Actor Gaurav Khanna Akanksha Chamola Divorce: ಮದುವೆಯಾಗಿ 10 ವರ್ಷಗಳ ಬಳಿಕ ನಟ ಗೌರವ್ ಖನ್ನಾ, ಆಕಾಂಕ್ಷಾ ಛಮೋಲ ಅವರು ಡಿವೋರ್ಸ್ ಪಡೆಯಲಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ Lock UPP Season 2 ಶೋನಲ್ಲಿ ಆಕಾಂಕ್ಷಾ ಸ್ಪರ್ಧಿ. ಆ ವೇಳೆ ಅವರು ಡಿವೋರ್ಸ್ ವಿಷಯ ರಿವೀಲ್ ಮಾಡಿದ್ದಾರೆ.
"ನಾನು, ಗೌರವ್ ಡಿವೋರ್ಸ್ ಪಡೆಯುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ನಾವಿಬ್ಬರೂ ದೂರ ಆಗಿ ಬೇರೆ ಬೇರೆ ಮನೆಯಲ್ಲಿ ಬದುಕುತ್ತಿದ್ದೇವೆ. ನಾವು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ದೂರ ಇದ್ದರೆ ಪರಸ್ಪರ ನಮ್ಮಿಬ್ಬರಿಗೆ ಮಹತ್ವ ಗೊತ್ತಾಗುತ್ತದೆ ಎಂದು ಕುಟುಂಬಸ್ಥರು ಅಂದುಕೊಂಡರು. ಆದರೆ ನಮ್ಮಿಬ್ಬರ ಭವಿಷ್ಯ ಬೇರೆ ಬೇರೆ ಇದ್ದು, ನಮ್ಮಿಬ್ಬರ ಜೊತೆಗೆ ಮಾತ್ರ ಇಲ್ಲ. ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಇಲ್ಲ. ಬಿಗ್ ಬಾಸ್ ಟೈಮ್‌ನಿಂದಲೇ ಇದೆಲ್ಲ ಶುರು ಆಗಿತ್ತು. ಎಲ್ಲೇ ಹೋದರೂ ನಮ್ಮಿಬ್ಬರಿಗೆ ಗಂಡ-ಹೆಂಡತಿ ವೈಬ್ ಬರುತ್ತಿರಲಿಲ್ಲ" ಎಂದು ಆಕಾಂಕ್ಷಾ ಛಮೋಲ ಹೇಳಿದ್ದಾರೆ.
26
ಗೌರವ್ ಖನ್ನಾ ಸೀರಿಯಲ್ ನಟ
ಗೌರವ್ ಖನ್ನಾ ಅವರು ಹೀರೋ ಆಗಿದ್ದು, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದನ್ನು ಆಕಾಂಕ್ಷಾ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಇತ್ತು.
36
ಆಕಾಂಕ್ಷಾ ಅಟೆನ್ಶನ್ ಸೀಕರ್?
ಗೌರವ್ ಖನ್ನಾ ಹೋದಲ್ಲೆಲ್ಲ ಆಕಾಂಕ್ಷಾ ಬಂದು, ಅಟೆನ್ಶನ್ ಗಳಿಸುತ್ತಿದ್ದರು ಎನ್ನಲಾಗಿತ್ತು. ಅಷ್ಟೇ ಅಲ್ಲದೆ ಕ್ಯಾಮರಾ ಕಂಡಾಗೆಲ್ಲ ನಗೋದು, ಕುಣಿಯೋದು ನೋಡಿ ಸದಾ ಎಲ್ಲರೂ ನೆಗೆಟಿವ್ ಕಾಮೆಂಟ್ಸ್ ಮಾಡುತ್ತಿದ್ದರು.
ಆಕಾಂಕ್ಷಾ ಅವರು ಮಗು ಬೇಡ, ನನಗೆ ಮಗು ಇಷ್ಟ ಇಲ್ಲ ಎಂದು ಹೇಳಿದ್ದರು. ಆದರೆ ಗೌರವ್‌ಗೆ ಮಕ್ಕಳೆಂದರೆ ತುಂಬ ಇಷ್ಟ. ಈ ವಿಷಯ ಕೂಡ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಆಗಿತ್ತು.
56
ಗೌರವ್ ಅಭಿಮಾನಿಗಳಿಗ ಬೇಸರ
ಆಕಾಂಕ್ಷಾ ಅವರು ಇತ್ತೀಚೆಗೆ ಸಿಕ್ಕಾಪಟ್ಟೆ ರೊಮ್ಯಾನ್ಸ್ ಇರುವ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ಗೌರವ್ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಗೌರವ್ ಹೇಗೆ ಇದಕ್ಕೆಲ್ಲ ಅವಕಾಶ ಕೊಡ್ತಾರೆ ಎಂಬ ಪ್ರಶ್ನೆ ಬಂದಿತ್ತು.
66
ಗೌರವ್ ಏನೂ ಹೇಳಿಲ್ಲ
ಗೌರವ್ ಖನ್ನಾ ಅವರು ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಏನು ಹೇಳ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.