇಕು. ಭೂಮಿಕಾಳನ್ನು ಭಯಕ್ಕೆ ತಳ್ಳಬಾರದು. ಭೂಮಿಕಾಳ ದೇಹ ತುಂಬಾ ವೀಕ್ ಆಗಿದ್ದು, ಮನಸ್ಸು ಸಹ ತುಂಬಾ ಸೂಕ್ಷ್ಮವಾಗಿದೆ. ನಮ್ಮ ಒಂದು ಚಿಕ್ಕ ನೆಗೆಟಿವ್ ಮಾತು ಭೂಮಿಕಾ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ಯಾರು ಪ್ರಶ್ನೆ ಮಾಡಬೇಡಿ ಎಂದು ಗೌತಮ್ ಮನವಿ ಮಾಡಿಕೊಂಡಿದ್ದಾನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories