ಭಾಗ್ಯಲಕ್ಷ್ಮಿ ಸೀರಿಯಲ್ ಖ್ಯಾತಿಯ ಶ್ರೇಷ್ಠಾ (ಕಾವ್ಯಾ ಗೌಡ) ಮತ್ತು ತಾಂಡವ್ ರಾವ್ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ತಾಂಡವ್ ಅವರು ಕಾವ್ಯಾರನ್ನು ಹೊಗಳಿದ ಒಂದು ಸಣ್ಣ ಘಟನೆಯಿಂದಾಗಿ, ವೀಕ್ಷಕರು ಇವರಿಬ್ಬರ ನಡುವೆ ಪ್ರೀತಿ ಶುರುವಾಗಿದೆ ಎಂದು ಊಹಿಸುತ್ತಿದ್ದು, ಇವರನ್ನು ಜೋಡಿ ಮಾಡುತ್ತಿದ್ದಾರೆ.
ಭಾಗ್ಯಲಕ್ಷ್ಮಿ ಸೀರಿಯಲ್ (Bhagyalkashmi Serial) ಖ್ಯಾತಿಯ ಶ್ರೇಷ್ಠಾ ಉರ್ಫ್ ಕಾವ್ಯಾ ಗೌಡ ಅವರು ಬಿಗ್‌ಬಾಸ್ 13ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕುತೂಹಲ ಎನ್ನುವಂತೆ ಬಿಗ್ಬಾಸ್ಗೆ ನಟ ತಾಂಡವ್ ರಾಮ್ ಅವರ ಎಂಟ್ರಿಯಾಗಿದೆ.
26
ಲವ್ ಸೀನ್ ಬೇಕಲ್ಲಾ?
ಬಿಗ್‌ಬಾಸ್ ಎಂದ ಮೇಲೆ ಅಲ್ಲೊಂದು ಲವ್ ಸೀನ್ ಇರಲೇಬೇಕಲ್ಲಾ. ಅಲ್ಲಿ ಸ್ಪರ್ಧಿಗಳ ನಡುವೆ ಏನೂ ನಡೆಯದೇ ಹೋದರೂ, ವೀಕ್ಷಕರಂತೂ ಯಾರನ್ನು ಜೋಡಿ ಮಾಡುವುದು ಎಂದು ಕಾಯುತ್ತಲೇ ಇರುತ್ತಾರೆ.
36
ಟೀ-ಷರ್ಟ್ ಹೊಗಳಿಕೆ
ಈಗ ಅವರಿಗೆ ಸಿಕ್ಕಿರೋದು ಕಾವ್ಯಾ ಗೌಡ ಮತ್ತು ತಾಂಡವ್ ರಾಮ್. ಅಷ್ಟಕ್ಕೂ ಇವರೇನು ಲವ್ ಸೀನ್ ಕ್ರಿಯೇಟ್ ಮಾಡಲಿಲ್ಲ. ಬದಲಿಗೆ ತಾಂಡವ್ ಅವರು ಕಾವ್ಯಾ ಅವರಿಗೆ ನಿಮ್ಮ ಟೀ ಶರ್ಟ್ ಚೆನ್ನಾಗಿದೆ ಎಂದಿದ್ದಾರೆ. ಅದಕ್ಕೆ ಕಾವ್ಯಾ ಇದು ಟೀ-ಷರ್ಟ್ ಅಲ್ಲ ಎಂದಿದ್ದಾರೆ.
ಅದಕ್ಕೆ ತಾಂಡವ್, ಈ ಹುಡುಗಿಯರಿಗೆ ಕಾಂಪ್ಲಿಮೆಂಟ್ ಕೊಟ್ಟರೂ ತೆಗೆದುಕೊಳ್ಳಲು ಬರಲ್ಲ ಎಂದಾಗ, ಅಲ್ಲಿರುವ ಇತರ ಸ್ಪರ್ಧಿಗಳು, ನಟನ ಕಾಲೆಳೆದಿದ್ದಾರೆ. ಯಾಕೋ ಅತಿಯಾಯ್ತು ಅನ್ನಿಸ್ತಿಲ್ವಾ ಎಂದು ತಮಾಷೆ ಮಾಡಿದ್ದಾರೆ.
56
ಲವ್ ಶುರು?
ಇದರ ಪ್ರೊಮೋ ರಿಲೀಸ್ ಆಗುತ್ತಲೇ ಬಿಗ್‌ಬಾಸ್ ಮನೆಯಲ್ಲಿ ಲವ್ ಮ್ಯಾಟರ್ ಶುರುವಾಯ್ತು ಎಂದು ಹೇಳ್ತಿರೋ ನೆಟ್ಟಿಗರು, ಇದೀಗ ಇವರಿಬ್ಬರ ಜೋಡಿ ಮಾಡಿ ತಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದಾರೆ.
66
ಅಲ್ಲೂ ತಾಂಡವ್, ಇಲ್ಲೂ ತಾಂಡವ್?
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿಯೂ ಶ್ರೇಷ್ಠಾ ಮತ್ತು ತಾಂಡವ್ ಜೊತೆಯಾಗಿದ್ದರಿಂದ, ಇಲ್ಲಿಯೂ ತಾಂಡವ್ ಸಿಕ್ಕಿದ್ದಾರೆ ಎಂದು ತಮಾಷೆ ಮಾಡುತ್ತಿದ್ದು, ಇವರಿಬ್ಬರ ಜೋಡಿ ಚೆನ್ನಾಗಿದೆ ಎಂದು ಕಮೆಂಟ್ ಮಾಡಲು ಶುರುವಿಟ್ಟುಕೊಂಡಿದ್ದಾರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.